Sunday, 15th December 2024

ಮಹಡಿಯಿಂದ ಜಿಗಿದು ಆತ್ಮಹತ್ಯೆೆಗೆ ಯತ್ನಿಸಿದ ಯುವತಿ

ವಿಶ್ವವಾಣಿ ಸುದ್ದಿಮನೆ

ಬೆಂಗಳೂರು:

ಮಹಡಿಯಿಂದ ಜಿಗಿದು ಆತ್ಮಹತ್ಯೆೆ ಮಾಡಿಕೊಳ್ಳಲು ಮುಂದಾಗಿದ್ದ ಯುವತಿಯನ್ನು ಅಗ್ನಿಶಾಮಕ ಸಿಬ್ಬಂದಿ ಪಾರು ಮಾಡಿದ್ದಾರೆ. ಶುಕ್ರವಾರದಂದು ಎಲೆಕ್ಟ್ರಾನಿಕ್ ಸಿಟಿಯಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಯುವತಿ ದೆಹಲಿ ಮೂಲದವರಾಗಿದ್ದು, ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಎಲೆಕ್ಟ್ರಾನಿಕ್ ಸಿಟಿಯ ಪ್ರೆಸ್ಟೀಜ್ ಸನ್ರೈಸ್ ಅಪಾರ್ಟೆಂಟ್ನಲ್ಲಿದ್ದ ತನ್ನ ಸಂಬಂಧಿಕರ ಮನೆಗೆ ಆಕೆ ಬಂದಿದ್ದರು. ನಂತರ ಲಾಕ್‌ಡೌನ್ ಜಾರಿಯಾಗಿದದ್ದರಿಂದ ದೆಹಲಿಗೆ ಹೋಗಲು ಆಗಿರಲಿಲ್ಲ.

ಕೆಲ ವರ್ಷಗಳ ಹಿಂದೆ ಯುವತಿ ತನ್ನ ತಾಯಿಯನ್ನು ಕಳೆದುಕೊಂಡಿದ್ದರು. ಸಂಬಂಧಿಕರ ಮನೆಯಲ್ಲಿ ವರ್ಷದ ಕಾರ್ಯ ನಡೆದಿತ್ತು. ಹೀಗಾಗಿ ಅದರಿಂದ ಇನ್ನಷ್ಟು ನೊಂದು ಆತ್ಮಹತ್ಯೆಗೆ ಮುಂದಾಗಿದ್ದರು ಎಂದು ಹೇಳಲಾಗಿದೆ. ಅಪಾರ್ಟ್ಮೆೆಂಟ್‌ನ 17ನೇ ಮಹಡಿ ಏರಿದ್ದ ಆಕೆ, ನಂತರ ಭಯದಲ್ಲಿ ಕಿಟಕಿಯ ಕೆಳ ಭಾಗದಲ್ಲಿ ಹೆದರಿ ಕುಳಿತಿದ್ದರು. ಇದನ್ನು ಗಮನಿಸಿದ ಅಪಾರ್ಟ್ಮೆೆಂಟ್ ಅಸೋಸಿಯೇಷನ್ ವ್ಯಕ್ತಿ, ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ತಾಳ್ಮೆ ಹಾಗು ಬುದ್ಧಿವಂತಿಕೆಯಿಂದ ಯುವತಿಯನ್ನು ಪಾರು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.