Thursday, 12th December 2024

ಗುರುರಾಘವೇಂದ್ರ ಬ್ಯಾಾಂಕ್ ಅವ್ಯವಹಾರ ತನಿಖೆ ಸಿಐಡಿ ಹೆಗಲಿಗೆ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು
ನಗರದ ಬಸವನಗುಡಿ ಗುರುರಾಘವೇಂದ್ರ ಸಹಕಾರಿ ಬ್ಯಾಾಂಕಿನ ಹಣಕಾಸು  ಅವ್ಯವಹಾರ ಪ್ರಕರಣವನ್ನು ಎಸಿಬಿಯಿಂದ ಸಿಐಡಿಗೆ ವರ್ಗಾವಣೆ ಮಾಡಲಾಗಿದೆ.

ನೂರಾರು  ಕೋಟಿ ರು. ವಂಚನೆ ಪ್ರಕರಣದ ತನಿಖೆ ತೀವ್ರಗೊಳಿಸಲಾಗಿದೆ. ಹೈಕೋರ್ಟ್ ಸೂಚನೆಯ ಮೇರೆಗೆ  ಸಿಐಡಿಗೆ  ಹಸ್ತಾಾಂತರಿಸಿರುವುದಾಗಿ  ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್  ಅಧಿಕೃತ ಆದೇಶ ಹೊರಡಿಸಿದ್ದಾರೆ. ಇತ್ತೀಚೆಗೆ ವಜಾಗೊಂಡ ಬ್ಯಾಾಂಕಿನ ಆಡಳಿತ ಮಂಡಳಿ ವಿರುದ್ಧ ಬಸವನಗುಡಿ ಠಾಣೆಯಲ್ಲಿ ದಾಖಲಾಗಿದ್ದ ದೂರುಗಳನ್ನು ಈಗಾಗಲೇ ಸಿಐಡಿಗೆ ವರ್ಗಾಯಿಸಲಾಗಿತ್ತು. ಜತೆಗೆ  ಶ್ರೀ ಗುರು ರಾಘವೇಂದ್ರ ಬ್ಯಾಾಂಕಿನ ಕೇಂದ್ರ ಕಚೇರಿ ಸೇರಿ ಐದು ಕಡೆ ಎಸಿಬಿ ದಾಳಿ ನಡೆಸಿತ್ತು.

ಜತೆಗೆ  ಬ್ಯಾಾಂಕ್ ಅಧಿಕಾರಿಗಳು ತೆರೆದಿದ್ದಾರೆನ್ನಾಾಲಾದ ನಕಲಿ ಖಾತೆಗಳಿಗೆ ಸಂಬಂಧಿಸಿದ ದಾಖಲೆ,  ಬ್ಯಾಾಂಕ್ ನೀಡಿದ ಸಾಲದ ವಿವರ, ವಸೂಲಾಗದ ಸಾಲದ ದಾಖಲೆ, ಬ್ಯಾಾಂಕ್‌ನ ಕಂಪ್ಯೂಟರ್ ಡೇಟಾ  ಜಪ್ತಿ ಮಾಡಲಾಗಿತ್ತು. ಅವ್ಯವಹಾರದಲ್ಲಿ  ವಜಾಗೊಂಡಿರುವ ಆಡಳಿತ ಮಂಡಳಿ ಕೈವಾಡವಿದ್ದು, ಅಗತ್ಯ ಭದ್ರತೆ ಪಡೆಯದೆ 27 ಮಂದಿಗೆ  921  ಕೋಟಿ ರು. ಸಾಲ ನೀಡಿರುವುದು ಆರ್‌ಬಿಐ ಮತ್ತು ಸಹಕಾರ ಸಂಘಗಳ ರಿಜಿಸ್ಟ್ರಾಾರ್ ವಿಚಾರಣೆ ಹಾಗೂ ಎಸಿಬಿ ತನಿಖೆಯಿಂದ ಬಯಲಾಗಿತ್ತು.

ಇನ್ನು, ಆರ್‌ಬಿಐ ಅಧಿಕಾರಿಗಳು ಕಳೆದ ವಾರ ಬ್ಯಾಾಂಕ್ ಹಣಕಾಸು ಸ್ಥಿತಿಗತಿ ಕುರಿತು ಪರಿಶೀಲನೆ ನಡೆಸಿದ್ದರು. ಬ್ಯಾಾಂಕ್‌ನ ಅಧ್ಯಕ್ಷ ಕೆ. ರಾಮ ಕೃಷ್ಣ ( 78.80 ಕೋಟಿ ರು), ಉಪಾಧ್ಯಕ್ಷ ಟಿ.ಎಸ್. ಸತ್ಯನಾರಾಯಣ್ (24.04 ಕೋಟಿ ರು) ಮತ್ತು ಸಿಇಒ ಮಯ್ಯ (8.08 ಕೋಟಿ ರು) ಅವರಿಗೆ ಸಂಬಂಧಿಸಿದ ಸಾಲದ ಮೊತ್ತವೇ  111 ಕೋಟಿ ರು. ಇದೆ. ಈ ಮೂವರ ಮನೆಗಳ ಮೇಲಿನ ದಾಳಿಯ ಸಂದರ್ಭದಲ್ಲಿ ಆಸ್ತಿಪಾಸ್ತಿ ಸಂಬಂಧಿಸಿದ ದಾಖಲೆಗಳು ದೊರಕಿವೆ ಎಂದು ಎಸಿಬಿ ಮೂಲಗಳಿಂದ ತಿಳಿದು ಬಂದಿದೆ.