Saturday, 14th December 2024

ಭದ್ರಕೋಟೆಗಳಲ್ಲೇ ಜೆಡಿಎಸ್ ಖೇಲ್ ಖತಂ?

ಜೆಡಿಎಸ್‌ಗೆ ಮಹಾಲಕ್ಷ್ಮೀ ಲೇಔಟ್, ಕೆ.ಆರ್.ಪೇಟೆ, ಹುಣಸೂರಿನಲ್ಲಿ ನೆಲೆ ಕಳೆದುಕೊಳ್ಳುವ ಭೀತಿ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು:
ಉಪ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳ ಸೆಣೆಸಾಟದಲ್ಲಿ ಪ್ರಾಾದೇಶಿಕ ಪಕ್ಷ ಗೆಲ್ಲುವುದು ಸವಾಲಾಗಿದ್ದರೂ ತನ್ನ ಭದ್ರಕೋಟೆಗಳನ್ನು ಬಲಪಡಿಸಿಕೊಳ್ಳುವುದು ಅನಿವಾರ್ಯವಾಗಿದೆ. ಜೆಡಿಎಸ್ ಪ್ರಬಲವಾಗಿರುವ ಮಹಾಲಕ್ಷ್ಮಿಿ ಲೇಔಟ್, ಕೆ.ಆರ್.ಪೇಟೆ, ಹುಣಸೂರಿನಲ್ಲಿ ತನ್ನ ನೆಲೆ ಕಳೆದುಕೊಳ್ಳುವ ಭೀತಿ ಶುರುವಾಗಿದೆ.
ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಸೋತರೆ ಪಕ್ಷ ಹೀನಾಯ ಸ್ಥಿಿತಿಗೆ ತಲುಪುವುದು ಖಚಿತ. ತನ್ನ ಪಕ್ಷ ಬಿಟ್ಟರೆಂಬ ಕಾರಣಕ್ಕೆೆ ಅವರ ಮೇಲಿನ ಸೇಡಿನ ರಾಜಕಾರಣವೇ ಕುತ್ತು ತರುವುದು ಸನ್ನಿಿಹಿತ. ಏಕೆಂದರೆ ಈಗಾಗಲೇ ಈ ಕ್ಷೇತ್ರಗಳಲ್ಲಿ ಜೆಡಿಎಸ್ ಮುಖಂಡರು ಬಿಜೆಪಿಯತ್ತ ಮುಖ ಮಾಡುತ್ತಿಿದ್ದಾಾರೆ. ಇವರನ್ನು ಮನವೊಲಿಸುವ ಪ್ರಯತ್ನಕ್ಕೆೆ ಜೆಡಿಎಸ್ ವರಿಷ್ಠ ಎಚ್.ಡಿ.ಕುಮಾರಸ್ವಾಾಮಿ ಅವರು ಮುಂದಾಗದಿರುವುದು ಪಕ್ಷಕ್ಕೆೆ ಮುಳುವಾಗುವ ಲಕ್ಷಣಗಳು ಗೋಚರಿಸುತ್ತಿಿವೆ.

ರಾಜ್ಯ ರಾಜಧಾನಿಯಲ್ಲಿ ಮಹಾಲಕ್ಷ್ಮಿಿ ಲೇಔಟ್ ಜೆಡಿಎಸ್ ಭದ್ರಕೋಟೆ ಎಂದೇ ಹೆಸರಾಗಿತ್ತು. ಆದರೆ ಈ ಕ್ಷೇತ್ರದ ಪ್ರಭಾವಿ ನಾಯಕರಾಗಿದ್ದ ಗೋಪಾಲಯ್ಯ ತಮ್ಮ ವರ್ಚಸ್ಸಿಿನಿಂದ ಜೆಡಿಎಸ್‌ಗೆ ನೆಲೆ ಕಲ್ಪಿಿಸಿದ್ದರು. ಬದಲಾದ ರಾಜಕೀಯ ಪರಿಸ್ಥಿಿತಿಯಲ್ಲಿ ಗೋಪಾಲಯ್ಯ ತಮ್ಮ ಶಾಸಕ ಸ್ಥಾಾನಕ್ಕೆೆ ರಾಜಿನಾಮೆ ನೀಡಿ ಬಿಜೆಪಿ ಅಭ್ಯರ್ಥಿಯಾಗಿ ಉಪ ಚುನಾವಣೆಯಲ್ಲಿ ಕಣಕ್ಕಿಿಳಿದಿದ್ದಾಾರೆ. ಈ ಕ್ಷೇತ್ರದ ಬಹುತೇಕ ಜೆಡಿಎಸ್ ಪಾಲಿಕೆ ಸದಸ್ಯರು ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿಿದ್ದಾಾರೆ. ಜೆಡಿಎಸ್ ನಾಯಕರು ಇವರಿಗೆ ಯಾವುದೇ ಸೂಚನೆ ನೀಡದಿರುವುದು ತಿಳಿದು ಬಂದಿದೆ. ಈ ಕ್ಷೇತ್ರದಲ್ಲಿ ಪರಿಚಯ ಇಲ್ಲದ ವ್ಯಕ್ತಿಿಯನ್ನು ಜೆಡಿಎಸ್ ಅಭ್ಯರ್ಥಿಯನ್ನಾಾಗಿಸಲಾಗಿದೆ ಎಂದು ಗೋಪಾಲಯ್ಯ ಪರ ಪ್ರಚಾರಕ್ಕೆೆ ಮುಂದಾಗಿದ್ದಾಾರೆ.

