Thursday, 12th December 2024

ಗುಣಮುಖರಾದವರು ರಕ್ತದ ಪ್ಲಾಸ್ಮಾ ದಾನ ಮಾಡಿ

ಬೆಂಗಳೂರು

ಕರೋನಾ ಸೋಂಕಿನಿಂದ ಗುಣಮುಖರಾದವರು ತಮ್ಮ ರಕ್ತದಲ್ಲಿನ ಪ್ಲಾಸ್ಮಾವನ್ನು ಬೇರೆ ಸೋಂಕಿತರ ಚಿಕಿತ್ಸೆಗಾಗಿ ದಾನ ಮಾಡುವಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ಕರೋನಾ ಸೋಂಕಿತರ ಆರೋಗ್ಯ ರಕ್ಷಣೆಗಾಗಿ ನೂರಾರು ಮಂದಿ ಶ್ರಮಿಸಿದ್ದಾರೆ. ಅವರೆಲ್ಲರ ಋಣ ತೀರಿಸುವ ಕರ್ತವ್ಯವನ್ನು ನಿಭಾಯಿಸಲು ಗುಣಮುಖರು ತಮ್ಮ ಪ್ಲಾಸ್ಮಾ ದಾನ ಮಾಡಬೇಕೆಂದು ಸಿದ್ದರಾಮಯ್ಯ ಹೇಳಿದ್ದಾರೆ. ಇತ್ತೀಚೆಗೆ ರಾಜ್ಯದಲ್ಲಿ ಪ್ಲಾಸ್ಮಾವನ್ನು ಬಳಸಿ ಚಿಕಿತ್ಸೆ ನೀಡಿದ್ದು ರಾಜ್ಯದಲ್ಲಿ ಯಶಸ್ವಿಯಾಗಿತ್ತು. ಈ ಹಿನ್ನೆೆಲೆಯಲ್ಲಿ ಸಿದ್ದರಾಮಯ್ಯ ಈ ಮನವಿ ಮಾಡಿದ್ದಾರೆ.