Thursday, 12th December 2024

ತುರ್ತು ಸೇವೆಗೆ ಪೊಲೀಸ್ ಸಿದ್ಧ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು:

ಲಾಕ್ ಡೌನ್ ಹಿನ್ನೆಲೆಯಲ್ಲಿ ತುರ್ತು ಸಂದರ್ಭಗಳಲ್ಲಿ ಜನರಿಗೆ ಕ್ಷಿಪ್ರ ನೆರವು ನೀಡುವ ಸಲುವಾಗಿ ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಕಟೋಚ್ ನೇತೃತ್ವದಲ್ಲಿ ವಾಟ್ಸ್ ಆ್ಯಪ್ ಗ್ರೂಪ್ ಗಳು ಸಿದ್ಧವಾಗಿವೆ.

ದಕ್ಷಿಣ ವಿಭಾಗದಲ್ಲಿ ೪ ಸಾವಿರ ಮಂದಿ ಸಂಘ ಸಂಸ್ಥೆಗಳ ಸದಸ್ಯರನ್ನು ಒಳಗೊಂಡಂತೆ ೭೦ ಗ್ರೂಪ್ ಗಳನ್ನು ರಚಿಸಲಾಗಿದೆ. ಅಲ್ಲದೇ ಫೇಸ್ ಬುಕ್,ಟ್ವಿಟ್ಟರ್ ನಲ್ಲೂ ಸಹ ಗ್ರೂಪ್ ಗಳನ್ನು ತೆರೆಯಲಾಗಿದೆ. ತುರ್ತು ಸಂದರ್ಭಗಳಲ್ಲಿ ತಕ್ಷಣವೇ ಸ್ಪಂದಿಸುವ ಆಶಯದಿಂದ ಈ ಗ್ರೂಪ್ ಗಳು ಆರಂಭವಾಗಿವೆ.

ಗ್ರೂಪ್ ನಿಯಂತ್ರಣ ಮಾಡುವ ಸಲುವಾಗಿ ಪ್ರತ್ಯೇಕ ತಂಡ ರಚನೆ ಮಾಡಲಾಗಿದೆ. ಯಾರಿಗಾದರೂ ಅಗತ್ಯ ವಸ್ತುಗಳು ಬೇಕಾದಲ್ಲಿ ಗ್ರೂಪ್ ಮೂಲಕ ಮಾಹಿತಿ ರವಾನಿಸಬಹುದಾಗಿದೆ.