Saturday, 26th October 2024

ರಾಂಡಮ್ ಟೆಸ್ಟಿಂಗ್ ಆರಂಭಿಸಿದ ರಾಜ್ಯ ಸರಕಾರ

ಬೆಂಗಳೂರು:
ರಾಜ್ಯದ 10 ಜಿಲ್ಲೆಗಳಲ್ಲಿ ಇದುವರಗೆ ಒಂದೂ ಕರೋನಾ ಪ್ರಕರಣಗಳು ಕಂಡುಬಂದಿಲ್ಲ ಆದ್ದರಿಂದ ಆ ಜಿಲ್ಲೆಗಳಲ್ಲಿ ಶನಿವಾರದಿಂದಲೇ ರಾಂಡಮ್ ಟೆಸ್ಟಿಂಗ್ ಆರಂಭಿಸಲು  ಸರಕಾರ ಆದೇಶಿಸಿದೆ.
ಯಾವುದೇ ರೋಗಲಕ್ಷಣ ಕಾಣಿಸದಿದ್ದರೂ ಅನೇಕರಲ್ಲಿ ಸೋಂಕು ಕಂಡುಬಂದಿದೆ.ಈ ಹಿನ್ನೆಲೆಯಲ್ಲಿ ರಾಪಿಡ್ ಟೆಸ್ಟಿಂಗ್ ಮಾಡುವಂತೆ  ಸರಕಾರದ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯಭಾಸ್ಕರ್ ಆದೇಶಿಸಿದ್ದಾರೆ.
ಈ 10 ಜಿಲ್ಲೆಗಳಲ್ಲಿ SARI ಮತ್ತು ILI (Influenza like illness) ಇದ್ದವರನ್ನು ಪರೀಕ್ಷಿಸಲು ಹೆಚ್ಚಿನ ಒತ್ತು.ಈ ಸಮಸ್ಯೆಗಳಿರುವ ಕನಿಷ್ಠ 100 ಜನರ ಸ್ಯಾಂಪಲ್ ಗಳನ್ನು ಪ್ರತಿದಿನ ಸರ್ಕಾರದ ಮಾನ್ಯತೆ ಪಡೆದಿರುವ ಕೋವಿಡ್ 19 ಪ್ರಯೋಗಾಲಯಗಳಿಗೆ ಕಳಿಸುವಂತೆ ಸೂಚನೆ ನೀಡಿದ್ದಾರೆ.
ಏಪ್ರಿಲ್ 17,18,19ರಂದು 100 ಸ್ಯಾಂಪಲ್, ಅದರ ನಂತರ ಪ್ರತಿದಿನ 50 ಸ್ಯಾಂಪಲ್ ಕಳಿಸಿಕೊಡಬೇಕು. ಹಾಸನ, ಶಿವಮೊಗ್ಗ, ಚಾಮರಾಜನಗರ, ಚಿಕ್ಕಮಗಳೂರು, ಹಾವೇರಿ, ಕೋಲಾರ, ಯಾದಗಿರಿ, ರಾಯಚೂರು, ರಾಮನಗರ, ಕೊಪ್ಪಳ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಆದೇಶದಲ್ಲಿ ತಿಳಿಸಿದ್ದಾರೆ.