ವಿಶ್ವವಾಣಿ ಸುದ್ದಿಮನೆ
ಬೆಂಗಳೂರು:
ರಾಜ್ಯದಲ್ಲಿ ಶನಿವಾರ ಒಂದೇ ದಿನ 25 ಮಂದಿಗೆ ಕರೋನಾ ದೃಢಪಟ್ಟಿದೆ. ಸೋಂಕಿತರ ಸಂಖ್ಯೆ 384ಕ್ಕೆ ಏರಿಕೆಯಾಗಿದೆ.
ವಿಜಯಪುರದ 42 ವರ್ಷದ ರೋಗಿ ನಂಬರ್ 384 ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಬೆಳಗ್ಗೆ 12 ಪ್ರಕರಣಗಳು ವರದಿಯಾಗಿತ್ತು. ಸಂಜೆ ಬಿಡುಗಡೆಯಾದ ಬುಲೆಟಿನ್ ನಲ್ಲಿ 13 ಮಂದಿಗೆ ಕೋವಿಡ್-19 ತಗುಲಿರುವುದು ದೃಢಪಟ್ಟಿದೆ.
ಬಾಗಲಕೋಟೆಯಲ್ಲಿ 7, ಬೆಂಗಳೂರಲ್ಲಿ 3 , ಮೈಸೂರು 7, ಕಲಬುರಗಿ ಮತ್ತು ವಿಜಯಪುರ ತಲಾ ಎರಡು, ಹುಬ್ಬಳ್ಳಿ, ಬೆಳಗಾವಿ, ಮಂಡ್ಯ ಮತ್ತು ಗದಗನಲ್ಲಿ ತಲಾ ಒಂದು ಪ್ರಕರಣಗಳು ಇಂದು ಸಂಜೆವರೆಗ ವರದಿಯಾಗಿವೆ. ಬೆಂಗಳೂರಿಗೆ ಪಾದರಾಯನಪುರ ಒಂದು ರೀತಿ ಕಂಟಕವಾಗಿದ್ದು, ಸಾವನ್ನಪ್ಪಿದ್ದ ವೃದ್ಧನ ಸೆಕೆಂಡರಿ ಕಾಂಟ್ಯಾಕ್ಟ್ ನಲ್ಲಿದ್ದವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದೆ.
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾಹಿತಿ ಪ್ರಕಾರ, ರಾಜ್ಯದಲ್ಲಿ 384 ಜನರಿಗೆ ಕರೋನಾ ಸೋಂಕಿತ ದೃಢಪಟ್ಟಿದೆ. ಈ ಪೈಕಿ 14 ಜನರು ಮೃತಪಟ್ಟಿದ್ದು, 104 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಸೋಂಕಿತರ ವಿವರ:
ರೋಗಿ- 360: ಕಲಬುರಗಿಯ 34 ವರ್ಷದ ವ್ಯಕ್ತಿ, ರೋಗಿ 205ರ ಸಂಪರ್ಕ, ಕಲಬುರಗಿ ಆಸತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ.
ರೋಗಿ -361: ಕಲಬುರಗಿಯ ಶಹಬಾದ್ ನಿವಾಸಿ 16 ವರ್ಷದ ವ್ಯಕ್ತಿ, ರೋಗಿ-174ರ ಸಂಪರ್ಕ ಹೊಂದಿದ್ದರು. ಕಲಬುರಗಿ ಆಸ್ಪತ್ರೆಯಲ್ಲಿ ಪ್ರತ್ಯೇಕಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ರೋಗಿ -362: ವಿಜಯಪುರ 60 ವರ್ಷದ ವ್ಯಕ್ತಿ, ರೋಗಿ-221ರ ಸಂಪರ್ಕ, ವಿಜಯಪುರ ಆಸತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ.
ರೋಗಿ -363: ಧಾರವಾಡ ಜಿಲ್ಲೆಯ ಹುಬ್ಬಳಿ 63ರ ವೃದ್ಧ, ರೋಗಿ-236ರ ದ್ವಿತೀಯ ಸಂಪರ್ಕ, ಹುಬ್ಬಳಿಯ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ರೋಗಿ-364: ಬೆಳಗಾವಿ ಜಿಲ್ಲೆ ಹಿರೇಬಾಗೇವಾಡಿ 45 ವರ್ಷದ ವ್ಯಕ್ತಿ, ರೋಗಿ-128ರ ಸಂಪರ್ಕ, ಬೆಳಗಾವಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆದಿದೆ.
ರೋಗಿ-365: ಮೈಸೂರು ಜಿಲ್ಲೆ ನಂಜನಗೂಡಿನ 30 ವರ್ಷದ ಪುರುಷ, ರೋಗಿ-52ರ ದ್ವಿತೀಯ ಸಂಪರ್ಕ, ಮೈಸೂರು ಆಸ್ಪತ್ರೆಯಲ್ಲಿ ದಾಖಲಿಸಿಲಾಗಿದೆ.
