Monday, 28th October 2024

ಪರಿಹಾರಕ್ಕಾಗಿ ಆಟೋ, ಟ್ಯಾಕ್ಸಿ ಚಾಲಕರಿಂದ ಅರ್ಜಿ ಆಹ್ವಾನ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು
ಲಾಕ್‌ಡೌನ್ ಜಾರಿಯಾದ ಬಳಿಕ ಸಂಕಷ್ಟದಲ್ಲಿರುವ ಆಟೋಚಾಲಕರು ಮತ್ತು ಟ್ಯಾಕ್ಸಿ ಚಾಲಕರಿಗೆ ಒಂದು ಬಾರಿ 5 ಸಾವಿರ ರೂಪಾಯಿ ಪರಿಹಾರ ನೀಡಲು ರಾಜ್ಯ ಸರಕಾರ ಮುಂದಾಗಿದ್ದು, ಕೆಲ ದಾಖಲೆಗಳ ಮೂಲಕ ಅರ್ಜಿ ಸಲ್ಲಿಸಲು ಸೂಚಿಸಿದೆ.
ಎಲ್ಲಾ ಅರ್ಜಿಗಳನ್ನು ಸೇವಾ ಸಿಂಧು ಪೋರ್ಟಲ್ ಮೂಲಕ ಸ್ವೀಕರಿಸಬೇಕು. 2020ರ ಮಾರ್ಚ್ 24ರ ಒಳಗೆ ಚಾಲನಾ ಪರವಾನಗಿ ಪ್ರಮಾಣಪತ್ರ ಮತ್ತು ಫಿಟ್ನೆಸ್ ಸರ್ಟಿಫಿಕೇಟ್ ಹೊಂದಿದ ವಾಹನಗಳಿಗೆ ಮಾತ್ರ ಹಾಗೂ ಮಾರ್ಚ್24 ರಂದು ಚಾಲ್ತಿಯಲ್ಲಿದ್ದ ಚಾಲನಾ ಪರವಾನಿಗೆ ಸಂಖ್ಯೆಗಿಂತ ಹೆಚ್ಚು ಫಲಾನುಭವಿಗಳು ಇಲ್ಲದಂತೆ ಖಚಿತ ಪಡಿಸಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸರಕಾರ ಸೂಚನೆ ನೀಡಿದೆ.
ಆಧಾರ್ ಕಾರ್ಡ್, ಡಿಎಲ್, ವಾಹನ ನೋಂದಣಿ ಸಂಖ್ಯೆ ಅನನ್ಯವಾಗಿರುವುದು ಎಲ್ಲಾ ಫಲಾನುಭವಿಗಳಿಗೆ ಕಡ್ಡಾಯವಾಗಿರುತ್ತದೆ. ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಇದು ಅನ್ವಯವಾಗುವುದಿಲ್ಲ. ಪರಿಹಾರ ಕೇವಲ ಅನುಜ್ಞಾ ಪತ್ರವನ್ನು ಹೊಂದಿರುವ ಮತ್ತು ಅಗತ್ಯವಿರುವ ಚಾಲಕರ ಬ್ಯಾಾಂಕ್ ಖಾತೆಗೆ ಡಿಬಿಟಿ ಮುಖಾಂತರ ಸಂದಾಯವಾಗಬೇಕು. ಒಂದು ವೇಳೆ ಆಟೋ, ಟ್ಯಾಕ್ಸಿ ಮಾಲೀಕರಿಗೆ ಸಂದಾಯವಾದಲ್ಲಿ ಕೆಲವೊಂದು ಮಾಲೀಕರು ಹೆಚ್ಚಿನ ಸಂಖ್ಯೆಯ ಆಟೋ, ಟ್ಯಾಕ್ಸಿಗಳನ್ನು ಹೊಂದಿದ್ದು ಅವರಿಗೆ ಪರಿಹಾರ ಧನಸಂದಾಯವಾದಲ್ಲಿ ಜೀವನ ನಿರ್ವಹಣೆ ಎದುರಿಸುತ್ತಿರುವ ಚಾಲಕರಿಗೆ ಸಿಗದಂತಾಗುತ್ತದೆ. ಹಾಗಾಗಿ ಡುಪ್ಲಿಕೇಶನ್ ಅಥವಾ ಡಬ್ಬಲ್ ಪೇಮೆಂಟ್ ಆಗದಂತೆ ಎಚ್ಚರವಹಿಸಬೇಕು ಎಂದು ತಿಳಿಸಲಾಗಿದೆ.