Sunday, 15th December 2024

ಪ್ರಾಥಮಿಕ ಸಂಪರ್ಕಗಳಿಗೆ ಸರಕಾರಿ ಕೊಠಡಿಯಲ್ಲಿ ಕ್ಟಾರೆಂಟೀನ್

ಬೆಂಗಳೂರು:
ಸಾರ್ವಜನಿಕ ಹಿತಾಸಕ್ತಿ ಹಿನ್ನಲೆಯಲ್ಲಿ ಕರೋನಾ ಸೋಂಕು ಹರಡದಂತೆ ಪ್ರಾಥಮಿಕ ಸಂಪರ್ಕ ವ್ಯಕ್ತಿಗಳನ್ನು ಕ್ಟಾರೆಂಟೀನ್ ಸೌಲಭ್ಯ ವುಳ್ಳ ಕೊಠಡಿಯಲ್ಲಿ ಇರಲಿಸಲು ಆರೋಗ್ಯ ಇಲಾಖೆ ತೀರ್ಮಾನಿಸಿದೆ.
ಪ್ರಾಥಮಿಕ ಸಂರ್ಕಗಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡುವ ಕುರಿತು ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಒಟ್ಟು ಕರೋನಾ ಸೋಂಕಿತ ಪ್ರಕರಣಗಳಲ್ಲಿ ಶೇ.೨೫  ರಷ್ಟು ಸೋಂಕಿತರು ಪ್ರಾಥಮಿಕ ಸಂಪರ್ಕದವರೆಂದು ಪರಿಗಣಿಸಲಾಗಿದೆ. ಇದುವರೆಗೆ ಪ್ರಾಥಮಿಕ ಸಂಪರ್ಕ ವ್ಯಕ್ತಿಗಳನ್ನು ಅವರ ಮನೆಗಳಲ್ಲಿ ಪ್ರತ್ಯೇಕ ವಾಗಿರಿಸಲಾಗಿತ್ತು. ಹೋಮ್ ಕ್ಟಾರೇಂಟಿನ್ ಶಿಸ್ತನ್ನು ಉಲ್ಲಂಘನೆ ಮಾಡುತ್ತಿರುವ ದೂರುಗಳು ಕೇಳಿ ಬಂದಿದ್ದು ಇಲಾಖೆ ಈ ನಿರ್ಧಾರ ತೆಗೆದುಕೊಂಡಿದೆ.
ಪಾಸಿಟಿವ್ ಎಂದು ಪರಿಗಣಿಸಲಾಗಿರುವ ಪ್ರಕರಣಗಳನ್ನು ಪ್ರಾಥಮಿಕ ಸಂಪರ್ಕಗಳನ್ನು ಎರಡು ವರ್ಗಗಳಾಗಿ ವಿಂಗಡಣೆ ಮಾಡಲಾಗಿದೆ. ೬೦ ವರ್ಷ ಮೀರಿದ ವ್ಯಕ್ತಿಗಳು ಮಧುಮೇಹ, ಅಧಿಕ ರಕ್ತದೊತ್ತಡ, ಎಚ್ ಐವಿ ಪಾಸೀಟಿವ್, ಅಂಗಾಂಗ ಕಸಿ, ರೋಗ ನಿರೋಧಕ ಶಕ್ತಿ ಕಡಿಮೆ ಇರುವರು ಅತ್ಯಂತ ಅಪಾಯಕಾರಿ ಸಂಪರ್ಕಗಳು. ಆರೋಗ್ಯವಂತರು ಮತ್ತು ಅವರ ಮೇಲೆ ಪ್ರಸ್ತಾಪಿಸಿರುವ ಯಾವುದೇ ಸ್ಥಿತಿಗಳಿಂದ ಬಳಲುತ್ತಿರುವರು ಕಡಿಮೆ ಅಪಾಯದ ಸಂಪರ್ಕಗಳೆಂದು ವಿಂಗಡಿಸಲಾಗಿದೆ. ಇದನ್ನು ಪತ್ತೆ ಮಾಡುವ ಜವಾಬ್ದಾರಿ‌ ವೈದ್ಯಕೀಯ ತಂಡಕ್ಕೆ ವಹಿಸಲಾಗಿದೆ ಎಂದು ತಿಳಿಸಿದೆ.
ಅಪಾಯಕಾರಿ ಪ್ರಾಥಮಿಕ ಸಂಪರ್ಕಗಳನ್ನು ವೈದ್ಯಕೀಯ ಸೌಲಭ್ಯಗಳೊಂದಿಗೆ ಸರಕಾರಿ ಕ್ಟಾರೆಂಟೀನ್ ಕೇಂದ್ರಕ್ಕೆ ಸ್ಥಳಾಂತರಿಸಬೇಕು‌. ಕಡಿಮೆ ಅಪಾಯ ಎಂದು ಪರಿಗಣಿಸಿರುವ ಪ್ರಾಥಮಿಕ ಸಂಪರ್ಕಗಳನ್ನು ವಸತಿ ಸೌಲಭ್ಯ ಇರುವ (ಹೋಟೆಲ್ ಅಥವಾ ಹಾಸ್ಟೆಲ್ )ಕೊಠಡಿಗಳಿಗೆ ಕರೆದೊಯ್ಯಬೇಕು. ಎರಡು ಹಾಸಿಗೆಗಳ‌ ನಡುವೆ‌ ಎರಡು ಅಡಿ ಅಂತರ ಇರಬೇಕು. ಈ ಕೇಂದ್ರಗಳು ಕನಿಷ್ಠ  ೫೦ ಹಾಸಿಗೆಗಳನ್ನು ಹೊಂದಿರಬೇಕು. ಅಗತ್ಯ ವೈದ್ಯಕೀಯ ಸೌಲಭ್ಯಗಳಿರಬೇಕು ಎಂದು ಸೂಚಿಸಲಾಗಿದೆ.
ಪ್ರಾಥಮಿಕ ಸಂಪರ್ಕಿತರಿಗೆ ಮೀಸಲಿಟ್ಟ ಕ್ಟಾರೆಂಟೀನ್ ಕೇಂದ್ರಗಳಿಗೆ ಆಂಬುಲೆನ್ಸ್, ಅಥವಾ ವಾಹನಗಳ ಮೂಲಕ ಕಳುಹಿಸಬೇಕು. ಈ ವಾಹನಗಳನ್ನು ಕರೋ‌ನಾ ಸೋಂಕಿತರಿಗೆ ಬಳಸಸರಬಾರದು. ಇಲಾಖೆ‌ ಸೂಚಿಸಿರುವ ನಿಯಮಾವಳಿ ಪಾಲಿಸಲು ಆದೇಶಿಸಿದೆ.