Sunday, 15th December 2024

ಬಿಜೆಪಿ ಮಾತ್ರವೇ ಕಾರ್ಯಕರ್ತರ ಆಯ್ಕೆ ಮಾಡಿದೆ

ಕಾರಟಗಿ:

ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ, ಮಲ್ಲಿಕಾರ್ಜುನ್ ಖರ್ಗೆ ಲೋಕಸಭೆ ಚುನಾವಣೆಯಲ್ಲ್ಲಿ ಸೋತಿದ್ದಾರೆ, ಆದರೂ ಈಗ ರಾಜ್ಯಸಭೆಗೆ ಕಳುಹಿಸಲು ಅವರ ಪಕ್ಷಗಳು ನಿರ್ಧರಿಸಿವೆ. ಆದರೆ, ಬಿಜೆಪಿ ಮಾತ್ರ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದರು.

ವಾಣಿಜ್ಯ ಪಟ್ಟಣ ಕಾರಟಗಿಯಲ್ಲಿ ಸೋಮವಾರ ನಡೆದ ಬಳ್ಳಾರಿ ವಿಭಾಗ ಬಿಜೆಪಿ ಸಂಘಟನಾತ್ಮಕ ಬೈಠಕ್‌ನಲ್ಲಿ ಭಾಗವಹಿಸಿದ ಬಳಿಕ ಸಂಜೆ ಅವರನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.  ಈಗ ರಾಜ್ಯಸಭೆ ವಿಚಾರವಾಗಿ ಎಲ್ಲರ ಕಣ್ಣ ಅವರ ಅವರ ಪಕ್ಷಗಳ ಹೈಕಮಾಂಡ್ ಮೇಲಿವೆ.
ಯಾವುದೇ ರಾಜಕೀಯ ಹಿನ್ನೆಲೆ ಹೊಂದಿರದ ರಾಯಚೂರಿನ ಅಶೋಕ ಗಸ್ತಿ ಮತ್ತು ಬೆಳಗಾವಿಯ ಈರಣ್ಣ ಕಡಾಡಿಯವರಿಗೆ ರಾಜ್ಯಸಭಾ ಟಿಕೆಟ್ ನೀಡಿದೆ. ಇದು ಭಾರತೀಯ ಜನತಾ ಪಕ್ಷದ ಪ್ರಜಾಪ್ರಭುತ್ವ. ಇವರಿಗೆ ಯಾವುದೇ ರಾಜಕೀಯ ಹಿನ್ನೆಲೆ ಇಲ್ಲ. ಒದಗಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು. ಟಿಕೆಟ್ ನೀಡುವ ವಿಚಾರವಾಗಿ ಕಾಂಗ್ರೆಸ್ ಹಾಗೂ ಜೆಡಿ.ಎಸ್ ವಿರುದ್ದ ವ್ಯಂಗ್ಯವಾಡಿದ ಕಟೀಲ್ ಜನ ದೇವೆಗೌಡ ಹಾಗೂ ಮಲ್ಲಿಕಾರ್ಜುನ ಖರ್ಗೆಯನ್ನು ಸೋಲಿಸಿದಾರೆ. ಆದ್ರೂ ರಾಜ್ಯಸಭೆಗೆ ಹೋಗತ್ತಿದಾರೆಂದು ಪರೋಕ್ಷವಾಗಿ ಲೇವಡಿ ಮಾಡಿದರು.

ಬಿಜೆಪಿ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡಿದ್ದು ಪಕ್ಷದ ವಿಶೇಷ. ರಾಯಚೂರಿನ ಅಶೋಕ ಗಸ್ತಿ ಹಾಗೂ ಬೆಳಗಾವಿಯ ಈರಣ್ಣ ಕಡಾಡಿ ಯಾವುದೇ ಆಸೆ ಇಲ್ಲದೆ ಪಾರ್ಟಿ ಕೆಲಸ ಮಾಡಿದವರು. ಅವರ ಕೆಲಸ ಗುರುತಿಸಿ ಪಕ್ಷ ಟಿಕೆಟ್ ನೀಡಿದೆ. ಇಬ್ಬರಿಗೂ ಅಭಿನಂದನೆ ಸಲ್ಲಿಸಿದರು.

