ಬೀಜಿಂಗ್,
ಬೀಜಿಂಗ್ ನಲ್ಲಿ ದೇಶೀಯವಾಗಿ ಹರಡಿದ 27 ಹೊಸ ಕರೋನ ಸೋಂಕು ಪ್ರಕರಣಗಳು ಮತ್ತು ಮೂರು ಹೊಸ ಲಕ್ಷಣರಹಿತ ಪ್ರಕರಣಗಳು ಸೋಮವಾರ ವರದಿಯಾಗಿದೆ ಎಂದು ಪುರಸಭೆಯ ಆರೋಗ್ಯ ಆಯೋಗ ಮಂಗಳವಾರ ತಿಳಿಸಿದೆ.
ಸೋಮವಾರದ ವೇಳೆಗೆ, ಬೀಜಿಂಗ್ ನಲ್ಲಿ ದೇಶೀಯವಾಗಿ ಹಬ್ಬಿದ 526 ಪ್ರಕರಣಗಳು ವರದಿಯಾಗಿದ್ದು ಇದರಲ್ಲಿ 411 ಮಂದಿ ಚೇತರಿಸಿಕೊಂಡ ನಂತರ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. 9 ಜನರು ಮೃತಪ ಟ್ಟಿದ್ದಾರೆ ಇನ್ನೂ 106 ರೋಗಿಗಳು ವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಮತ್ತು 10 ಲಕ್ಷಣರಹಿತ ಪ್ರಕರಣಗಳು ವೈದ್ಯಕೀಯ ವೀಕ್ಷಣೆಯಲ್ಲಿವೆ. ಬೀಜಿಂಗ್‌ನಲ್ಲಿ ಇಲ್ಲಿಯವರೆಗೆ 174 ಆಮದು ಪ್ರಕರಣಗಳು ವರದಿಯಾಗಿದೆ ಆಯೋಗ ಹೇಳಿದೆ.