Monday, 25th November 2024

ನಗರದಲ್ಲಿ ಬಾಡಿಗೆ ಮನೆಗಳು ಖಾಲಿ ಖಾಲಿ

ವಿಶ್ವವಾಣಿ ಸುದ್ದಿಮನೆ,

ಬೆಂಗಳೂರು

ಕರೋನಾ ವೈರಸ್‌ನಿಂದಾಗಿ ಸೋಂಕು ಹರಡುವುದು ಕಡಿಮೆಯಾಗದ ಕಾರಣ ವಲಸೆ ಬಂದಿದ್ದವರಲ್ಲಿ ಅನೇಕ ಜನರು ತಮ್ಮ ಊರುಗಳತ್ತ ಹೊರಟ್ಟಿದ್ದಾರೆ, ಹೊರ ರಾಜ್ಯದಿಂದ ಉದ್ಯೋೋಗಕ್ಕೆ ಬಂದಿದ್ದವರು ಕೂಡಾ ತಮ್ಮ ಊರಿಗೆ  ಹೋಗಿದ್ದಾಾರೆ. ಇದರಿಂದ ನಗರದ ಅನೇಕ ಕಡೆಗಳಲ್ಲಿಬಾಡಿಗೆ ಮನೆಗಳು ಖಾಲಿ ಬಿದ್ದಿವೆ.

ಸರಕಾರ ಲಾಕ್‌ಡೌನ್ ಮುಂದುವರೆಸುತ್ತಿದ್ದಂತೆಯೇ ಇನ್ನು ಕಾಮಗಾರಿಗಳು ಮುಂದುವರೆಯುವುದಿಲ್ಲ. ನಮಗೆ ಕೆಲಸ ಇರುವುದಿಲ್ಲ ಎಂದು ಅನೇಕರು ಕುಟುಂಬ ಸಮೇತ ತಮ್ಮೂರಿಗೆ ಹೋದರು. ವಲಸೆ ಕಾರ್ಮಿಕರಿಗೆ ಸರಕಾರವೇ ಮುಂದೆ ನಿಂತು ಬಸ್, ರೈಲು ಸೇವೆ ನೀಡಿ ಕಳುಹಿಸುತ್ತಿದೆ. ಇದರಿಂದಾಗಿ ರಾಜಧಾನಿ ಬೆಂಗಳೂರಿನಲ್ಲಿ ಮನೆಗಳು ಖಾಲಿ  ಹೊಡೆಯುತ್ತಿವೆ. ಕಳೆದರಡು ತಿಂಗಳಿನಿಂದ ಸಿಲಿಕಾನ್ ಸಿಟಿ ಮಹಾನಗರದಲ್ಲಿರುವ ಶೇ.40ರಷ್ಟು ಜನರು ತಮ್ಮ ಊರುಗಳಿಗೆ ತೆರಳಿದ್ದಾರೆ. ಇದರಲ್ಲಿ ಹಲವರು ಗಂಟುಮೂಟೆ ಕಟ್ಟಿಕೊಂಡು ತಮ್ಮೂರಿಗೆ ಹೋಗಿದ್ದಾರೆ. ಇನ್ನು ಕೆಲವರು ಮನೆ ಬೀಗ ಹಾಕಿ ಹೋಗಿದ್ದಾರೆ. ಇನ್ನು ಕೆಲವರು ಬೆಂಗಳೂರಿಗೆ ಬಂದಿದ್ದರಾದರೂ ಕೆಲಸ ಸಿಗದೆ ವಾಪಸ್ ತಮ್ಮೂರಿಗೆ ತೆರಳುತ್ತಿದ್ದಾರೆ.

