Sunday, 15th December 2024

ಜುಲೈ 4ಕ್ಕೆೆ ಬಿಜೆಪಿ ಅಭಿಯಾನದ ಸಮಾರೋಪ: ಎನ್.ರವಿಕುಮಾರ್

ಬೆಂಗಳೂರು
ಕೇಂದ್ರ ಸರಕಾರದ ಒಂದು ವರ್ಷದ ಸಾಧನೆ ಹಾಗೂ ಕೋವಿಡ್-19ರ ಬಗ್ಗೆೆ ಜನ ಸಂಪರ್ಕ ಅಭಿಯಾನ ನಡೆಸಿದ್ದ ‘ಮನೆ ಮನೆ ಸಂಪರ್ಕ’, ವಿಡಿಯೊ ಕಾನ್ಫರ್ಸ‌ೆ ಮತ್ತು ವರ್ಚ್ಯುವಲ್ ರ್ಯಾಾಲಿಯ ಸಮಾರೋಪ ಸಮಾರಂಭ 4ರಂದು ನಡೆಯಲಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಒಟ್ಟು 427 ವರ್ಚ್ಯುವಲ್ ರಾಲಿ ನಡೆಸಲಾಗಿದೆ, ಈ ಪೈಕಿ ರಾಜ್ಯಮಟ್ಟದ ಒಂದು ರ್ಯಾಾಲಿಯಲ್ಲಿ 9,50,000 ಜನರು ಭಾಗವಹಿಸಿದ್ದರು. ಜಿಲ್ಲಾಮಟ್ಟದ 35 ಕಾನ್ಫರೆನ್‌ಸ್‌, ಮಂಡಲ ಮಟ್ಟದ 266 ವಿಡಿಯೊ ಕಾನ್ಫರೆನ್‌ಸ್‌ ನಡೆಸಲಾಗಿದ್ದು, ರಾಜ್ಯ ವಿವಿಧ ಮೋರ್ಚಾದ 97 ರ್ಯಾಲಿಗಳಲ್ಲಿ 29,100 ಮಂದಿ, ರಾಜ್ಯ ಫಲಾನುಭವಿಗಳ 28 ರ್ಯಾಾಲಿಗಳಲ್ಲಿ 28,421 ಮಂದಿ ಸೇರಿ ಒಟ್ಟು 10,51,526 ಮಂದಿ ಪಾಲ್ಗೊೊಂಡಿದ್ದರು ಎಂದರು.

ಮನೆ ಸಂಪರ್ಕ ಕಾರ್ಯಕ್ರಮದಲ್ಲಿ 42,83,069 ಮಂದಿಯನ್ನು ಹಾಗೂ ಸ್ವದೇಶಿ ಸಂಕಲ್ಪ ಕಾರ್ಯಕ್ರಮದಲ್ಲಿ 37,00,000 ಮನೆಗಳನ್ನು ಕ್ಷಿಂಪರ್ಕಿಸಲಾಗಿದೆ. ರಾಜ್ಯದಲ್ಲಿ ಒಟ್ಟು 427 ವಿಡಿಯೊ ಕಾನ್ಫರ್ಸ್ೆಗಳು ನಡೆದಿದ್ದು, ಅದರಲ್ಲಿ 176 ಗಂಟೆ 45 ನಿಮಿಷಗಳ ವಿಡಿಯೊ ಕಾನ್ಫರ್ಸ್‌ೆ ನಡೆದಿದೆ. ರಾಜ್ಯದಲ್ಲಿ 728 ಆಡಿಯೊ ಕಾನ್ಫರ್ಸ್ಗಳನ್ನು ನಡೆಸಲಾಗಿದೆ. ಇದರಲ್ಲಿ 17495 ಮಂದಿ ಭಾಗಿಯಾಗಿದ್ದರು. 111 ಗಂಟೆ 21 ನಿಮಿಷಗಳ ಕಾಲ ಚರ್ಚಿಸಲಾಗಿದೆ ಎಂದು ತಿಳಿಸಿದರು. ಜನ ಸಂಪರ್ಕ ಅಭಿಯಾನದಲ್ಲಿ 42,83,069 ಮನೆಗಳನ್ನು ಸಂಪರ್ಕಿಸಲಾಗಿದೆ.

1 ಕೋಟಿ 29 ಲಕ್ಷ ಜನರನ್ನು ಮನೆಗಳಲ್ಲಿ ಭೇಟಿ ಮಾಡಿ ಕರಪತ್ರ ನೀಡಿ ಕೇಂದ್ರ ಸರಕಾರದ ಒಂದು ವರ್ಷದ ಸಾಧನೆ ಮತ್ತು ಕೋವಿಡ್ ಬಗ್ಗೆೆ ಜಾಗೃತಿ ಮೂಡಿಸಲಾಗಿದೆ. ಅದೇ ರೀತಿ ಸಾಮಾಜಿಕ ಜಾಲತಾಣದ ಮೂಲಕ ಸುಮಾರು 11 ಲಕ್ಷ ಜನರನ್ನು ತಲುಪಲಾಗಿದೆ. ಒಟ್ಟು 1 ಕೋಟಿ 40 ಲಕ್ಷ ಜನರನ್ನು ಜನ ಸಂಪರ್ಕ ಅಭಿಯಾನದಲ್ಲಿ ತಲುಪಲಾಗಿದೆ. 5,13,035 ಜನ ಕಾರ್ಯಕರ್ತರು 23 ದಿನಗಳ ಅಭಿಯಾನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದರು.

ರಾಜ್ಯದಲ್ಲಿ ನಡೆದ ಜನಸಂಪರ್ಕ ಅಭಿಯಾನದ ಸಮಾರೋಪ ಸಮಾರಂಭ ಜುಲೈ 4ರಂದು ಸಂಜೆ 5 ಗಂಟೆಗೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ 50 ಲಕ್ಷ ಜನರು ಭಾಗವಹಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಈ ವರ್ಚ್ಯುವಲ್ ರಾಲಿಯಲ್ಲಿ ಭಾಷಣಕಾರರಾಗಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಮುಖ್ಯ ಅತಿಥಿಗಳಾಗಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ದಿಕ್ಸೂಚಿ ಭಾಷಣವನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ.ಮುರಳೀಧರ ರಾವ್, ಅಧ್ಯಕ್ಷತೆಯನ್ನು ರಾಜ್ಯಾಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.