Thursday, 12th December 2024

ಪ್ರಯಾಣಿಕರ ರೈಲುಗಳು ಭಾಗಶಃ ಪುನರಾರಂಭ

ದೆಹಲಿ:

ಮೂರನೇ ಹಂತದ ಲಾಕ್‌ಡೌನ್ ಕೊನೆಗೊಳ್ಳುತ್ತಿರುವ ಬೆನ್ನಲ್ಲೇ ಭಾರತೀಯ ರೈಲ್ವೆ  ಪ್ರಯಾಣಿಕ ರೈಲು ಸಂಚಾರವನ್ನು  ಪುನರಾಂಭಿಸಿದೆ.

ಆರಂಭದಲ್ಲಿ 15 ಜೋಡಿ ರೈಲುಗಳ ಸಂಚಾರ ಪ್ರಾರಂಭಗೊಂಡಿದ್ದು, ಈವರೆಗೆ 8 ರೈಲುಗಳ  ಸಂಚಾರ ಪ್ರಾರಂಭವಾಗಿದೆ. ಮೂರು ರೈಲುಗಳು ದೆಹಲಿಯಿಂದ ಹಾಗೂ ಉಳಿದ 5 ರೈಲುಗಳು ಇತರ ನಗರದಿಂದ ದೆಹಲಿಗೆ ಪ್ರಯಾಣಿಸುತ್ತಿವೆ ಎಂದು ರೈಲ್ವೆ ಸಚಿವಾಲಯ ತಳಿಸಿದೆ.

ದೆಹಲಿಯಿಂದ 3460 ಪ್ರಯಾಣಿಕರು ಪ್ರಯಾಣ ಬೆಳೆಸಿದ್ದಾರೆ. ಬುಧವಾರ ಪ್ರಯಾಣ ಆರಂಭಿಸಿರುವ ರೈಲುಗಳು ಹವಾನಿಯಂತ್ರಿತ ದರ್ಜೆ, ಮೊದಲ ದರ್ಜೆ, ದ್ವಿತೀಯ ಮತ್ತು 3ನೇಎಸಿ ದರ್ಜೆಯ ಬೋಗಿಗಳನ್ನು ಹೊಂದಿವೆ. ಭಾರತೀಯ ರೈಲ್ವೆ ನಿರ್ವಹಿಸುತ್ತಿರುವ ಶ್ರಮಿಕ್ ವಿಶೇಷ ರೈಲುಗಳ ಜತೆಗೆ ಹೆಚ್ಚವರಿ ರೈಲುಗಳ ಸೇವೆ ಇರುತ್ತದೆ.