Sunday, 24th November 2024

ಜಲಮಂಡಳಿಯಿಂದ ನೀರಿನ ಪರೀಕ್ಷೆ

ವಿಶ್ವವಾಣಿ ಸುದ್ದಿಮನೆ
ಬೆಂಗಳೂರು

ಕರೋನಾದ ಹೊರತಾಗಿಯೂ ನೀರಿನ ಸೋರುವಿಕೆ ಹಾಗೂ ಕಾಲರಾದಂಥ ಕಾಯಿಲೆಗಳ ತಡೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ನೀರು ಸರಬರಾಜು ಮಂಡಳಿ ತಿಳಿಸಿದೆ.

ಇದಲ್ಲದೆ ಕಾಲರಾ ಮತ್ತು ಜಿ.ಇ. ಗೆ ಸಂಬಂಧಿಸಿದ ಮಾಹಿತಿಯನ್ನು ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯಿಂದ ಏ.01ರಿಂದ 27 ರವರೆಗೆ ನೋಂದಣಿಯಾದ ಪ್ರಕರಣಗಳ ಸ್ಥಳಗಳಿಂದ ನೀರಿನ ಮಾದರಿಯನ್ನು ಸಂಗ್ರಹಿಸಿದ್ದು, ಫಲಿತಾಂಶದ ಸಂಕ್ಷಿಪ್ತ ವಿವರ ನೀಡಲಾಗಿದೆ. ಒಟ್ಟು 65 ನೀರಿನ ಮಾದರಿಯನ್ನು ಸಂಗ್ರಹಿಸಿದ್ದು, 41 ಮಾದರಿಯ ಫಲಿತಾಂಶವು ಕುಡಿಯಲು ಯೋಗ್ಯವಾಗಿರುತ್ತದೆ.

ನಗರದಲ್ಲಿ ಕೋವಿಡ್ -19 ಹರಡುತ್ತಿರುವ ಹಿನ್ನೆಲೆಯಲ್ಲಿ ಅಂತರ ಕಾಯ್ದುಕೊಳ್ಳಬೇಕಾಗಿರುವ ಕಾರಣ ಜಲಮಂಡಳಿಯ ಮಾಪನ ಓದುಗರು ಮನೆಮನೆಗೆ ತೆರಳಿ ನೀರಿನ ಬಿಲ್‌ಅನ್ನು ವಿತರಿಸಲು ಸಾಧ್ಯವಾಗದಿರುವುದರಿಂದ ನೀರಿನ ಬಿಲ್‌ನ ಮಾಹಿತಿಯನ್ನು ಜಲಮಂಡಳಿಯಲ್ಲಿ ಲಭ್ಯವಿರುವ ಗ್ರಾಹಕರ ಮೊಬೈಲ್ ನಂಬರ್‌ಗಳಿಗೆ ದಿನವಹಿ ಎಸ್.ಎಂ.ಎಸ್.ಮುಖಾಂತರ ಕಳುಹಿಸಲಾಗುತ್ತಿದ್ದು, ಎಸ್.ಎಂ.ಎಸ್.ನಲ್ಲಿರುವ ಲಿಂಕ್ ಮುಖಾಂತರ ನೀರಿನ ಬಿಲ್‌ಅನ್ನು ಪಾವತಿಸಬಹುದಾಗಿರುತ್ತದೆ.

ಹೆಚ್ಚಿನ ಮಾಹಿತಿಗೆ ಜಲಮಂಡಳಿಯ ಅಧಿಕೃತ ವೆಬ್‌ಸೈಟ್ : www.bwssb.gov.in ಸಂಪರ್ಕಿಸಬಹುದಾಗಿದೆ. ಕುಂದು ಕೊರತೆಗಳಿಗೆ ಸಂಬಂಧಿಸಿದಂತೆ ಮಂಡಲಿಯ ಸಹಾಯವಾಣಿಯ ಸಂಖ್ಯೆೆ:22238888 ಹಾಗೂ 1916 ಮತ್ತು ವಾಟ್‌ಸ್‌‌ಆಪ್ ಸಂಖ್ಯೆೆ:8762228888 ಗೆ ಸಂಪರ್ಕಿಸಬಹುದಾಗಿದೆ.