ವಿಶ್ವವಾಣಿ ಸುದ್ದಿಮನೆ ಬೆಂಗಳೂರು: ನಗರದಲ್ಲಿ
144 ಸೆಕ್ಷನ್ ಏ. ರ ವರೆಗೂ ಮುಂದುವರೆಯುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಪೊಲೀಸ್ ಇಲಾಖೆಯಿಂದ ನೀಡಲಾಗಿರುವ
ಪೇಪರ್ ಪಾಸ್ ಗಳನ್ನು ಹಾಗೂ ಇ-ಪಾಸ್ ಗಳು ಏಪ್ರಿಲ್ 20 ರವರೆಗೂ ಚಾಲ್ತಿಯಲ್ಲಿರುತ್ತದೆ.
ಆನ್ ಲೈನ್ ನಲ್ಲಿ 44 ಲಕ್ಷ ಪಾಸ್ ಗಳಿಗೆ ಅಪ್ಲೈ ಮಾಡಲಾಗಿದೆ ಅದನ್ನು ರಿಜೆಕ್ಟ್ ಮಾಡಲಾಗಿದೆ.
ಇಲ್ಲಿವರೆಗೂ 30 ಸಾವಿರ ವಾಹನ ಗಳನ್ನು ಸೀಜ್ ಮಾಡಲಾಗಿದೆ.
ಇದನ್ನು ಲಾಕ್ ಡೌನ್ ಮುಗಿಯುವ ವೆರಗೂ ವಾಪಸ್ ನೀಡುವುದಿಲ್ಲ.
ಯಾರು ಪಾಸ್ ಗಳನ್ನ ಪಡೆದು ಸುಖಾ ಸುಮ್ಮನೆ ಓಡಾಡುತ್ತಿದ್ದಾರೋ ಅವರ ವಿರುದ್ಧ NDMA ಆಕ್ಟ್ ಅಡಿ ಬಂಧನ ಮಾಡಲಾಗುತ್ತದೆ. ಯಾರಿಗಾದರೂ ವೈದ್ಯಕೀಯ ಸೇವೆಯಿಂದ ಪಾಸ್ ಗಳು ಬೇಕಾದರೆ ಸೂಕ್ತ ದಾಖಲೆಗಳನ್ನ ನೀಡಿ ಪಡೆದುಕೊಳ್ಳಿ.
ಒಂದು ದಿನದ ಪಾಸ್ ನೀಡಲಾಗುವುದು. ಸಂಬಂಧಿಕರ ಸಾವಿಗೆ ಹೊಗುವುದು, ಊರಿಗೆ ಹೋಗುವುದು, ಇಂಥಹವರಿಗೆ ಓಡಾಡಲು ಯಾವುದೇ ಅವಕಾಶ ಇರುವುದಿಲ್ಲ.
ಕೇವಲ ದಿನಸಿ ಹಾಗೂ ತರಕಾರಿ ಸಾಗಾಟ ಮಾಡುವ ವಾಹನಗಳಿಗೆ ಮಾತ್ರ ಅವಕಾಶ.
ಹೊರ ರಾಜ್ಯಗಳಿಗೆ ಹೋಗ ಬೇಕಾದರೆ ಡಿಐಜಿ ಪ್ರತಾಪ್ ರೆಡ್ಡಿ ಬೇಟಿ ಮಾಡಿ. ಅನಾವಶ್ಯಕ ವಾಗಿ ಕಣ್ಣು ಇಡಲು 50 ಡ್ರೋಣ್ ಗಳನ್ನು ಬಳಕೆ ಮಾಡಲಾಗುತ್ತಿದೆ.
ಬೆಂಗಳೂರು ಸಿಟಿಯಲ್ಲಿ ವಾಕಿಂಗ್ ಸೈಕ್ಲಿಂಗ್ ಎಂದು ಹೊರ ಬರ್ತಿದ್ದಾರೆ.
ಇಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ.
ಏ. 20 ನೇ ತಾರೀಖಿನ ವರೆಗೂ ಇದು ಅನ್ವಯವಾಗುತ್ತದೆ ಯಾರೂ ಸಹ ಹೊರ ಬರುವಂತಿಲ್ಲ ಎಂದರು.