Saturday, 14th December 2024

ಮಕ್ಕಳ ಫೋಟೋ ಬಳಸಿ ದೇಣಿಗೆ ಸಂಗ್ರಹ: ಕ್ರಮದ ಎಚ್ಚರಿಕೆ

ಬೆಂಗಳೂರು:

ಕೋವಿಡ್-19 ರ ಹಿನ್ನಲೆಯಲ್ಲಿ ಮಕ್ಕಳ ಫೋಟೊ ಮತ್ತು ಇನ್ನಿತರ ವಿವರಗಳನ್ನು ಬಳಸಿ ದೇಣಿಗೆ ಪಡೆಯುವುದು ಬಾಲನ್ಯಾಯ ಕಾಯ್ದೆ 2015ರ ಉಲ್ಲಂಘನೆಯಾಗಿದೆ ಎಂದು ಕರ್ನಾಟಕ ರಾಜ್ಯ ಸಮಗ್ರ ಮಕ್ಕಳ ರಕ್ಷಣಾ ಸೊಸೈಟಿ ನಿರ್ದೇಶಕರು ತಿಳಿಸಿದ್ದಾರೆ.
ಕೋವಿಡ್-19 ಮಹಾಮಾರಿಯು ಭಯಾನಕವಾಗಿ ದೇಶದಲ್ಲಿ ಹರಡುತ್ತಿರುವ ಹಿನ್ನಲೆಯಲ್ಲಿ ಸ್ವಯಂ ಸೇವಾ ಸಂಸ್ಥೆಗಳು ನಡೆಸುತ್ತಿರುವ ಹಲವಾರು ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಮಕ್ಕಳ ಆರೈಕೆ, ಪಾಲನೆ ಪೋಷಣೆಗಾಗಿ ಹಾಗೂ ಇನ್ನಿತರ ವೆಚ್ಚಗಳಿಗೆ ಮಕ್ಕಳ ಫೋಟೊ ಬಳಸಿ ದೇಣಿಗೆ ಪಡೆಯುತ್ತಿರುವುದು ಗಮನಕ್ಕೆ ಬಂದಿರುತ್ತದೆ.

ಇಂತಹ ಘಟನೆಗಳು ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ಸಂರಕ್ಷಣೆ) ಅಧಿನಿಯಮ 2015ರ ಕಲಂ 74ರ ಉಲ್ಲಂಘನೆಯಾಗಿರುತ್ತದೆ. ಈ ವಿಷಯದ ಬಗ್ಗೆ ಸಾರ್ವಜನಿಕರು ಅಂತಾ ಘಟನೆಗಳು ಕಂಡುಬಂದಲ್ಲಿ ನೆರನ್ನು ಪಡೆಯಲು ಹಾಗೂ ಕೋವಿಡ್-19 ತುರ್ತು ಪರಿಸ್ಥಿತಿಯಲ್ಲಿ ಸಮಗ್ರ ಮಕ್ಕಳ ರಕ್ಷಣಾ ಯೋಜನೆಯ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.