Saturday, 14th December 2024

ಬೆಂಗಳೂರು ವಿವಿಯಲ್ಲಿ ಸರಳ ಅಂಬೇಡ್ಕರ್ ಜಯಂತಿ

ಬೆಂಗಳೂರು:

ಮಹಾನ್ ಮಾನವತಾವಾದಿ, ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ೧೨೯ ನೇ ವರ್ಷದ ಜನ್ಮ ದಿನದ ಅಂಗವಾಗಿ ಬೆಂಗಳೂರು ವಿಶ್ವವಿದ್ಯಾಲಯದ ಬಾಬಾ ಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಲ್ಲಿ ಪ್ರತಿಮೆಗೆ ಮಾಲಾರ್ಪಣೆ ಹಾಗೂ ಪುಷ್ಪಅರ್ಚನೆ ಮಾಡಿ ದೀಪ ಬೆಳಗುವುದರ ಮೂಲಕ ನೆರವೇರಿಸಲಾಯಿತು.

ಫೋಟೋದಲ್ಲಿ :
ಬೆಂ. ವಿ. ವಿ ಯ ಕುಲಪತಿ ಡಾ. ಪ್ರೊ ವೇಣುಗೋಪಾಲ್ ಕೆ ಆರ್, ಬೆಂ. ವಿ. ವಿ ಯ ಕುಲಸಚಿವ ಡಾ. ಪ್ರೊ. ಬಿ ಕೆ ರವಿ, ಖ್ಯಾತ ಕವಿ ಸಿದ್ಧಲಿಂಗಯ್ಯ ಹಾಗೂ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ ಎನ್ ಸಂಜೀವ್ ರಾಜ್ ಇದ್ದಾರೆ.

ಸರಳವಾಗಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಬೆಂ. ವಿ. ವಿ ಯ ವಿಶೇಷ ಅಧಿಕಾರಿ ಡಾ. ಪ್ರೊ. ನಾರಾಯಣ ಸ್ವಾಮಿ ಮತ್ತು ಇತರ ಶಿಕ್ಷಣ, ಶಿಕ್ಷಣೇತರ ಸಿಬ್ಬಂದಿ ಪಾಲ್ಗೊಂಡಿದ್ದರು.