ಬೆಂಗಳೂರು:
ಈಗಾಗಲೇ ಲಾಕ್ ಡೌನ್ ಆಗಿ ಮೂರು ವಾರ ಆಗುತ್ತಾ ಬಂತು. ಸಿಎಆರ್, ವೈರ್ ಲೆಸ್, ಕೆಎಸ್ ಆರ್ ಪಿ,ಹೋಮ್ ಗಾರ್ಡ್ ಇತ್ಯಾದಿ ಎಲ್ಲರೂ ಮುಖ್ಯಮಂತ್ರಿಗಳಿಂದ,ಸಾರ್ವಜನಿಕರಿಂದ,ಮಾಧ್ಯಮದವರಿಂದ ಪ್ರಶಂಸೆ ಗಿಟ್ಟಿಸಿಕೊಂಡಿದ್ದೀರಾ.
ಇದು ಇಲ್ಲಿಗೆ ಮುಗಿದಿಲ್ಲ.ಇದರಿಂದ ದೊಡ್ಡ ಜವಾಬ್ದಾರಿ ನಮ್ಮ ಮೇಲೆ ಇದೆ.
1.ಇದರಿಂದ ಎಲ್ಲಾ ಸಿಬ್ಬಂದಿಗಳಿಗೂ ತಿಳಿಸಬೇಕಾದ್ದು ಏನೆಂದರೆ.ಇನ್ನೂ ಉಳಿದ ದಿನ ಹೆಚ್ಚಾಗಿ ಕೆಲಸ ಮಾಡಬೇಕು.ಇಷ್ಟು ದಿನ ಸಾರ್ವಜನಿಕರು ಸಹಕಾರ ನೀಡಿದ್ದಾರೆ.ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು.ಅದರಲ್ಲಿ ಮುಖ್ಯವಾಗಿ ಮಾಧ್ಯಮದವರು, ಹಣ್ಣು ವ್ಯಾಪಾರ ಮಾಡುವವರು, ಮಾರ್ಕೆಟ್ ಗೆ ವಸ್ತು ತರುವವರಿಗೆ ತೊಂದರೆಯಾಗಬಾರದು.
2.ಎಪಿಎಂಸಿಗೆ ಬೇರೆ ಬೇರೆ ಕಡೆಯಿಂದ ವಸ್ತುಗಳು ಬರುತ್ತಿವೆ. ಬೆಂಗಳೂರು ದೊಡ್ಡ ನಗರ ಆಗಿರುವುದರಿಂದ,ತುಂಬಾ ವಸ್ತುಗಳುಡಿಮ್ಯಾಂಡ್ ಇರುವುದರಿಂದ ಖಾಲಿ ಟ್ರಕ್ ಹಾಗೆ ಲೋಡೆಡ್ ಟ್ರಕ್ ಬರುತ್ವೆ ಅಂತವರಿಗೆ ತೊಂದರೆ ಕೊಡಬಾರದು.ಗೂಡ್ಸ್ ವೆಹಿಕಲ್ ಗೆ ಸಮಸ್ಯೆಯಾಗಬಾರದು.ಇದನ್ನ ಡಿಸಿಪಿಗಳು ನೇತೃತ್ವ ವಹಿಸಿಕೊಳ್ಳಬೇಕು.
3. ಎಪಿಎಂಸಿಗೆ ಬರುವ ಕೂಲಿ ಕಾರ್ಮಿಕರಿಗೆ ಯಾವುದೇ ತೊಂದರೆಯಾಗಬಾರದು.
4.ಕೆಲ ಜನರು ಡಯಾಲಿಸಿಸ್,ಮೆಡಿಕಲ್ ಎಮರ್ಜೆನ್ಸಿ ಗೆ ಹೊಗುತ್ತಾರೆ.ಅಂತವರಿಗೆ ಅವಮಾನ ಮಾಡದೆ ಕಾಮನ್ ಸೆನ್ಸ್ ಉಪಯೋಗಿಸಿ ಡಿಸಿಷನ್ ತೆಗೆದುಕೊಳ್ಳಬೇಕು ಯಾಕೆಂದರೆ ಕೆಲವರ ಬಳಿ ಪಾಸ್ ಇರುತ್ತೆ ಕೆಲವರ ಬಳಿ ಇರುವುದಿಲ್ಲ ಹೀಗಾಗಿ ಅವರಿಗೆ ತೊಂದರೆಯಾಗಬಾರದು.
5. ಎಟಿಎಂ ಕೆಲಸಕ್ಕೆ ಹೋಗುವವರು,ವಾಟರ್ ಫೆಸಿಲಿಟಿ ಕೊಡುವವರಿಗೆ ತೊಂದರೆ ಮಾಡಬಾರದು.
6.ಪಾಸ್ ಚೆಕ್ ಮಾಡಬೇಕು ಮಾನವೀಯತೆ ಇಂದ ವರ್ತಿಸಬೇಕು.ನಕಲಿ ಪಾಸ್ ಇದ್ದವರವಿರುದ್ಧ ಕೇಸ್ ಹಾಕಿ NDMA act ಅಡಿ ಕೇಸ್ ದಾಖಲಿಸಬೇಕು. ಲಾಕ್ ಡೌನ್ ಮುಗಿದ ನಂತರ ಪೇಪರ್ ವರ್ಕ್ ಮಾಡಿ ಸೀಜ್ ಮಾಡಿರುವ ವಾಹನ ಹಿಂತಿರುಗಿಸಬೇಕು.
ಸಾರ್ವಜನಿಕರು ಹಾಗೂ ಎಲ್ಲರೂ ಪ್ರಶಂಸೆ ವ್ಯಕ್ತಪಡಿಸಿರುವುದರಿಂದ ಅದನ್ನು ತಲೆಗೇರಿಸಿಕೊಳ್ಳಬಾರದು ಇನ್ನೂ ಬಹಳಷ್ಟು ಕೆಲಸ ಮಾಡೋದಿದೆ.ಎಲ್ಲರಿಗೂ ಪೊಲೀಸ್ ಇಲಾಖೆಯಿಂದ ಅಪೇಕ್ಷೆ ಇದೆ.ಅಪೇಕ್ಷೆಯಂತೆ ಕೆಲಸ ನಿರ್ವಹಿಸಬೇಕು.ಇದಕ್ಕಾಗಿ ಅವಾಚ್ಯ ಶಬ್ಧದಿಂದ ಮಾತಾಡೋದನ್ನ ನಿಲ್ಲಿಸಬೇಕು.ಅವಮಾನ ಮಾಡಬಾರದು.ತಾವೆಲ್ಲರೂ ಒತ್ತಡದಲ್ಲಿದ್ದೀರಾ ಗೊತ್ತಿದೆ.ಸಿಬ್ಬಂದಿ ನೀರು ಕುಡಿಯಬೇಕು.ಅಲ್ಲದೆ ಆರೆಂಜ್ ಜ್ಯೂಸ್ ಕುಡಿಯಬೇಕು ಎಲ್ಲರೂ ಕೆಲಸ ಚೆನ್ನಾಗಿ ಮಾಡಿ.