Sunday, 15th December 2024

ರಾಜ್ಯದಲ್ಲಿ 115 ಹೊಸ ಕರೋನಾ ಪ್ರಕರಣ

ಬೆಂಗಳೂರು:
ರಾಜ್ಯದಲ್ಲಿ ಗುರುವಾರ ಕೂಡ ಕರೋನಾ ವೈರಸ್‌ ಸೆಂಚುರಿ ಬಾರಿಸಿದೆ. ಇಂದು ಒಂದೇ ದಿನ ರಾಜ್ಯದಲ್ಲಿ ಒಟ್ಟು 115 ಹೊಸ ಕರೋನಾ ಪ್ರಕರಣಗಳು ದೃಢಪಟ್ಟಿವೆ.
ಆರೋಗ್ಯ ಇಲಾಖೆಯ ಗುರುವಾರದ ಮಧ್ಯಾಹ್ನದ ಹೆಲ್ತ್‌ ಬುಲೆಟಿನ್‌ನಲ್ಲಿ 75 ಮಂದಿಗೆ ಹೊಸದಾಗಿ ಸೋಂಕು ತಗುಲಿರುವುದು ವರದಿಯಾಗಿತ್ತು. ಇದೀಗ ಸಂಜೆಯ ಹೆಲ್ತ್‌ ಬುಲೆಟಿನ್ ಬಿಡುಗಡೆಯಾಗಿದ್ದು, ಮತ್ತೆ 40 ಮಂದಿಗೆ ಹೊಸದಾಗಿ ಸೋಂಕು ತಗುಲಿದೆ. ಈ ಮೂಲಕ ರಾಜ್ಯದಲ್ಲಿ ಒಂದೇ ದಿನ 135 ಮಂದಿಗೆ ಕರೋನಾ ಸೋಂಕು ದೃಢಪಟ್ಟಂತಾಗಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,533ಕ್ಕೆ ಏರಿಕೆಯಾಗಿದೆ.
ಇದುವೆರೆಗೆ ರಾಜ್ಯದಲ್ಲಿ ಕರೋನಾ ವೈರಸ್‌ಗೆ ಒಟ್ಟು 47 ಮಂದಿ ಬಲಿಯಾಗಿದ್ದಾರೆ. ಇದುವರೆಗೆ 834 ಮಂದಿ ಪೂರ್ಣವಾಗಿ ಗುಣವಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾರೆ. 1650 ಮಂದಿಯಲ್ಲಿ ಕೊರೊನಾ ವೈರಸ್‌ ಸಕ್ರಿಯವಾಗಿದೆ. ಗುರುವಾರ ಒಂದೇ ದಿನ 53 ಮಂದಿ ಸೋಂಕಿತರು ಗುಣವಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಪ್ರಸ್ತುತ 13 ಮಂದಿ ಕೊರೊನಾ ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರು 9, ಕಲಬುರಗಿ 5, ಯಾದಗಿರಿ 7, ಉಡುಪಿ 29, ಹಾಸನ 13, ಬೀದರ್ 12, ದಕ್ಷಿಣ ಕನ್ನಡ 24, ವಿಜಯಪುರ 2, ರಾಯಚೂರು 1, ಚಿತ್ರದುರ್ಗ 6, ಚಿಕ್ಕಮಗಳೂರು 3, ಹಾವೇರಿ 4ರಲ್ಲಿ ಕೊರೊನಾ ಪ್ರಕರಣಗಳು ಬೆಳಕಿಗೆ ಬಂದಿವೆ. ಇಂದು ಒಟ್ಟು 53 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ 834 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ.
ಮಂಗಳವಾರ ದೃಢಪಟ್ಟಿರುವ 115 ಪ್ರಕರಣಗಳ ಪೈಕಿ ಬಹುತೇಕರು ಅಂತಾರಾಜ್ಯ ಸಂಪರ್ಕ ಹೊಂದಿದ್ದಾರೆ. 95 ಜನ ಅಂತಾರಾಜ್ಯ ಪ್ರುಯಾಣಿಕರಿದ್ದರೆ, 2 ಮಂದಿ ಅಂತಾರಾಷ್ಟ್ರೀಯ ಪ್ರಯಾಣಿಕರಿದ್ದಾರೆ.