Thursday, 12th December 2024

ತುಸು ಮೆಲ್ಲನೆ ಸರಿದ ಕರೋನಾ

ವಿಶ್ವವಾಣಿ‌ ಸುದ್ದಿಮನೆ
ಬೆಂಗಳೂರು:
 ವಿಶ್ವಮಾರಿ ಕೊರೊನಾ ರಾಜ್ಯದಲ್ಲಿ ಇಂದು ಕೂಡ ತನ್ನ ಅಟ್ಟಹಾಸವನ್ನು ತುಸು ಕಡಿಮೆಯಾಗಿದೆ. ಮಂಗಳವಾರ 1, 498 ಹೊಸ ಸೋಂಕಿತರ ಪತ್ತೆಯಾಗಿದ್ದಾರೆ. ಇನ್ನು ಈವರೆಗೆ ರಾಜ್ಯದಲ್ಲಿ ಒಟ್ಟು 26,815 ಮಂದಿ ಸೋಂಕಿಗೆ ಒಳಗಾಗಿದ್ದಾರೆ.
ಒಂದೇ ದಿನ 15 ಮಂದಿ ಸೋಂಕಿಗೆ ಬಲಿಯಾಗಿದ್ದು,  ಒಟ್ಟಾರೆ ಈವರೆಗೆ ರಾಜ್ಯದಲ್ಲಿ 421 ಮಂದಿ (ಅನ್ಯಕಾರಣಕ್ಕೆ 4 ಮಂದಿ ಸೇರಿ) ಮೃತಪಟ್ಟಿದ್ದಾರೆ.  ಇಂದು ರಾಜ್ಯದ 15 ಮಂದಿ ಅಸುನೀಗಿದ್ದಾರೆ. ಬೆಂಗಳೂರಿನಲ್ಲಿ 800, ಹಾಸನ  26 ,  ರಾಯಚೂರು 23, ರಾಮನಗರ 19,  ಉಡುಪಿ 14, ಚಿಕ್ಕಮಗಳೂರು, ಚಾಮರಾಜನಗರ ಮತ್ತು ಹಾವೇರಿ ತಲಾ 6 ಸೇರಿ ರಾಜ್ಯದಲ್ಲಿ 1498 ಮಂದಿ ಸೋಂಕಿಗೆ  ಒಳಗಾಗಿದ್ದಾರೆ.
ದೇಶದಲ್ಲಿ 723,195 ಕ್ಕೇರಿದ ಸೋಂಕಿತರ ಸಂಖ್ಯೆ
ಇನ್ನು ದೇಶದಲ್ಲಿ ಈವರೆಗೆ 723,195 ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ. 20,201 ಮಂದಿ ಮೃತಪಟ್ಟಿದ್ದಾರೆ. 441,733 ಮಂದಿ ರೋಗಮುಕ್ತರಾಗಿದ್ದಾರೆ. 261,261 ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಪಂಚಾದ್ಯಂತ ಈವರೆಗೆ 11,779,836 ಜನರಲ್ಲಿ ಸೋಂಕು ಇರುವುದನ್ನು ವಿಶ್ವ ಆರೋಗ್ಯ ಸಂಸ್ಥೆ ಖಚಿತಪಡಿಸಿದೆ. ಇನ್ನು 541,748  ಜನರು ಮೃತಪಟ್ಟಿದ್ದಾರೆ 6,775,345  ಮಂದಿ ರೋಗದಿಂದ ಮುಕ್ತಗೊಂಡಿದ್ದಾರೆ.
ಸದ್ಯಕ್ಕೆ ರಾಜ್ಯದಲ್ಲಿ 14,385 ಸಕ್ರಿಯ ಪ್ರಕರಣಗಳಿದ್ದು, ಶೇ.1 ರಷ್ಟು ಮಾತ್ರ ಐಸಿಯುನಲ್ಲಿದ್ದಾರೆ. ಅಂದರೆ 143 ಜನ ಮಾತ್ರ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಿಗೆ ಆಕ್ಸಿಜನ್, ಐಸಿಯು ಬೇಕಾಗಿದೆ. ಕೆಲವರಿಗೆ ವೆಂಟಿಲೇಟರ್ ಬೇಕಾಗಿದೆ. ಇದುವರೆಗೂ 10,527 ಜನ ಸಂಪೂರ್ಣ ಗುಣಮುಖರಾಗಿದ್ದಾರೆ. 25,317 ಕೊರೊನಾ ಸೋಂಕಿತರ ಪೈಕಿ 14,385 ಸಕ್ರಿಯ ಪ್ರಕರಣಗಳಿಗೆ. ರಾಷ್ಟ್ರೀಯ ಮರಣ ಪ್ರಮಾಣ ಶೇ.2.79 ರಷ್ಟಿದ್ದು, ಬೆಂಗಳೂರಿನಲ್ಲಿ ಶೇ.1.46 ರಷ್ಟಿದೆ. ನಮ್ಮ ನಿರೀಕ್ಷೆ ಸಾವಿನ ಪ್ರಮಾಣವನ್ನು ಶೇ.1 ಕ್ಕಿಂತ ಕಡಿಮೆಗೆ ತರುವುದು. ಈ ನಿಟ್ಟಿನಲ್ಲಿ ನಾವು ಪ್ರಯತ್ನ ಮಾಡುತ್ತಿದ್ದೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ತಿಳಿಸಿದ್ದಾರೆ.
