Thursday, 12th December 2024

ಜೆಡಿಎಸ್ ಬೆಂಬಲ ಇನ್ನೂ ನಿರ್ಣಯವಾಗಿಲ್ಲ: ಡಿ.ಕೆ.ಶಿವಕುಮಾರ್

ವಿಶ್ವವಾಣಿ ಸುದ್ದಿಮನೆ ಬೆಂಗಳೂರು
ಕಾಂಗ್ರೆೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆರನ್ನು ರಾಜ್ಯಸಭೆಗೆ ಅಭ್ಯರ್ಥಿಯನ್ನಾಾಗಿಸುವ  ಬಗ್ಗೆೆ ರಾಷ್ಟ್ರೀಯ ನಾಯಕರು ತೀರ್ಮಾನಿಸಿದ್ದು, ಜೆಡಿಎಸ್ ಅನ್ನು ಬೆಂಬಲಿಸುವ ಬಗ್ಗೆೆ  ಇನ್ನೂ ಯಾವುದೇ ನಿರ್ಣಯ ಕೈಗೊಂಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾಾರೆ.
ಕಾಂಗ್ರೆೆಸ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ  ಶಿವಕುಮಾರ್, ಜೆಡಿಎಸ್ ಇದುವರೆಗೂ ನಮ್ಮ ಬಳಿ ಬೆಂಬಲ ಕೇಳಿಲ್ಲ. ಪಕ್ಷದ ಅಧ್ಯಕ್ಷನಾಗಿರುವ  ತಮ್ಮನ್ನು ಯಾರೂ ಸಹ ಬೆಂಬಲ ಕೇಳಿಲ್ಲ. ಬೆಂಬಲ ಬಗ್ಗೆೆ ಪಕ್ಷಗಳ ಸಿದ್ಧಾಾಂತ ವಿಚಾರದ ಮೇಲೆ ರಾಷ್ಟ್ರೀಯ ನಾಯಕರು ತೀರ್ಮಾನ ಮಾಡುತ್ತಾಾರೆ ಎಂದು ತಿಳಿಸಿದ್ದಾಾರೆ.
ಬಿಜೆಪಿಗೆ ಕಾಂಗ್ರೆೆಸ್  ಶಾಸಕರನ್ನು ಕರೆದುಕೊಂಡು ಬರುತ್ತೇವೆ ಎಂಬ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆಗೆ  ಕಿಡಿಕಾರಿದ ಡಿ.ಕೆ.ಶಿವಕುಮಾರ್, ಯಾರೋ ಮೆಂಟಲ್ ಗಳು  ಏನೇನೋ ಮಾತನಾಡುತ್ತಾಾರೆ. 30, 40, 50  ಕಡಲ್ಲೇಪುರಿ ವ್ಯಾಾಪಾರ ಮಾಡುತ್ತಾಾರೆ. ನಮ್ಮ ಶಾಸಕರಿಗೆ ಅಗೌರವ ಕೊಡುವುದು ಬೇಡ. ಯಾರು ಯಾರು ಏನೇನು ಮಾತನಾಡುತ್ತಾಾರೆ, ಸಭೆ ಮಾಡುತ್ತಾಾರೆ,   ಯಾವ
ಹೊಟೇಲ್ ನಲ್ಲಿ ಸಭೆ  ಮಾಡಿದ್ದಾರೆ, ಯಾರನ್ನು ಕಾಯುತ್ತಿಿದ್ದರು ಎಂಬುದೆಲ್ಲವೂ ತಮಗೆ ಗೊತ್ತು. ನಾವು ಏನು  ಸುಮ್ಮನೆ ಕುಳಿತಿಲ್ಲ. ನಮಗೆ ಬೇರೆಯವರ ವಿಚಾರ ಬೇಡ. ನಾವುಂಟು ನಮ್ಮ ಶಾಸಕರು ಉಂಟು ಎಂದು  ಮಾರ್ಮಿಕವಾಗಿ ನುಡಿದಿದ್ದಾಾರೆ.