ರೋಗಿ-366: ಮೈಸೂರು ಜಿಲ್ಲೆ ನಂಜನಗೂಡಿನ 50 ವರ್ಷದ ಪುರುಷ, ಮೈಸೂರಿನ ರೋಗಿ- 52ರ ದ್ವಿತೀಯ ಸಂಪರ್ಕ, ಮೈಸೂರಿನ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ.
ರೋಗಿ-367: ಬಾಗಲಕೋಟೆಯ 65 ವೃದ್ಧ, ರೋಗಿ-186ರ ದ್ವಿತೀಯ ಸಂಪರ್ಕ, ಬಾಗಲಕೋಟೆಯ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆದಿದೆ.
ರೋಗಿ-368: ಬಾಗಲಕೋಟೆಯ 48 ಮಹಿಳೆ, ರೋಗಿ-186ರ ದ್ವಿತೀಯ ಸಂಪರ್ಕ, ಬಾಗಲಕೋಟೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ರೋಗಿ-369: ಮೈಸೂರಿನ 65 ವೃದ್ಧ, ಅವರಿಗೆ ತೀವ್ರ ಉಸಿರಾಟದ ತೊಂದರೆ ಉಂಟಾಗಿದ್ದು, ಮೈಸೂರಿನ ನಿಗಧಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ.
ರೋಗಿ-370: ಗದಗನ 42 ವರ್ಷದ ಪುರುಷ, ರೋಗಿ-304ರ ದ್ವಿತೀಯ ಸಂಪರ್ಕ, ಗದಗನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ರೋಗಿ-371: ಮಂಡ್ಯ ಜಿಲ್ಲೆ ಮಳವಳ್ಳಿಯ 39 ವರ್ಷದ ಪುರುಷ, ರೋಗಿ-134 ಮತ್ತು 138ರ ಸಂಪರ್ಕ, ಮಂಡ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ.
ರೋಗಿ-372: ಬಾಗಲಕೋಟೆಯ 32 ವರ್ಷದ ಪುರುಷ, ರೋಗಿ-263ರ ಸಂಪರ್ಕ, ಬಾಗಲಕೋಟೆಯ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ರೋಗಿ-373: ಬಾಗಲಕೋಟೆಯ 32 ವರ್ಷದ ಪುರುಷ, ರೋಗಿ-263ರ ಸಂಪರ್ಕ, ಬಾಗಲಕೋಟೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ರೋಗಿ-374: ವಿಜಯಪುರದ 42 ಪುರುಷ, ರೋಗಿ-306ರ ಸಂಪರ್ಕ, ವಿಜಯಪುರದ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ.
ರೋಗಿ-375: ಮೈಸೂರು ಜಿಲ್ಲೆ ನಂಜನಗೂಡಿನ 26 ವರ್ಷದ ಮಹಿಳೆ, ರೋಗಿ-52ರ ದ್ವಿತೀಯಸಂಪರ್ಕ (ಪತ್ನಿ). ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ರೋಗಿ-376: ಬೆಂಗಳೂರು ನಗರದ 55 ವರ್ಷದ ಮಹಿಳೆ, ರೋಗಿ-167ರ ಸಂಪರ್ಕ ಹೊಂದಿದ್ದು, ಬೆಂಗಳೂರಿನ ನಿಗದಿತ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ರೋಗಿ-377: ಬೆಂಗಳೂರು ನಗರದ 50 ಮಹಿಳೆ, ರೋಗಿ-167ರ ಸಂಪರ್ಕ, ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ರೋಗಿ-378: ಬೆಂಗಳೂರು ನಗರದ 21 ವರ್ಷದ ಮಹಿಳೆ, ರೋಗಿ-167ರ ಸಂಪರ್ಕ, ಬೆಂಗಳೂರಿನ ನಿಗದಿತ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ರೋಗಿ-379: ಬಾಗಲಕೋಟೆಯ 43 ವರ್ಷದ ಪುರಷನಾಗಿದ್ದು, ರೋಗಿ ನಂಬರ್ 263ರ ಸಂಪರ್ಕದಲ್ಲಿದ್ದರು. ಬಾಗಲಕೋಟೆಯ ನಿಗದಿತಯ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ರೋಗಿ-383: ನಂಜನಗೂಡಿನ 36 ವರ್ಷದ ಪುರುಷನಾಗಿದ್ದು, ರೋಗಿ ನಂಬರ್ 52ರ ದ್ವಿತೀಯ ಸಂಪರ್ಕದಲ್ಲಿದ್ದರು. ಮೈಸೂರಿನ ನಿಗದಿತಯ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ರೋಗಿ-384: ನಂಜನಗೂಡಿನ 28 ವರ್ಷದ ಪುರುಷನಾಗಿದ್ದು, ರೋಗಿ ನಂಬರ್ 52ರ ದ್ವಿತೀಯ ಸಂಪರ್ಕದಲ್ಲಿದ್ದರು. ಮೈಸೂರಿನ ನಿಗದಿತಯ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಿ ಚಿಕಿತ್ಸೆ ನೀಡಲಾಗುತ್ತಿದೆ.