Saturday, 14th December 2024

ಜೂ.5 ರಂದು ಪಶುವೈದ್ಯ ಸಂಸ್ಥೆೆಗಳಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ರಮ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು
ಶುಕ್ರವಾರ ನಡೆಯುವ ವಿಶ್ವ ಪರಿಸರ ದಿ ಪ್ರಯುಕ್ತ ರಾಜ್ಯಾಾದ್ಯಂತ ಇಲಾಖೆಯ  ಪಶುವೈದ್ಯ ಸಂಸ್ಥೆೆಗಳ ಆವರಣಗಳಲ್ಲಿ ಕನಿಷ್ಠ ಎರಡು ಗಿಡಗಳನ್ನು ಹಾಗೂ ಸಂಸ್ಥೆೆಯ  ಆವರಣದಲ್ಲಿರುವ ಸ್ಥಳಾವಕಾಶ ನೋಡಿ ಇನ್ನು ಹೆಚ್ಚಿಿನ ಗಿಡಗಳನ್ನು ನೆಡಲು ನಿರ್ದೇಶನ  ನೀಡಲಾಗಿದೆ ಎಂದು ಪಶುಸಂಗೋಪನೆ ಹಜ್ ಮತ್ತು ವಕ್‌ಫ್ ಸಚಿವ ಪ್ರಭು ಚವ್ಹಾಾಣ್  ತಿಳಿಸಿದ್ದಾರೆ.

ದೇಶ ಉಳಿಸಲು ಗಿಡ ಬೆಳೆಸಿ, ಹಸಿರ ಬೆಳೆಸಿ ಜಾನುವಾರ, ಗೋವು ಉಳಿಸಿ  ಎಂದು ಸಚಿವರು ರಾಜ್ಯದ ಪಶುವೈದ್ಯಕೀಯ ಸಂಸ್ಥೆೆಯ ಎಲ್ಲ ಸಿಬ್ಬಂದಿಗಳಿಗೆ ಕರೆ  ನೀಡಿದ್ದಾರೆ. ಇಲಾಖೆಯಲ್ಲಿರುವ  ಒಟ್ಟು 4218  ಪಶುವೈದ್ಯ ಸಂಸ್ಥೆೆಗಳು ಹಾಗೂ ಜಾನುವಾರು ಕ್ಷೇತ್ರಗಳನ್ನೊೊಳಗೊಂಡಂತೆ 30  ಜಿಲ್ಲೆಗಳಲ್ಲಿ  ಕನಿಷ್ಠ 500 ಸಸಿಗಳಂತೆ ರಾಜ್ಯಾಾದ್ಯಂತ ಹಲಸು, ಹೊಂಗೆ, ಬ್ಬೇವು, ಸಂಪಿಗೆ,  ನೇರಳೆ, ಹಲಸು, ಮಾವು, ಬೇವು, ಸಾಗವಾನಿ, ಬಾದಾಮ್, ಚೆರಿ, ಬಿಲ್‌ವಪತ್ರೆೆ, ಸೀತಾಫಲ  ಇತ್ಯಾಾದಿ ಜೂನ್ 5ನೇ ತಾರೀಖಿನಂದು ಬೆಳಿಗ್ಗೆೆ 9 ಘಂಟೆಗೆ ಏಕ ಕಾಲದಲ್ಲಿ ಪಶುವೈದ್ಯ  ಸಂಸ್ಥೆೆಗಳ ಆವರಣದಲ್ಲಿ ನೆಡಲಾಗುವುದು ಎಂದು ತಿಳಿಸಿದರು.

ವಿಶ್ವ  ಪರಿಸರ ದಿನಾಚರಣೆಯಂದು ಇಲಾಖೆಯ ಅಧಿಕಾರಿ ಮತ್ತು ನೌಕರರು ತಮ್ಮ ವ್ಯಾಾಪ್ತಿಿಗೆ ಬರುವ ಗ್ರಾಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯತಿಯ ಜನ ಪ್ರತಿನಿಧಿಗಳು,  ಅಧಿಕಾರಿಗಳು ಮತ್ತುಅರಣ್ಯಇಲಾಖೆಯ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಇದಕ್ಕೆೆ ಬೇಕಾದ  ಪೂರ್ವಭಾವಿ ತಯಾರಿ ಮಾಡಿಕೊಂಡು ಇಲಾಖೆಯ ಎಲ್ಲಾ ಪಶುವೈದ್ಯ ಸಂಸ್ಥೆೆಗಳ ಆವರಣದ ಸ್ವಚ್ಛತೆ  ಕಾಪಾಡಿಕೊಂಡು ಕೋವಿಡ್-19ರನ್ವಯ ಸರಕಾರದಿಂದ ಹೊರಡಿಸಿರುವ ಷರತ್ತು ಮತ್ತು ನಿಬಂದನೆಗಳ  ಉಲ್ಲಂಘನೆ ಆಗದಂತೆ ಎಚ್ಚರವಹಿಸಿ ಕ್ರಮಕೈಗೊಂಡುಕಾರ್ಯಕ್ರಮವನ್ನು ಯಶಸ್ವಿಿಗೊಳಿಸಲು ತಿಳಿಸಿದ್ದಾರೆ.