Monday, 28th October 2024

ಪೊಲೀಸ್ ಪೇದೆ ರಿಪೋರ್ಟ್‌ನಲ್ಲಿ ಆರೋಗ್ಯ ಇಲಾಖೆ ಯಡವಟ್ಟು

ವಿಶ್ವವಾಣಿ ಸುದ್ದಿಮನೆ
ಬೆಂಗಳೂರು: 
ಮಾರಕ ಕರೋನಾ ವೈರಸ್ ಗೆ ಸಂಬಂಧಿಸಿದಂತೆ ರಾಜ್ಯ ಆರೋಗ್ಯ ಇಲಾಖೆಯ ಮಹಾ ಎಡವಟ್ಟು ಬೆಳಕಿಗೆ ಬಂದಿದ್ದು, ಬೆಂಗಳೂರಿನ ಬೇಗೂರು ಠಾಣೆಯ ಪೊಲೀಸ್ ಪೇದೆಯ ಕೊರೋನಾ ಪರೀಕ್ಷಾ ವರದಿ ಅದಲು ಬದಲಾಗಿದೆ ಎಂದು ಹೇಳಲಾಗುತ್ತಿದೆ.
ಹೆಚ್ಚು‌ ಜನರೊಂದಿಗೆ‌ ಪೇದೆ ಸಂಪರ್ಕ ಹೊಂದಿದ್ದ ಎಂದು ಹೇಳಲಾಗುತ್ತಿದೆ. ಒಂದೇ ವೇಳೆ ಟ್ರಾವೆಲ್ ಹಿಸ್ಟರಿ ಬಯಲು ಮಾಡಿದರೆ ಆರೋಗ್ಯ ಇಲಾಖೆಗೆ ತಲೆನೋವು‌ ಶುರುವಾಗಲಿದೆ.
ಬೇಗೂರು ಪೊಲೀಸ್ ಠಾಣೆಯ ಪೇದೆಯ ಕರೋನಾ ವೈರಸ್ ಪರೀಕ್ಷೆಯ ವರದಿ ಅದಲು ಬದಲಾಗಿದ್ದು, ಹೀಗಾಗಿ ಪಾಸಿಟಿವ್ ಬಂದಿದ್ದ ವರದಿ ನೆಗೆಟಿವ್ ಆಗಿತ್ತು ಎಂದು ಹೇಳಲಾಗಿದೆ. ಒಂದೇ ಆಸ್ಪತ್ರೆಯಲ್ಲಿ, ಒಂದೇ ಹೆಸರಿನ ಇಬ್ಬರಿಗೆ ಗಂಟಲು  ದ್ರವ ಪರೀಕ್ಷೆ ಮಾಡಲಾಗಿತ್ತು. ಆದರೆ ಕೊರೋನಾ ಸೋಂಕು ಇದಿದ್ದು ಒಬ್ಬರಿಗೆ ಆದರೆ ರಿಪೋರ್ಟ್ ಬಂದಿದ್ದು ಮತ್ತೊಬ್ಬರಿಗೆ ಎಂದು ವರದಿಯಲ್ಲಿ ಹೇಳಲಾಗಿದೆ.
ಮೇ 1ರಂದು ಬೇಗೂರು ಠಾಣೆ ಪೊಲೀಸ್ ಪೇದೆಗೆ ಗಂಟಲು ದ್ರವ ಪರೀಕ್ಷೆ ಮಾಡಲಾಗಿತ್ತು. ಅದೇ ದಿನ ಸುಮಾರು 700ಕ್ಕೂ ಹೆಚ್ಚು ಮಂದಿಗೆ ಗಂಟಲು ದ್ರವ ಪರೀಕ್ಷೆ ಮಾಡಿದ್ದಾರೆ. 700 ಮಂದಿಯಲ್ಲಿ ಇಬ್ಬರು ರೋಗಿಗಳ ಹೆಸರು ಒಂದೇ ಆಗಿತ್ತು ಎನ್ನಲಾಗಿದೆ. ಪೊಲೀಸ್ ಪೇದೆ ಕೊವಿಡ್  ಟೆಸ್ಟ್ ಕ್ರಮ ಸಂಖ್ಯೆ 9601, ಕೊರೋನಾ ಪಾಸಿಟಿವ್ ಬಂದ ಕ್ರಮ ಸಂಖ್ಯೆ 10396 ಆಗಿದೆ. ಬೇಗೂರು ಠಾಣೆಗೆ ಆರೋಗ್ಯ ಇಲಾಖೆ ಕಳಿಸಿದ ಕೊವಿಡ್-19 ವರದಿಯಲ್ಲಿ ಪ್ರಕರಣ ಬಯಲಾಗಿದೆ. ಆ ಮೂಲಕ ಬೇಗೂರು ಠಾಣೆಯಲ್ಲಿ ಯಾರಿಗೂ ಕರೋನಾ ಇಲ್ಲ ಎಂಬುವುದು ಸಾಬೀತಾಗಿದೆ.
ಹೌಸ್ ಕೀಪಿಂಗ್ ಸಿಬ್ಬಂದಿಗೆ ಕರೋನಾ
ಶಿವಾಜಿನಗರ ಹೊಟೇಲೊಂದರ ಹೌಸ್ ಕೀಪಿಂಗ್ ಸಿಬ್ಬಂದಿಗೆ ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಆ ವ್ಯಕ್ತಿ ವಾಸಿಸುತ್ತಿದ್ದ ಕಟ್ಟಡದ ಸುತ್ತಮುತ್ತ ಪ್ರದೇಶವನ್ನು ಸಂಪೂರ್ಣವಾಗಿ ಸೀಲ್ ಡೌನ್ ಮಾಡಿ ಬಿಬಿಎಂಪಿ ಆದೇಶ ಹೊರಡಿಸಿದೆ. ಜನರ ಆರೋಗ್ಯ ಸುರಕ್ಷತೆ ದೃಷ್ಟಿಯಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿಗಳು ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಈ ನಿರ್ಧಾರಕ್ಕೆ ಬಂದಿದೆ ಎಂದು ಪುಲಕೇಶಿನಗರದ ಎಸಿಪಿ ಫಾತಿಮಾ ಇಂದು ಸ್ಥಳಕ್ಕೆ ಭೇಟಿ ನೀಡಿ ಜನತೆಗೆ ತಿಳಿಸಿದ್ದಾರೆ.