Monday, 28th October 2024

ಬೆಂಗಳೂರಿನಿಂದ ತವರಿನತ್ತ ಹೊರಟ ವಲಸೆ ಕಾರ್ಮಿಕರಿಗೆ ಸಚಿವರಿಂದ ಸಹಾಯ ಹಸ್ತ.

 

ಬಸ್ ನಿಲ್ದಾಣದಲ್ಲಿದ ಕಾರ್ಮಿಕರಿಗೆ ಉಚಿತ ಊಟ, ತಿಂಡಿ, ನೀರು ವಿತರಣೆ.

 

ಕೆಲಸವನ್ನ ಅರಸಿ ಬೆಂಗಳೂರಿಗೆ ಹೊರ ರಾಜ್ಯ, ಜಿಲ್ಲೆಗಳಿಂದ ಹೆಚ್ಚೆಚ್ಚು ಜನ ವಲಸೆ ಬಂದಿದ್ದರು. ಆದರೆ ಕೊರೋನ ದಾಳಿಯಿಂದ ಅವರೆಲ್ಲ ಬೆಂಗಳೂರಿನಲ್ಲಿ ಇರೋದಕ್ಕು ಆಗದೆ ತಮ್ಮ ಊರುಗಳಿಗೆ ಹೋಗೋದಕ್ಕು ಆಗದೆ ಪರದಾಡುತ್ತಿದ್ದರು. ಈಗ ಸರಕಾರ ವಲಸೆ ಕಾರ್ಮಿಕರ ಕಷ್ಟಗಳನ್ನರಿತು ಅವರಿಗೆ ತಮ್ಮ ಊರುಗಳಿಗೆ ಮರಳಬಹುದು ಎಂಬ ಸೂಚನೆಯನ್ನ ಕೊಟ್ಟಿದ್ದು ಬಡ ಕಾರ್ಮಿಕರಿಗಾಗೇ ಉಚಿತ ಬಸ್ ಸೇವೆಗಳನ್ನ ಮಾಡಿದೆ. ಹೇಗಾದರು ಸರಿ ಊರುಗಳಿಗೆ ಹೋಗಲೆ ಬೇಕು ಅಂತ ಏಣಿಕೆಗು ಸಿಗದಷ್ಟು ವಲಸಿಗಲು ಊಟ, ತಿಂಡಿ ಬಿಟ್ಟು ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಬಂದು ಕೂತಿದ್ದಾರೆ.

ಹಾಗಾಗಿ ಇಂದು ಮೆಜೆಸ್ಟಿಕ್ ನಲ್ಲಿ ಇದ್ದಂತ ಸಾವಿರಾರು ವಲಸೆ ಕಾರ್ಮಿಕರ ಹಸಿವು ನೀಗಿಸುವ ಕೆಲಸವನ್ನು ಬಿಜೆಪಿಯ ಸಚಿವರು, ವಿಧಾನ ಪರಿಷತ್ ಸದಸ್ಯರು ಮಾಡಿದ್ದಾರೆ. ಎಲ್ಲರುಗೂ ಉಚಿತ ಊಟ, ಬ್ರೆಡ್, ಬಿಸ್ಕೇಟ್, ನೀರನ್ನ ವಿತರಣೆ ಮಾಡಿದ್ದಾರೆ.‌

ಉಪಮುಖ್ಯ ಮಂತ್ರಿ ಲಕ್ಷಣ ಸವದಿ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ. ಗೋಪಾಲಯ್ಯ , ಸಹಕಾರ ಸಚಿವ ಎಸ್.ಟಿ ಸೋಮಶೇಖರ್, ಹಾಗೂ ವಿಧಾನ ಪರಿಷತ್ ಸದಸ್ಯರುಗಳಾದ ರವಿಕುಮಾರ್, ತಾರ ಅವರು ಬೆಂಗಳೂರಿನಿಂದ ಅವರ ತವರುಗಳತ್ತ ಹೋಗುತ್ತಿರುವ ಕಾರ್ಮಿಕರಿಗೆ ಬಸ್ ನಿಲ್ದಾಣದಲ್ಲಿ ಊಟ, ತಿಂಡಿ, ನೀರಿಗೆ ಕೊರತೆ ಆಗದಂತೆ ನೋಡಿಕೊಂಡಿದ್ದು ಅವರ ಕಷ್ಟಕ್ಕೆ ಸ್ಪಂದಿಸಿದ್ದಾರೆ.