Sunday, 15th December 2024

ರಾಜ್ಯದಲ್ಲಿ ಒಂದೇ ದಿನ ತ್ರಿಶಕತ ಬಾರಿಸಿದ ಕರೋನಾ!

ವಿಶ್ವವಾಣಿ ಸುದ್ದಿಮನೆ
ಬೆಂಗಳೂರು:
ಕರ್ನಾಟಕದಲ್ಲಿ ಕರೋನಾ ಆರ್ಭಟ ಜೋರಾಗಿದೆ.‌ ಮಂಗಳವಾರ ಒಂದೇ ದಿನ ಬರೋಬ್ಬರಿ ದಾಖಲೆಯ ಪ್ರಮಾಣದ 388 ಪ್ರಕರಣಗಳು ಬಂದಿದ್ದು ಒಟ್ಟು ಸೋಂಕಿತರ ಸಂಖ್ಯೆ 3,796ಕ್ಕೆ ಏರಿಕೆಯಾಗಿದೆ.
ಇಲ್ಲಿಯವರೆಗೆ 200ಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗಿತ್ತು. ಆದರೆ ಒಂದೇ ದಿನ 380ಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗಿರುವುದು ಇದೇ ಮೊದಲು. ಸೋಮವಾರದವರೆಗೆ ರಾಜ್ಯದಲ್ಲೇ ಬೆಂಗಳೂರಿನಲ್ಲಿ(385) ಅತ್ಯಧಿಕ ಪ್ರಕರಣ ದಾಖಲಾಗಿತ್ತು. ಆದರೆ ಮಂಗಳವಾರ ಬರೋಬ್ಬರಿ 150 ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಉಡುಪಿ ಮೊದಲ ಸ್ಥಾನಕ್ಕೆ ಏರಿದೆ. ಉಡುಪಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 410ಕ್ಕೆ ಏರಿಕೆಯಾಗಿದೆ. ಕಲಬುರಗಿಯಲ್ಲಿ 100 ಹೊಸ ಪ್ರಕರಣ ಬಂದಿದ್ದು ಸೋಂಕಿತರ ಸಂಖ್ಯೆ 405ಕ್ಕೆ ತಲುಪಿದೆ.
ಉಡುಪಿಯಲ್ಲಿ ಬಂದ ಎಲ್ಲ 150 ಮತ್ತು ಕಲಬುರಗಿಯ 100 ಪ್ರಕರಣಗಳಿಗೆ ಮಹಾರಾಷ್ಟ್ರ ಸಂಪರ್ಕವಿದೆ.  ಒಟ್ಟು 75 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.  ಕಂಡುಬಂದ ಒಟ್ಟು 388 ಸೋಂಕಿತರ ಪೈಕಿ 367 ಸೋಂಕಿತರು ಅಂತರಾಜ್ಯ ಪ್ರಯಾಣಿಕರಾಗಿದ್ದಾರೆ. ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ ಕರೋನಾಗೆ ಯಾರೂ ಬಲಿಯಾಗಿಲ್ಲ. ಒಟ್ಟು 2,339 ಸಕ್ರೀಯ ಪ್ರಕರಣಗಳಿದ್ದು, ಇಲ್ಲಿಯವರೆಗೆ ಒಟ್ಟು 1403 ಮಂದಿ ಬಿಡುಗಡೆಯಾಗಿದ್ದಾರೆ.
ಯಾವ ಜಿಲ್ಲೆಯಲ್ಲಿ ಎಷ್ಟು?
ಉಡುಪಿ 150, ಕಲಬುರಗಿ 100, ಬೆಂಗಳೂರು ನಗರ 12, ಯಾದಗಿರಿ 5, ಮಂಡ್ಯ 4, ರಾಯಚೂರು 16, ಬೆಳಗಾವಿ 51, ಹಾಸನ 9, ಬೀದರ್ 10, ದಾವಣಗೆರೆ 7, ಚಿಕ್ಕಬಳ್ಳಾಪುರ 2, ವಿಜಯಪುರ 4, ಬಾಗಲಕೋಟೆ 9, ಧಾರವಾಡ 2, ಕೋಲಾರ 1, ಬೆಂಗಳೂರು ಗ್ರಾಮಾಂತರ 3, ಹಾವೇರಿ 1 ಪ್ರಕರಗಳು ಬಂದಿದೆ.
ದಕ್ಷಿಣ ಕನ್ನಡ, ಮೈಸೂರು, ಉತ್ತರ ಕನ್ನಡ, ಬಳ್ಳಾರಿ, ಶಿವಮೊಗ್ಗ, ಚಿತ್ರದುರ್ಗ , ಗದಗ, ಚಿಕ್ಕಮಗಳೂರು, ಕೊಪ್ಪಳ, ಕೊಡಗು, ರಾಮನಗರದಲ್ಲಿ ಇಂದು ಯಾವುದೇ ಪಾಸಿಟಿವ್ ವರದಿಯಾಗಿಲ್ಲ.
ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿ ಬಿಡುಗಡೆ?
ಮಂಡ್ಯ 20, ಧಾರವಾಡ 15, ಬಳ್ಳಾರಿ 11, ಬೆಳಗಾವಿ 9, ಉತ್ತರ ಕನ್ನಡ 5, ತುಮಕೂರು 5, ಕೋಲಾರ 4, ಹಾವೇರಿ 3, ವಿಜಯಪುರದಲ್ಲಿ 3 ಮಂದಿ ಬಿಡುಗಡೆಯಾಗಿದ್ದಾರೆ.
ಹೆಚ್ಚು ಕರೋನಾ ಸೋಂಕಿತ ಜಿಲ್ಲೆಗಳು
ಉಡುಪಿ 410

ಬೆಂಗಳೂರು 397
ಕಲಬುರಗಿ 405
ಯಾದಗಿರಿ 290
ಮಂಡ್ಯ 289
ರಾಯಚೂರು 233
ಬೆಳಗಾವಿ 211