ರಾಜ್ಯಸಭೆಗೆ ತೀವ್ರ ಪೈಪೋಟಿ ಮಧ್ಯೆ ಅಚ್ಚರಿ ಹೆಸರು ಕೇಳಿ ಬಂದ ಹಿನ್ನಲೆ ಪ್ರಭಾಕರ್ ಕೋರೆ, ರಮೇಶ್ ಕತ್ತಿಗೆ ಶಾಕ್ ಆಗಿದೆ. ರಾಜ್ಯಸಭೆಗೆ ಅನೀರಿಕ್ಷಿತ ಹೆಸರುಗಳನ್ನು ಪ್ರಕಟಿಸಿದ ಹೈ ಕಮಾಂಡ್ ನಿರ್ಧಾರದಿಂದ ರಾಜ್ಯ ಸರ್ಕಾರಕ್ಕೆ ಮುಜುಗರವಾಗಿಲ್ಲವೇ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಟೀಲ್, ಸರ್ವರ ಸಹಮತದಿಂದಲೇ ಹೈ ಕಮಾಂಡ್ ನಿರ್ಧಾರ ಕೈಗೊಳ್ಳುತ್ತದೆ. ೧೫ ಹೆಸರುಗಳನ್ನು ನಾವು ಕೇಂದ್ರಕ್ಕೆ ನೀಡಿದ್ದೇವು. ಪಕ್ಷದ ನಾಯಕರು ಎಲ್ಲರೊಡನೆ ಚರ್ಚಿಸಿಯೇ ಹೆಸರುಗಳನ್ನು ಫೈನಲ್ ಮಾಡುತ್ತಾರೆ. ಗಸ್ತಿ ಮತ್ತು ಕಡಾಡಿ ಆಯ್ಕೆ ಹೈಕಮಾಂಡ ನಿರ್ಣಯ ಎಂದರು.

ನಮ್ಮಲ್ಲಿ ಯಾವಾಗಲೂ ಹೀಗೆ ಸಾಮಾನ್ಯ ಕಾರ್ಯಕರ್ತನಿಗೆ ನ್ಯಾಯ ಸಿಗತ್ತೆ, ಕಾರ್ಯಕರ್ತರನ್ನು ಕಡೆಗಣಿಸಿದ ಕಾರಣ ಕಾಂಗ್ರೆಸ್, ಜೆಡಿಎಸ್ ಈ ಸ್ಥಿತಿಗೆ ಬಂದಿವೆ. ಬಿಜೆಪಿಯಲ್ಲಿ ಪಕ್ಷದ ಕಾರ್ಯಕರ್ತರೂ ಸಹ ಉನ್ನತ ಹುದ್ದೆ ಹೊಂದಬಹುದು ಎನ್ನುವುದಕ್ಕೆ ಇದೊಂದು ಉದಾಹರಣೆ. ಹೈಕಮಾಂಡ್ ನಿರ್ಣಯದಿಂದ ಪಕ್ಷದ ಕಾರ್ಯಕರ್ತರದಲ್ಲಿ ವಿಶ್ವಾಸ ಹೆಚ್ಚಿದೆ. ನಿ?ಯಿಂದ ಪಕ್ಷ ಸಂಘಟನೆ ಮಾಡಿದರೆ ಇಂದಲ್ಲ ನಾಳೆ ಉತ್ತಮ ಸ್ಥಾನ ದೊರೆಯಲಿದೆ ಎನ್ನುವ ನಂಬಿಕೆ ಪ್ರತಿಯೊಬ್ಬ ಕಾರ್ಯಕರ್ತರಲ್ಲಿ ಮೂಡಿದೆ.
ಚಹಾ ಮಾರುತ್ತಿದ್ದ ವ್ಯಕ್ತಿಯೊಬ್ಬರು ಇಂದು ದೇಶದ ಪ್ರಧಾನಿಯಾಗಿದ್ದಾರೆ. ಬೂತ್ ಮಟ್ಟದಿಂದ ಪಕ್ಷ ಸಂಘಟಿಸಿದ ಅಮಿತ್ ಶಾ ಕೇಂದ್ರ ಗೃಹ ಮಂತ್ರಿಯಾಗಿದ್ದಾರೆ. ಸಾಮಾನ್ಯ ಕಾರ್ಯಕರ್ತನಾದ ನಾನು ರಾಜ್ಯಾಧ್ಯಕ್ಷನಾಗಿದ್ದೇನೆ. ಇವೆಲ್ಲ ಬಿಜೆಪಿಯಲ್ಲಿ ಮಾತ್ರ ಸಾಧ್ಯ.