Sunday, 15th December 2024

ಜಿಂದಾಲ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಜಿಲ್ಲಾಧಿಕಾರಿ ನಕುಲ್

ಕರೋನಾ ಸೊಂಕು ಪಸರಿಸದಂತೆ ಅಗತ್ಯಕ್ರಮ;

ತತ್‌ಕ್ಷಣ ಮಾಹಿತಿಗಳು ಒದಗಿಸಲು ಸೂಚನೆ

ಬಳ್ಳಾರಿ,

ಜಿಂದಾಲ್‌ನಲ್ಲಿ ಕೊರೊನಾ ಸೊಂಕು ಹರಡದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಕೊರೊನಾ ಕುರಿತು ಭಯಪಡದಂತೆ ಅಗತ್ಯ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಕಾರಖಾನೆಯಲ್ಲಿ ಕೊರೊನಾ ಕುರಿತ ಅಪ್ಡೇಟ್‌ಗಳನ್ನು ತಮ್ಮ ಸಿಬ್ಬಂದಿಗೆ ಎಸ್‌ಎಂಎಸ್ ಮತ್ತು ಟ್ವೀಟರ್ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ನೀಡಬೇಕು ಎಂದು ಅವರು ತಿಳಿಸಿದ್ದಾರೆ.

ತಮ್ಮ ಕಚೇರಿ ಮೂಲಕ ಜೂಮ್ ಮೂಲಕ ವಿಡಿಯೋ ಕಾನ್ಪರೆನ್ಸ್ ನಡೆಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.‌ ತಮ್ಮಲ್ಲಿ 30 ಸಾವಿರ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಅವರಿಗೆ ಪ್ರತಿನಿತ್ಯ ಕೊರೊನಾ ಕುರಿತ ಅಪ್ಡೇಟ್ ಮಾಹಿತಿ ಒದಗಿಸಬೇಕು. ಕಂಟ್ರೋಲ್ ರೂಂ ಸ್ಥಾಪಿಸಿ ಕೊರೊನಾ ಸಂಬAಧಿತ ಸಂದೇಹ ಹಾಗೂ ಗೊಂದಲಗಳನ್ನು ನಿವಾರಿಸಬೇಕು ಎಂದು ಅವರು ಸೂಚಿಸಿದರು.

ಜ್ವರ, ಕೆಮ್ಮು, ಶೀತದಂತ ಲಕ್ಷಣಗಳು ಕಂಡುಬAದಲ್ಲಿ ಹಾಗೂ ಉಸಿರಾಟದ ಸಮಸ್ಯೆ ಇರುವವರು ಮೂಗು ಮತ್ತು ಗಂಟಲು ದ್ರವ್ಯ ಸಂಗ್ರಹಿಸಿ ವಿಮ್ಸ್ ಲ್ಯಾಬ್ ಗೆ ಕಳುಹಿಸಬೇಕು. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಅವರು ನಿರ್ದೇಶಿಸಿದರು. ಜಿಂದಾಲ್‌ನಲ್ಲಿರುವ ಐಇಸಿ ಚಟುವಟಿಕೆಗಳನ್ನು ಬಲಪಡಿಸಬೇಕು. ಸಾಮಾಜಿಕ ಜಾಲತಾಣಗಳಾದ ಟ್ವೀಟರ್, ಫೇಸ್ಬುಕ್ ಇನ್ನೀತರವುಗಳ ಮೂಲಕ ಜನರಿಗೆ ತಿಳಿಸುವ ಕೆಲಸ ಮಾಡಿ ಎಂದು ಅವರು ಸೂಚಿಸಿದರು.