ಹುಣಸೂರಿನಲ್ಲಿ ಜೆಡಿಎಸ್‌ಗೆ ಕೈಕೊಟ್ಟು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿಿರುವ ವಿಶ್ವನಾಥ್ ಅವರು ಕಾಂಗ್ರೆೆಸ್ ಮುಖಂಡರನ್ನು ತನ್ನತ್ತ ಸೆಳೆಯುವ ಮೂಲಕ ಗೆಲುವಿಗೆ ಶತ ಪ್ರಯತ್ನ ನಡೆಸುತ್ತಿಿದ್ದಾಾರೆ. ಇಲ್ಲಿ ಒಕ್ಕಲಿಗ ಸಮುದಾದಯ ಮತಗಳೇ ನಿರ್ಣಾಯಕವಾಗಿದ್ದು, ಜೆಡಿಎಸ್ ಮತಗಳು ವಿಶ್ವನಾಥ್ ಪಾಲಾಗುವ ಸಾಧ್ಯತೆ ಇದೆ. ಇನ್ನು ಕುರುಬ ಸಮುದಾಯದ ಮತಗಳು ಕಾಂಗ್ರೆೆಸ್ ಹಾಗೂ ಬಿಜೆಪಿ ಎರಡೂ ಪಕ್ಷದ ಪಾಲಾಗಲಿವೆ. ಆದ್ದರಿಂದ ವಿಶ್ವನಾಥ್ ಅವರಿಗೆ ಒಕ್ಕಲಿಗ ಮತಗಳನ್ನು ಸೆಳೆಯಲು ಈ ಸಮುದಾಯದ ಬಿಜೆಪಿ ನಾಯಕರೇ ಚುನಾವಣಾ ಅಖಾಡಕ್ಕೆೆ ಇಳಿದಿದ್ದಾಾರೆ. ಈಗಾಗಲೇ ಜೆಡಿಎಸ್‌ನಿಂದ ದೂರವಾಗಿರುವ ಮಾಜಿ ಸಚಿವ ಜಿ.ಟಿ.ದೇವೇಗೌಡ ಅವರನ್ನು ಬಿಜೆಪಿ ಸೆಳೆದಿದ್ದು, ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸುವಂತೆ ಹೇಳಿದ್ದಾಾರೆ. ಜೆಡಿಎಸ್ ಪಕ್ಷ ಜಿಟಿಡಿ ಅವರನ್ನು ನಿರ್ಲಕ್ಷ್ಯ ಮಾಡಿರುವುದು ಇಲ್ಲಿ ಪಕ್ಷ ಹೀನಾಯ ಸ್ಥಿಿತಿಗೆ ತಲುಪಿದೆ. ಕಾಂಗ್ರೆೆಸ್ ಮಾತ್ರ ಒಕ್ಕಲಿಗ ಮತಗಳು ನಮಗೆ ಬರಲಿ ಇಲ್ಲದೆ ಇದ್ದರೆ ಜೆಡಿಎಸ್‌ಗೆ ಹೋಗಲಿ, ಬಿಜೆಪಿಗೆ ಮಾತ್ರ ಹೋಗಬಾರದು ಎಂದು ರಣತಂತ್ರ ಹೆಣೆಯುತ್ತಿಿದೆ. ಆದರೆ ಇಲ್ಲಿ ಹೆಚ್ಚಾಾಗಿ ಬಿಜೆಪಿ ಮುಖಂಡರು ಒಕ್ಕಲಿಗ ಸಮುದಾಯದವರಾಗಿದ್ದು, ಪಕ್ಷದ ಸೆಳೆಯುವ ಪ್ರಯತ್ನ ನಡೆಸುತ್ತಿಿದ್ದಾಾರೆ.

