Monday, 25th November 2024

ಬಿಎಂಟಿಸಿ ಬಸ್‌ನಲ್ಲಿ ಮತ್ತೆ ಟಿಕೆಟ್ ನೀಡಲು ಚಿಂತನೆ

ವಿಶ್ವವಾಣಿ ಸುದ್ದಿಮನೆ

ಬೆಂಗಳೂರು

ಪ್ರಯಾಣಿಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪಾಸ್ ಜತೆಗೆ ಪ್ರಯಾಣಿಕರಿಗೆ ಟಿಕೆಟ್ ನೀಡುವ ಬಗ್ಗೆ ಚಿಂತನೆ ನಡೆಸಿದೆ.
ಬಸ್ ಸಂಚಾರ ಆರಂಭಿಸಿದರೂ ಪ್ರಯಾಣಿಕರು ಪಾಸ್ ತೆಗೆದುಕೊಳ್ಳಬೇಕೆಂದು ತಾಕೀತು ಮಾಡಲಾಯಿತು. ನಾಲ್ಕೈದು ಕಿ.ಮೀ ದೂರ ಹೋಗಲು 70 ರು ಮೌಲ್ಯದ ದಿನದ ಪಾಸನ್ನು ತೆಗೆದುಕೊಳ್ಳುವಂತೆ ಸೂಚಿಸಲಾಯಿತು. ಇದರಿಂದ ಪ್ರಯಾಣಿಕರಿಂದ ಭಾರೀ ವಿರೋಧ ವ್ಯಕ್ತವಾಗಿರುವ ಹಿನ್ನೆೆಲೆಯಲ್ಲಿ ಈಗ ಮತ್ತೆ ಟಿಕೆಟ್ ನೀಡುವಂತಹ ವ್ಯವಸ್ಥೆಯನ್ನು ಜಾರಿಗೆ ತರಲು ಉದ್ದೇಶಿಸಿದೆ.

ಸಾರಿಗೆ ಸಂಸ್ಥೆಯಲ್ಲಿ ಪೇಪರ್ ಟಿಕೆಟ್ ನೀಡದರೆ ಕರೋನಾ ಹೇಗೆ ಬರುತ್ತದೆ. ನಿರ್ವಾಹಕರಿಗೆ ಕೈಗವಸು, ಸ್ಯಾನಿಟೈಸರ್ ನೀಡಿದಲ್ಲಿ ಸೋಂಕು ಹರಡುವುದಿಲ್ಲ ಈಗಾಗಲೇ  ಮಾಸ್‌ಕ್‌ ಹಾಗೂ ಫೇಸ್ ಶೀಲ್‌ಡ್‌‌ಗಳನ್ನು ವಿತರಿಸಿರುವುದರಿಂದ ಸೋಂಕು ತಗುಲುವುದಿಲ್ಲ. ಹೀಗಿದ್ದಾಗ ಟಿಕೆಟ್ ನೀಡಿದಲ್ಲಿ ಸಮಸ್ಯೆ ಎಂಬುದು ಎಲ್ಲಿ ಬರುತ್ತದೆ. ಟಿಕೆಟ್ ನೀಡಿದರೆ ಕರೋನಾ ಸೋಂಕು ಹರಡುತ್ತದೆ ಎನ್ನುವುದಾದರೆ ಪಾಸ್‌ನಿಂದ, ದಿನದ ಪಾಸಿನಿಂದಲೂ ಬರಬಹುದಲ್ಲವೇ ಎಂದು ಪ್ರಯಾಣಿಕರು ಬಿಎಂಟಿಸಿಗೆ ಪ್ರಶ್ನೆಗಳ ಸುರಿಮಳೆಗರೆದಿರುವುದರಿಂದ ಎಚ್ಚೆತ್ತುಕೊಂಡಿರುವ ಬಿಎಂಟಿಸಿ 50 ರು ದಿನದ ಪಾಸನ್ನು ಪರಿಚಯಿಸುವ ಯೋಜನೆಯಿಂದ ಹಿಂದೆ ಸರಿದು ಟಿಕೆಟ್ ನೀಟುವಂತಹ ವ್ಯವಸ್ಥೆ ಮಾಡಲು ಮುಂದಾಗಿದೆ.

ಲಾಕ್‌ಡೌನ್ ಸಂದರ್ಭದಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇರುವುದರಿಂದ ಚಿಲ್ಲರೆ ಸಮಸ್ಯೆ ಎದುರಾಗಬಹುದು ಎಂಬ ಕಾರಣಕ್ಕೆ ಪಾಸುಗಳನ್ನು ಪರಿಚಯಿಸಲಾಗಿದೆ. ಈಗ ಪ್ರಯಾಣಿಕರು ಟಿಕೆಟ್ ನೀಡುವಂತೆ ಒತ್ತಾಯ ಮಾಡಿರುವುದರಿಂದಾಗಿ ಮತ್ತೆ ಟಿಕೆಟ್ ವ್ಯವಸ್ಥೆ ಮಾಡಲಾಗುವುದು. ಪ್ರಯಾಣದ ಕನಿಷ್ಠ 5 ರು ನಿಂದ ಆರಂಭವಾಗಲಿದೆ. ನಂತರ ಪ್ರಯಾಣದ ದೂರಕ್ಕೆ ಟಿಕೆಟ್ ದರ ನಿಗದಿಯಾಗಲಿದೆ. ಟಿಕೆಟ್ ದರ ಚಿಲ್ಲರೆ ನೀಡುವಂತಹ ವ್ಯವಸ್ಥೆಯೂ ಹೆಚ್ಚಿರುವುದಿಲ್ಲ ಎಂದು  ಹೇಳಿರುವ ಬಿಎಂಟಿಸಿ ಅಧಿಕಾರಿಗಳು 5,10,15,20,25 ರು ದರದ ಟಿಕೆಟ್‌ಗಳು ಇರುತ್ತವೆ ಎಂದು ಸುಳಿವು ನೀಡಿದ್ದಾರೆ.