ನಗರ ಬಿಟ್ಟು ತಮ್ಮೂರಿಗೆ ತೆರಳಿದವರು ಎರಡು ತಿಂಗಳಾದರೊ ಕರೋನಾ ಪರಿಸ್ಥಿತಿ ಹತ್ತೊಟಿಗೆ ಬಾರದ ಕಾರಣ, ಕೆಲಸವೂ ಇಲ್ಲದೆ
ಮತ್ತೆ ತಮ್ಮೂರಿನಿಂದ ಬೆಂಗಳೂರಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಮೂರನೇ ಹಂತದ ಲಾಕ್‌ಡೌನ್ ಸಂದರ್ಭದಲ್ಲಿ ಕರೋನಾ ನಿಯಂತ್ರಣಕ್ಕೆ ಬಾರದೆ ಪಾಸಿಟಿವ್ ಕೇಸ್ ಹೆಚ್ಚಾಗುತ್ತಿರುವುದರಿಂದ ಬೆಂಗಳೂರು ಬಿಟ್ಟು ತೆರಳಿದ್ದಾರೆ. ಇದರ ಪರಿಣಾಮ ಹಲವು ಕಡೆಗಳಲ್ಲಿ ಬಾಡಿಗೆಗೆ ಮನೆ ಇದೆ ಎಂಬ ಫಲಕಗಳು ಹಾಕಲಾಗಿದೆ.

ನಗರಕ್ಕೆ  ಬಂದವರಿಗೆಲ್ಲ ಆಶ್ರಯದಾತವಾಗಿತ್ತು. ಆದರೀಗ ಕೆಲಸವಿಲ್ಲದೆ ಬಾಡಿಗೆ ಕಟ್ಟಲು ಆಗದೆ ಕಾರ್ಮಿಕ ವರ್ಗ ಗಂಟುಮೂಟೆ ಕಟ್ಟಿಕೊಂಡು ತಮ್ಮೂರಿಗೆ ಹೋಗುತ್ತಿದೆ. ಐಟಿ ಉದ್ಯೋಗಿಗಳು ತಾವಿರುವ ಮನೆಗೆ ಬೀಗ ಹಾಕಿ ತಮ್ಮೂರಿಗೆ ತೆರಳಿ ಅಲ್ಲಿಂದಲೇ ವರ್ಕ್‌ಪ್ರಂ ಹೋಮ್ ಕೆಲಸ ಮಾಡುತ್ತಿದ್ದಾರೆ. ಕೆಲಸ ಕಳೆದುಕೊಂಡವರು ಮನೆ  ಖಾಲಿ ಮಾಡಿ ಹೋಗುತ್ತಿದ್ದಾರೆ. ಈಮಧ್ಯೆ ಲಾಕ್‌ಡೌನ್ ಸಡಿಲಿಕೆಯಾಗಿದೆ ಯಾದರೂ ಕೆಲಸ ಮುಂದುವರೆಸಲು ಕಂಪನಿಗಳು ಮುಂದೆ ಬರುತ್ತಿಲ್ಲ. ಇದರಿಂದಾಗಿ ಬೆಂಗಳೂರಿನ ಮನೆ, ಅಪಾರ್ಟ್ ಮೆಂಟ್, ವಠಾರ ಸೇರಿದಂತೆ ಶೇ.40ರಷ್ಟು ಬಾಡಿಗೆ ಮನೆಗಳು ಖಾಲಿಯಾಗಿವೆ.

ಇನ್ನು ಹೊರ ರಾಜ್ಯದಿಂದ ಬಂದು ಬಾಡಿಗೆಗೆ ಇದ್ದವರು ತಮ್ಮ ಊರಿಗೆ ಹೋಗಿದ್ದಾರೆ. ಇವರಲ್ಲಿ ಬಹುತೇಕರು ಮನೆ ಬಾಡಿಗೆ ನೀಡಿಲ್ಲ. ಬಾಡಿಗೆಗೆ ಇದ್ದವರಿಗೆ ಮನೆ ಮಾಲೀಕರು ದೂರವಾಣಿ ಮಾಡಿದರೆ ನಾವು ನೀಡಿರುವ ಮುಂಗಡದಲ್ಲಿ ಕಡಿತ ಮಾಡಿಕೊಳ್ಳಿ. ನಮಗೆ ಕೆಲಸ ಮುಂದುವರೆಸಿದರೆ ಬರುತ್ತೇವೆ. ಇಲ್ಲವಾದಲ್ಲಿ ಇಲ್ಲ ಎನ್ನುತ್ತಿದ್ದಾರೆ.  ಬಸ್‌ಗಳ ಸಂಚಾರ ಆರಂಭವಾದರೆ ಬಂದು ಮನೆ ಖಾಲಿ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ.