Wednesday, 11th December 2024

ಜ್ವರದಿಂದ ಬಳಲುತ್ತಿದ್ದ ವ್ಯಕ್ತಿಗೆ ನೆರವಾಗಿ ಪೊಲೀಸರು

ವಿಶ್ವವಾಣಿ ಸುದ್ದಿಮನೆ
ಬೆಂಗಳೂರು:

ವ್ಯಕ್ತಿಯೊಬ್ಬ ಜ್ವರದಿಂದ ಬಳಲಿ ಫ್ಲೈ ಓವರ್ ಬಳಿ ಕುಸಿದು ಬಿದ್ದು ಮೂರು ಗಂಟೆಯಾದರು ಕೂಡ ಸ್ಥಳಕ್ಕೆ ಆ್ಯಂಬುಲ್ಸ್‌ ಬರೆದ ಹಿನ್ನೆೆಲೆಯಲ್ಲಿ ಆತನ ನೆರೆವಿಗೆ ಹೊಯ್ಸಳ ಸಿಬ್ಬಂದಿ ಬಂದಿದ್ದಾರೆ.
ಸೋಮವಾರ ಬೆಳಗ್ಗೆೆ ತುಮಕೂರು ರಸ್ತೆೆ ಫ್ಲೈ ಓವರ್ ಬಳಿ ವ್ಯಕ್ತಿ ಬಿದ್ದಿದ್ದ. ತಕ್ಷಣ ಸ್ಥಳಿಯರು ಪೀಣ್ಯ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕೆ ಬಂದ ತಕ್ಷಣ ಆ್ಯಂಬುಲ್ಸ್ಗೆ ಕರೆ ಮಾಡಿದ್ದಾರೆ. ಕರೆ ಮಾಡಿ ಮೂರು ಗಂಟೆಯಾದರು ಸ್ಥಳಕ್ಕೆ ಆ್ಯಂಬುಲೆನ್‌ಸ್‌ ಬರದಿರುವುದನ್ನು ಕಂಡು ಪೀಣ್ಯ ಹೊಯ್ಸಳ ವಾಹನದ ಪೊಲೀಸರೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರು. ಸದ್ಯ ವ್ಯಕ್ತಿಯನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಿದ್ದು, ಜ್ವರ ಇರುವ ಕಾರಣ ಕರೋನಾ ಅನುಮಾನದ ಮೇರೆಗೆ ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಲಾಗಿದೆ.