Sunday, 15th December 2024

ನಕಲಿ ಸ್ಯಾನಿಟೈಸರ್:ಆರೋಪಿ ಬಂಧಿತ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು:

ನಕಲಿ ಸ್ಯಾನಿಟೈಸರ್ ತಯಾರಿಸಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಶ್ರೀರಾಂಪುರ ನಿವಾಸಿ ಶಿವಕುಮಾರ್ ಬಂಧಿತ ಆರೋಪಿ.
ಆರೋಪಿಯು ಸ್ಯಾನಿಟೈಸರ್ ಗೆ ಹೆಚ್ಚಾಗಿ ಬೇಡಿಕೆ ಇರುವ ಕಾರಣ ತನ್ನ ಅಪಾರ್ಟ್ಮೆಂಟ್ ನಲ್ಲಿ ಐಸೊಪ್ರೊಫೈಲ್ ಆಲ್ಕೋಹಾಲ್ ದ್ರವ ಮತ್ತು ಇತರೆ ವಸ್ತುಗಳನ್ನು ಬಳಸಿ ನಕಲಿ ಸ್ಯಾನಿಟೈಸರ್ ತಯಾರಿ ಮಾಡುತ್ತಿದ್ದ ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರ ತಂಡ ಆತನಿಂದ 180 ಲೀಟರ್ ಐಸೋ ಪ್ರೊಫೈಲ್ ಆಲ್ಕೋಹಾಲ್, 10 ಲೀಟರ್ ಗ್ಲಿಸರಿನ್ , 65 ಲೀಟರ್ ಸರ್ಫೇಸ್ ಸ್ಯಾನಿಟೈಸರ್ ಹಾಗೆ 100 ಎಂ.ಎಲ್.ನ 5382 ಬಾಟಲ್ ಗಳನ್ನು ವಶಕ್ಕೆ ಪಡೆದಿದ್ದಾರೆ.