 ಕೇಂದ್ರ ತಂಡದಲ್ಲಿ ಆಗಮಿಸಿದ ಅಧಿಕಾರಿಗಳು  ಭೇಟಿ ಮಾಡಿ ಚರ್ಚಿಸಿ, ಹಲವು ಸಲಹೆ ಕೊಟ್ಟಿದ್ದಾರೆ. ಹೀಗಾಗಿ ಜನರು ಭಯ ಪಡಬಾರದು. ಸೋಂಕು ಹೆಚ್ಚು ಪತ್ತೆ ಮಾಡಿದಷ್ಟೂ ಕರೋನಾ ತಡೆಯಬಹುದು. ಟೆಸ್ಟ್ ಮಾಡದಿದ್ದರೆ ಸೋಂಕು ಸೈಲೆಂಟಾಗಿ ಹಬ್ಬುತ್ತೆ. ಇದಕ್ಕಾಗಿ ಹೆಚ್ಚು ಟೆಸ್ಟ್ ಮಾಡಬೇಕು. ಮನೆಯಲ್ಲಿರೋ ಹಿರಿಯರಿಗೆ ಐಎಲ್‍ಐ ಟೆಸ್ಟ್ ಮಾಡಲು ಸೂಚಿಸಲಾಗಿದೆ ಎಂದರು.
ಕರೋನಾಗೆ ವ್ಯಾಕ್ಸಿನ್ ಬಗ್ಗೆ ಮಾಹಿತಿ ಪಡೆಯಲು ಸಮಿತಿ ರಚಿಸುತ್ತೇವೆ. ಈ ಸಮಿತಿಯು ವಿಶ್ವದ ಎಲ್ಲೆಲ್ಲಿ ವ್ಯಾಕ್ಸಿನ್ ಪತ್ತೆ ಮಾಡುತ್ತಾರೆ. ಅದರ ಪರಿಣಾಮ ಬಗ್ಗೆ ಮಾಹಿತಿ ಕೊಡುತ್ತೆ. ನಮ್ಮ ರಾಜ್ಯದಲ್ಲೂ ವ್ಯಾಕ್ಸಿನ್ ತಯಾರಿಕೆಗೆ ಐಸಿಎಂಆರ್ ನಿಂದ ಅನುಮತಿ ಕೇಳುತ್ತೇವೆ. ಈ ಸಂಬಂಧ ಸದ್ಯವೇ ಐಸಿಎಂಆರ್‌ಗೆ ಪತ್ರ ಬರೆಯುತ್ತೇವೆ. ಅನುಮತಿ ಸಿಕ್ಕಿದರೆ ನಂಜನಗೂಡಿನ ಜ್ಯುಬಿಲಿಯೆಂಟ್ ಸಂಸ್ಥೆಯಲ್ಲಿ ಕರೋನಾ ವ್ಯಾಕ್ಸಿನ್ ತಯಾರಿಸಲು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
5077 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ. ಸರ್ಕಾರಿ, ಖಾಸಗಿ ಆಸ್ಪತ್ರೆಗಳು, ಕೋವಿಡ್ ಕೇರ್ ಸೆಂಟರ್‌ಗಳಿವೆ. ಇದರಲ್ಲಿ 3,777 ಹಾಸಿಗೆಗಳು ಭರ್ತಿ ಆಗಿವೆ. ಇನ್ನೂ 1,310 ಹಾಸಿಗೆಗಳು ಖಾಲಿ ಇವೆ. ಬೆಂಗಳೂರಿನಲ್ಲಿ ಹೆಚ್ಚುವರಿ 7,000 ಹಾಸಿಗೆಗಳನ್ನು ಸದ್ಯದಲ್ಲೇ ವ್ಯವಸ್ಥೆ ಮಾಡಲಾಗುತ್ತೆ. ಹೀಗಾಗಿ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದರು.
…..
ಬಾಕ್ಸ್….
ನಾವು ನಾಲ್ಕು ‘ಸಿ’ ಗಳನ್ನು ಅಳವಡಿಸಿಕೊಳ್ಳಿ
1. ಕಾನ್ಫಿಡೆನ್ಸ್ – ನಮ್ಮ ಮೇಲೆ ನಮಗೆ ಆತ್ಮವಿಶ್ವಾಸ ಇರಬೇಕು.
2. ಕೊಲ್ಯಾಬರೇಷನ್ – ನಮ್ಮಲ್ಲಿ ಸಹಭಾಗಿತ್ವ ಇರಬೇಕು. ಸರ್ಕಾರ ಮತ್ತು ನಾಗರೀಕರ ಸಹಭಾಗಿತ್ವದಲ್ಲಿ ಕರೋನಾ ನಿಯಂತ್ರಣ ಮಾಡಬಹುದು
3. ಕಮ್ಯುನಿಕೇಷನ್- ಜನರಿಗೆ ಸರಿಯಾದ ಮಾಹಿತಿ ಕೊಡಬೇಕು. ಜೊತೆಗೆ ಜನರು ಕರೋನಾ ಬಗ್ಗೆ ಸೂಕ್ತ ಮಾಹಿತಿ ಪಡೆದುಕೊಳ್ಳಬೇಕು
4. ಕಂಪ್ಯಾಷನ್ – ಅನುಕಂಪ, ದಯೆ ಎಲ್ಲರ ಸಹಜ ಗುಣ ಆಗಬೇಕು.