Sunday, 24th November 2024

ಬೆಂಗಳೂರಿನ 22 ಝೋನ್‌ಗಳು 21 ಕ್ಕೆ ಇಳಿಕೆ

ಬೆಂಗಳೂರಿ:
ಬೆಂಗಳೂರಿನಲ್ಲಿ ಇದ್ದ 22 ಕಂಟೈನ್ಮೆಂಟ್ ಝೋನ್ ಗಳನ್ನು 21ಕ್ಕೆ ಇಳಿಕೆ ಮಾಡಲಾಗಿದೆ. ಶಾಕಾಂಬರಿ ನಗರ ವಾರ್ಡ್‌ನ್ನು ಗ್ರೀನ್ ಝೋನ್ ಗೆ  ಪಾಲಿಕೆ ಸೇರಿಸಿದೆ. ಇನ್ನುಳಿದ 21 ವಾರ್ಡ್‌ಗಳು ಕಂಟೈನ್ಮೆಂಟ್ ಝೋನ್‌ನಲ್ಲಿವೆ.
ಬಿಳೇಕಹಳ್ಳಿ ವಾರ್ಡ್, ಹೊಂಗಸಂದ್ರ, ಹಗದೂರು, ರಾಧಾಕೃಷ್ಣ ಟೆಂಪಲ್ , ಮಾರುತಿ ಸೇವಾ ನಗರ, ರಾಮಸ್ವಾಮಿ ಪಾಳ್ಯ, ಪುಲಿಕೇಶಿ ನಗರ, ವಸಂತ ನಗರ, ಸುಧಾಮನಗರ, ಹೊಸಹಳ್ಳಿ, ಹಂಪಿ ನಗರ, ಬಾಪೂಜಿನಗರ , ದೀಪಾಂಜಲಿ ನಗರ, ಕರೀಸಂದ್ರ, ಭೈರಸಂದ್ರ, ಪಾದರಾಯನಪುರ, ಜಗಜೀವರಾಮ ನಗರ, ಚಲುವಾದಿಪಾಳ್ಯ, ಕೆ.ಆರ್‌.ಮಾರ್ಕೆಟ್, ಯಶವಂತಪುರ, ಆರ್.ಆರ್.ನಗರ  ಈ ಎಲ್ಲಾ ವಾರ್ಡ್‌ಗಳು ಕಂಟೈನ್ಮೆಂಟ್ ಜೋನ್ ವಾರ್ಡ್‌ಗಳಾಗಿವೆ..
ವೆಸ್ಟ್ ಜೋನ್ ನಲ್ಲಿ ಒಟ್ಟು 46 ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ 21 ಜನರು ಗುಣಮುಖರಾಗಿ ಮೆನೆಗೆ ತೆರಳಿದ್ದಾರೆ.‌‌ವೆಸ್ಟ್ ಝೋನ್‌ನಲ್ಲಿ ಕಳೆದ 5 ದಿನಗಳಿಂದಲೂ ಕೊರೋನಾ ಹೆಚ್ಚಿದೆ. ಬೊಮ್ಮನಹಳ್ಳಿಯಲ್ಲಿ 41 ಪಾಸಿಟಿವ್ ಕೇಸ್ ಇದ್ದು 7 ಮಂದಿ ಗುಣಮುಖ ಹಾಗೂ ದಕ್ಷಿಣ ವಲಯದಲ್ಲಿ 23 ಪಾಸಿಟಿವ್ ಕೇಸ್ ಇದ್ದು 15 ಮಂದಿ ಗುಣಮುಖರಾಗಿದ್ದಾರೆ..
*ಪ್ಲಾಸ್ಮಾ ಚಿಕಿತ್ಸೆಯ ಕ್ಲಿನಿಕಲ್ ಪ್ರಯೋಗ*
ಐಸಿಎಂಆರ್ ಆರೋಗ್ಯ ಸಂಶೋಧನಾ ಸಚಿವಾಲಯವು ಕೋವಿಡ್19 ಗಾಗಿ ಪ್ಲಾಸ್ಮಾ ಚಿಕಿತ್ಸೆಯ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಲು ಕಿಮ್ಸ್- ಹುಬ್ಬಳ್ಳಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವನ್ನ ಅನುಮೋದಿಸಿದೆ.