Sunday, 15th December 2024

ದಿನಸಿ ಹಂಚಿಕೆ ವೇಳೆ ಗಲಾಟೆ: ಆರೋಪಿಗಳ ಬಂಧನ

ವಿಶ್ವವಾಣಿ ಸುದ್ದಿಮನೆ

ಬೆಂಗಳೂರು:

ಕೂಲಿ ಕಾರ್ಮಿಕರಿಗೆ ದಿನಸಿ ಸಾಮಗ್ರಿ ಹಂಚುತ್ತಿದ್ದ ‘ಸ್ವರಾಜ್ ಅಭಿಯಾನ’ ಕಾರ್ಯಕರ್ತರ ಮೇಲೆ ದುಷ್ಕರ್ಮಿಗಳ ಗುಂಪು ಹಲ್ಲೆ ನಡೆಸಿದ್ದು, ಈ ಸಂಬಂಧ
ಮೂವರು ಆರೋಪಿಗಳನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಎನ್‌ಜಿಒ ಕಾರ್ಯಕರ್ತ ಸಯ್ಯದ್ ತಬ್ರೇಜ್ ಹಾಗೂ ಇತರರ ಮೇಲೆ ಹಲ್ಲೆ ನಡೆಸಲಾಗಿದ್ದು,
ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆ ಘಟನೆ ಸಂಬಂಧ ಜಗದೀಶ್, ಕಾರ್ತಿಕ್ ಮತ್ತು ರಘು ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

%B