ಕೆ.ಆರ್. ಪೇಟೆ ಕ್ಷೇತ್ರದ ಉಪಚುನಾವಣೆ ಅಖಾಡ ದಿನದಿಂದ ದಿನಕ್ಕೆೆ ಕಾವೇರುತ್ತಿಿದ್ದು, ಜೆಡಿಎಸ್ ಪಕ್ಷದ ಜಿಲ್ಲೆಯ ನಾಯಕರು ಪಕ್ಷ ಬಲಪಡಿಸುವಲ್ಲಿ ಹಿಂದೇಟು ಹಾಕುತ್ತಿಿದ್ದಾಾರೆ. ಜಿಲ್ಲೆಯಲ್ಲಿ 6 ಮಂದಿ ಜೆಡಿಎಸ್ ಶಾಸಕರು ಇದರೂ ಪ್ರಚಾರ ಕೆಲಸಕ್ಕೆೆ ಮಾತ್ರ ಇದುರೆಗೂ ಬಂದಿಲ್ಲ. ಸದ್ಯ ಜೆಡಿಎಸ್ ಅಭ್ಯರ್ಥಿ ಬಿ.ಎಲ್ ದೇವರಾಜು ಪರ ಪಕ್ಕದ ಶ್ರವಣಬೆಳಗೊಳ ಕ್ಷೇತ್ರದ ಬಾಲಕೃಷ್ಣ ಹಾಗೂ ಕೆ.ಆರ್ ಪೇಟೆ ನಾಯಕರು ಮಾತ್ರ ಪ್ರಚಾರದ ವೇಳೆ ಸಾಥ್ ನೀಡುತ್ತಿಿದ್ದಾರೆ. ಕೆ.ಆರ್ ಪೇಟೆ ಉಪಚುನಾವಣೆಗೆ ಜೆಡಿಎಸ್ನಿಿಂದ ಜಿಲ್ಲಾ ಪಂಚಾಯತಿ ಸದಸ್ಯ ಎಚ್.ಡಿ ಮಂಜು ಅವರಿಗೆ ಟಿಕೆಟ್ ನೀಡಬೇಕೆಂದು ಮಾಜಿ ಸಿಎಂ ಕುಮಾರಸ್ವಾಾಮಿ, ಮಾಜಿ ಸಚಿವ ಪುಟ್ಟರಾಜು ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರುಗಳಿಗೆ ಮುಖಂಡರಿಗೆ ಒಲವಿತ್ತು. ಆದರೆ ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡ ಜೆಡಿಎಸ್ ಅಭ್ಯರ್ಥಿ ಬಿ.ಎಲ್ ದೇವರಾಜು ಅವರಿಗೆ ಟಿಕೆಟ್ ನೀಡಿದರು. ಇದರಿಂದ ಬೇಸರಗೊಂಡ ಹಿನ್ನೆೆಲೆಯಲ್ಲಿ ಇಲ್ಲಿವರೆಗೂ ಮಂಡ್ಯ ಮುಖಂಡರು ಕೆಆರ್ ಪೇಟೆಗೆ ಬಂದಿಲ್ಲ.

10 ಕ್ಷೇತ್ರಗಳಲ್ಲಿ ಒಂದು ಗೆದ್ದರೂ ಅಚ್ಚರಿ
ಹೊಸಕೋಟೆಯಲ್ಲಿ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಅವರಿಗೆ ಜೆಡಿಎಸ್ ಬೆಂಬಲ ನೀಡಿದೆ. ಈಗಾಗಲೇ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ನೆಲೆ ಕಳೆದುಕೊಳ್ಳುವ ಸಾಧ್ಯತೆ ಇದೆ. ಉಳಿದ 10 ಕ್ಷೇತ್ರಗಳಲ್ಲಿ ಕಾಂಗ್ರೆೆಸ್-ಬಿಜೆಪಿ ಪೈಪೋಟಿ ನೀಡುತ್ತಿಿದ್ದು, ಒಂದು ಕ್ಷೇತ್ರವನ್ನಾಾದರೂ ಜೆಡಿಎಸ್ ತೆಕ್ಕೆೆಗೆ ಹಾಕಿಕೊಂಡರೆ ಅಚ್ಚರಿಯೇ ಸರಿ. ಅನರ್ಹ ಶಾಸಕರ ಮೇಲಿನ ಸಿಟ್ಟು ಕಾಂಗ್ರೆೆಸ್‌ಗೆ ಅನುಕೂಲವಾಗಲಿದೆಯೇ ಹೊರೆತು ದಳಕ್ಕೆೆ ಲಾಭವೇನಲ್ಲ. ಈಗಾಗಲೇ ಹಿರೆಕೆರೂರಿನಲ್ಲಿ ಪಕ್ಷದ ಅಭ್ಯರ್ಥಿ ನಾಮಪತ್ರ ವಾಪಸ್ ಪಡೆದಿರುವುದು ಅಚ್ಚರಿ ಮೂಡಿಸಿದೆ. ಕೆಲ ಕ್ಷೇತ್ರಗಳಲ್ಲಿ ನಾಮಕಾವಸ್ತೆೆಗೆ ಅಭ್ಯರ್ಥಿಗಳನ್ನು ಹಾಕಲಾಗಿದೆ.