ಸೊಂಕಿತರೊಂದಿಗಿನ ಸಂಪರ್ಕಿತರಿಗೆ ಐಸೋಲೇಶನ್:
ಜಿಂದಾಲ್ ಕಾರಖಾನೆಯಲ್ಲಿರುವ ಸಿಎಂಡಿ ಮತ್ತು ಕೋರೆಕ್ಸ್ ವಿಭಾಗಗಳಲ್ಲಿ ಕೊರೊನಾ ಸೊಂಕಿತರಾಗಿ ಚಿಕಿತ್ಸೆ ಪಡೆಯುತ್ತಿರುವವರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಗುರುತಿಸಿ ಅವರನ್ನು ಈಗಾಗಲೇ ಪ್ರತ್ಯೇಕಗೊಳಿಸಿ ಐಸೋಲೇಶನ್‌ನಲ್ಲಿಡಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ತಿಳಿಸಿದ್ದಾರೆ.
ಇವರೆಲ್ಲರೂ ಒಂದೇ ಆಫೀಸ್ ಜಾಗವನ್ನು ಹಂಚಿಕೊಳ್ಳುತ್ತಿದ್ದರು ಎಂದು ತಿಳಿದುಬಂದ ಹಿನ್ನೆಲೆಯಲ್ಲಿ ಸಿಎಂಡಿಯಲ್ಲಿ ಶೇ.95ರಷ್ಟು ಜನರನ್ನು ಅಂದರೆ 87 ಜನರಲ್ಲಿ 83 ಜನರನ್ನು ಪ್ರತ್ಯೇಕಿಸಲಾಗಿದ್ದು, ಪ್ರಸ್ತುತ, ನಾಲ್ಕು ಜನರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಅವರು ವಿವರಿಸಿದ್ದಾರೆ.
ಕೊರೆಕ್ಸ್ ನಲ್ಲಿ 228 ಜನರಲ್ಲಿ 75 ಜನರನ್ನು ಐಸೋಲೇಶನ್ ಮಾಡಲಾಗಿದೆ. ಇನ್ನೂ 50 ಜನರಿದ್ದು ಅವರನ್ನು ಇಂದು ಮಧ್ಯಾಹ್ನದಿಂದಲೇ ಅವರಿಗೆ ಕಾರಖಾನೆಗೆ ಬರದಂತೆ ನಿರ್ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಸಿಎಂಡಿ ಮತ್ತು ಕೊರೆಕ್ಸ್ನಲ್ಲಿ ಡೆಪರುಮೆನಿಸ್, ಪಿಟಾಂಟ್‌ನ್ನು ಕಾರ್ಯಗತಗೊಳಿಸಲು ಅಗತ್ಯವಾದ ಕನಿಷ್ಟ ಸಿಬ್ಬಂದಿಯನ್ನು ಗುರುತಿಸಿದ್ದು, ಅವರ ಮೂಲಕ ಕಾರ್ಯಗತಗೊಳಿಸಲಾಗುತ್ತದೆ. ಸುಮಾರು 164 ಜನರಿಗೆ ಐಸೋಲೇಶನ್ ಮತ್ತು ಕ್ವಾರಂಟೈನ್ ಒದಗಿಸುವ ಹೆಚ್ಚುವರಿ ಸೌಲಭ್ಯಗಳನ್ನು ಜಿಂದಾಲ್ (ಎರಡು ಟೌನ್‌ಶಿಪ್‌ಗಳಾದ ವಿದ್ಯಾನಗರದಲ್ಲಿ ಸುಮಾರು 84 ಮತ್ತು ಎಚ್‌ಎಸ್‌ಟಿ 80) ನಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗಾಗಿ 130 ಹೆಚ್ಚುವರಿ ಐಸೋಲೇಶನ್‌ಗೆ ವ್ಯವಸ್ಥೆ ಮಾಡಲಾಗಿದೆ. ಕೋವಿಡ್ ಪ್ರಸರಣದಂತೆ ತಡೆಗಟ್ಟುವ ನಿಟ್ಟಿನಲ್ಲಿ ಮತ್ತು ಹರಡದಂತೆ ಅಗತ್ಯ ಕ್ರಮ ಕೈಗೊಳ್ಳಲು ಜಿಂದಾಲ್ ಗೆ ನಿರ್ದೇಶಿಸಲಾಗಿದ್ದು, ಅವರು ಅಗತ್ಯ ಕ್ರಮಕೈಗೊಳ್ಳುತ್ತಿದ್ದಾರೆ ಎಂದಿದ್ದಾರೆ.

ಜಿಂದಾಲ್ ಕಾರಖಾನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ಸುರಕ್ಷತೆ ಜತೆಗೆ ಕಾರಖಾನೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ಕೋವಿಡ್ ವಿರುದ್ಧದ ಹೋರಾಟದಲ್ಲಿ ಜಿಂದಾಲ್ ತನ್ನ ಪ್ರಯತ್ನ ಮುಂದುವರಿಸಲಿದೆ ಎಂದು ಜಿಲ್ಲಾಧಿಕಾರಿಗಳಿಗೆ ಬರೆದ ಪತ್ರದಲ್ಲಿ ಜಿಂದಾಲ್ ತಿಳಿಸಿದೆ.