Saturday, 14th December 2024

ಪಾದರಾಯನಪುರದಲ್ಲಿ ಪೊಲೀಸ್ ಪವರ್

ವಿಶ್ವವಾಣಿ ಸುದ್ದಿಮನೆ

ಬೆಂಗಳೂರು:

ಕರೋನ ಸೋಂಕಿತರು ಹೆಚ್ಚಾಗಿರುವ ಪಾದರಾಯನಪುರದಲ್ಲಿ ಮನೆಯಿಂದ ಯಾರೂ ಹೊರಬರದಂತೆ ಕಠಿಣ ನಿಯಮಗಳನ್ನು ಜಾರಿಗೆತರಲಾಗಿದೆ.

ಇಡೀ ಪ್ರದೇಶ ಸೀಲ್ ಡೌನ್ ಆಗಿದ್ದರೂ ಯಾವುದೇ ರೀತಿಯ ಭಯವಿಲ್ಲದೇ ಜನ ಆರಾಮವಾಗಿ ಮನೆಯಿಂದ ಹೊರಬಂದು ಕಾಲಹರಣ ಮಾಡುತ್ತಿದ್ದರು.
ಏ.19ರ ರಾತ್ರಿ ನಡೆದ ಗಲಭೆಯಿಂದ ಎಚ್ಚೆತ್ತ ಪೋಲಿಸರು ಇಲ್ಲಿಯವರೆಗೆ 125 ಮಂದಿಯನ್ನು ಬಂಧಿಸಿದ್ದಾರೆ. ಇಡೀ ಪಾದರಾಯನಪುರ ಪೋಲಿಸ್ ಸರ್ಪಗಾವಲಿನಲ್ಲಿದೆ.

ಬೆಳಿಗ್ಗೆ ಹಾಲು, ತರಕಾರಿ ನೆಪ ಹೇಳಿಕೊಂಡು ಹೊರಬರುತ್ತಿದ್ದ ಜನ ಈಗ ಮನೆಯಿಂದ ಹೊರ ಬರುತ್ತಿಲ್ಲ. ಮನೆಯಿಂದಯಾರು ಹೊರಗಡೆ ಬರುವಂತಿಲ್ಲ. ಪಾದರಾಯನಪುರದ ಪ್ರವೇಶ ಮತ್ತು ನಿರ್ಗಮನಕ್ಕೆ ಒಂದೇ ಮಾರ್ಗ ಉಳಿದೆಲ್ಲ ರಸ್ತೆಗಳು ಬಂದ್ ಮಾಡಲಾಗಿದೆ.

ಲಾಕ್ ಡೌನ್ ಪ್ರದೇಶಕ್ಕೆ ದಿನಕ್ಕೊಂದು ಬಾರಿ ತರಕಾರಿ, ಹಾಲು,ದಿನಸಿಯವರ ಪ್ರವೇಶ ಆಯಾಯ ವ್ಯಾಪಾರಿಗಳಿಗೆ ಕೋಡ್ ಹಾಗೂ ಸಮವಸ್ತ್ರ ಕೊಡಲಾಗುತ್ತೆ. ಅವರಿಗಷ್ಟೇ ಪ್ರವೇಶ ಮನೆಬಾಗಿಲಿಗೆ ದಿನಸಿ, ಔಷಧಿ ತಲುಪಿಸಲಾಗುತ್ತಿದೆ.

ವೈದ್ಯರನ್ನು ಹೊರತು ಪಡಿಸಿ ಈ ಏರಿಯಾಗೆ ಬೇರೆ ಯಾರ ಪ್ರವೇಶಕ್ಕೂ ಅವಕಾಶವಿಲ್ಲ ಸಂಪೂರ್ಣ ಪ್ರವೇಶ ನಿಷಿದ್ಧ. ಶಾಸಕರು ಸೇರಿದಂತೆ ಜನಪ್ರತಿನಿಧಿಗಳ ನಿವಾಸ ಕಂಟೈನ್ ಮೆಂಟ್ ಝೋನ್ ನಲ್ಲಿದ್ದರೆ ಅವರು ಕೂಡ ಹೊರಗೆ ಬರುವಂತಿಲ್ಲ. ಈಗಾಗಲೇ ಪಾದರಾಯನಪುರದಲ್ಲಿ ಗರುಡ ಪಡೆ ಭದ್ರತೆ ಕೈಗೊಂಡಿದೆ.