Saturday, 14th December 2024

ರಾಜ್ಯದಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ವರ್ಗಾವಣೆ ದಂಧೆ: ಎಚ್‌ಡಿಕೆ 

ಬೆಂಗಳೂರು:
ಮಾರಾಣಾಂತಿಕ ಕರೋನಾ ಭೀತಿಯ ನಡುವೆಯೂ ರಾಜ್ಯದಲ್ಲಿ ವರ್ಗಾವಣೆ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ರಾಜ್ಯ ಸರಕಾರವನ್ನು ಆರೋಪಿಸಿದ್ದಾರೆ.
ರಾಜ್ಯದಲ್ಲಿ ಇತ್ತೀಚೆಗೆ ನಡೆದಿರುವ ಕೆಲವು ವರ್ಗಾವಣೆಗಳ ಕುರಿತು ಮಾತನಾಡಿರುವ ಅವರು, ವರ್ಗಾವಣೆ ವಿಚಾರದಲ್ಲಿ ಒಕ್ಕಲಿಗರು, ಲಿಂಗಾಯಿತರು ಎಂಬ‌ ಮಾತಿಲ್ಲ. ಅಧಿಕಾರಿಗಳು ಯಾರು ದುಡ್ಡು ಕೊಡ್ತಾರೆ ಅವರನ್ನ‌ ಬೇಕಾದ ಜಾಗಗಳಿಗೆ ಕಳುಹಿಸಲಾಗುತ್ತಿದೆ.
ಇತ್ತೀಚೆಗೆ ಅಬಕಾರಿ ಇಲಾಖೆಯಲ್ಲಿ ತರಾತುರಿಯಲ್ಲಿ 70 ರಿಂದ 80 ಜನರನ್ನ ವರ್ಗಾವಣೆ ಮಾಡಲಾಗಿದೆ. ಈ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿಯಾದ ನಂತರ ಈ ವರ್ಗಾವಣೆ ವಿಚಾರವನ್ನು ನಿನ್ನೆಯಿಂದ ಸಿಲ್ಲಿಸಲಾಗಿದೆ. ಪಾಪ ವರ್ಗಾವಣೆಗಾಗಿ ಹಣ ಕೊಟ್ಟವನ ಕಥೆ ಏನಾಯಿತ ಅಂತಾ ಯೋಚಿಸಬೇಕು. ಇಂತಹ ಪರಿಸ್ಥಿತಿಯನ್ನು ಯಾರೂ ಹೇಳೋರಿಲ್ಲ, ಕೇಳೋರೂ ಇಲ್ಲದಂತಾಗಿದೆ. ಇವು ನಡೆಯುತ್ತಿರುವ ರೀತಿ ಸರಿಯಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.