Sunday, 15th December 2024

ನಟ ಮಿಮಿಕ್ರಿ ರಾಜಗೋಪಾಲ್ ಇನ್ನಿಲ್ಲ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು
ಜನಪ್ರಿಿಯ ಹಾಸ್ಯನಟ ಮಿಮಿಕ್ರಿ ರಾಜಗೋಪಾಲ್ ನಿಧನರಾಗಿದ್ದಾರೆ.  ಕಿಡ್ನಿ ಮತ್ತು ಅಸ್ತಮಾ ಸಮಸ್ಯೆಯಿಂದ ಅವರು ಬುಧವಾರ ರಾತ್ರಿಿಒಂದು ಗಂಟೆಯ ವೇಳೆಗೆ ಕೊನೆಯುಸಿರೆಳೆದಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು.
ಸುಮಾರು  650ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವುದು ಮಾತ್ರವಲ್ಲದೆ, ವೇದಿಕೆಗಳಲ್ಲಿ ಮಿಮಿಕ್ರಿ ಮಾಡುವ ಮೂಲಕವೂ ಅವರು ಜನಪ್ರಿಯರಾಗಿದ್ದರು. ಕೆಂಗೇರಿ ಬಿಡಿಎ ಅಪಾಟ್‌ಮೆಂಟ್‌ನಲ್ಲಿ ವಾಸವಾಗಿದ್ದ ರಾಜಗೋಪಾಲ್ ಅವರು, ಮೂವರು ಪುತ್ರಿಯರನ್ನು ಅಗಲಿದ್ದಾರೆ. ಕನ್ನಡದ ಹಲವು ಜನಪ್ರಿಯ ನಾಯಕರ ಜತೆ ಅವರು ತೆರೆ ಹಂಚಿಕೊಂಡಿದ್ದರು. ಇತ್ತೀಚಿನ ವರ್ಷಗಳಲ್ಲಿ ಅವಕಾಶಗಳು ಕಡಿಮೆ ಆದ ಪರಿಣಾಮ ರಾಜಗೋಪಾಲ್ ತೆರೆಮರೆಗೆ ಸರಿದಿದ್ದರು.

ವಿಷ್ಣುವರ್ಧನ್, ಅಂಬರೀಶ್, ಪ್ರಭಾಕರ್ ಮೊದಲಾದವರ ಜತೆ ನಟಿಸಿದ್ದ ರಾಜಗೋಪಾಲ್, ಕಲ್ಪನಾ ಅವರ ದನಿಯನ್ನು
ಯಥಾವತ್ತಾಗಿ ಮಿಮಿಕ್ರಿ ಮಾಡುವ ಮೂಲಕ ಅತಿಹೆಚ್ಚು ಜನಪ್ರಿಯತೆಗಳಿಸಿದ್ದರು.