Sunday, 15th December 2024

ರಾಜ್ಯದಲ್ಲಿ63 ಹೊಸ ಪ್ರಕರಣಗಳ ಪತ್ತೆ

ವಿಶ್ವವಾಣಿ ಸುದ್ದಿಮನೆ
ಬೆಂಗಳೂರು
ರಾಜ್ಯದಲ್ಲಿ ಇದೇ ಮೊದಲ ಬಾರಿಗೆ 63 ಹೊಸ ಪ್ರಕರಣಗಳ ಪತ್ತೆಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 925‌ಆಗಿದೆ, ಸಾವಿರದ ಗಡಿ ದಾಟುವ ಭಯ ಹುಟ್ಟಿಕೊಂಡಿದೆ.
63 ಹೊಸ ಪ್ರಕರಣಗಳಲ್ಲಿ 32 ಗುಜರಾತ್ ನ ಅಹಮದಾದ್ ಗೆ ತೆರಳಿರುವ ಹಿನ್ನೆಲೆಯನ್ನು‌ ಹೊಂದಿದ್ದಾರೆ.‌ತಬ್ಲಿಘಿ ಬಳಿಕ ಇದೀಗ ಅಹಮದಾಬಾದ್ ಪ್ರಯಾಣಿಕರಿಂದ ಸೋಂಕು ಹೆಚ್ಚು ಹರಡಲಾರಂಭಿಸಿದೆ. ದಾವಣಗೆರೆ ಜಿಲ್ಲೆಯಲ್ಲಿ ಒಂದೇ ದಿನ‌12 ಹಾಗೂ ಬಾಗಲಕೋಟೆಯಲ್ಲಿ‌14 ಪ್ರಕರಣಗಳು ಪತ್ತೆಯಾಗಿವೆ.
ದಾವಣಗೆರೆಯ ಸೋಂಕಿತರ ಪ್ರಾಥಮಿಕ, ದ್ವಿತೀಯ ಸಂಪರ್ಕದಲ್ಲಿ ಇದ್ದವರನ್ನು ಕ್ವಾರಂಟೈನ್ ಮಾಡಲಾಗಿದೆ. ಸೋಂಕು ಪತ್ತೆಯಾದ 12 ಜನರಲ್ಲಿ  06 ಜನರು ತಬ್ಲಿಘಿ ಗಳು. ಇವರು ಗುಜರಾತ್ ನಿಂದ ಮೇ ಒಂಬತ್ತರಂದು ದಾವಣಗೆರೆ ಜಿಲ್ಲೆಯ ಹೊನ್ನಾಳಿ ಗೆ ಬಂದಿದ್ದರು. ಎಲ್ಲರನ್ನೀ ಕ್ವಾರಂಟೈನ್ ಪಡೆಯಲಾಗಿತ್ತು. ಉಳಿದ ಆರು ಜನರಲ್ಲಿ ಒಂದು ಪ್ರಕರಣ ಎಸ್ಪಿ ಎಸ್ ನಗರ ಹಾಗೂ ಐದು ಜಾಲಿನಗರದ ನಿವಾಸಿಗಳಾಗಿದ್ದಾರೆ.
* ಗ್ರೀನ್‌ಝೋನ್ ಗೂ ಕೊರೋನಾ‌ ಕರಿನೆರಳು*
ಮಾರಕ ಕರೋನಾದಿಂದ ದೂರವಿದ್ದ ಬಡವರ ಊಟಿ ಹಾಸನದಲ್ಲಿ ಮಂಗಳವಾರ ಐದು ಪಾಸಿಟಿವ್ ಪ್ರಕರಣ ವರದಿಯಾಗಿದ್ದು ಜಿಲ್ಲೆ ರೆಡ್ ರೆನ್‌ಗೆ ತಿರುಗಿದೆ. ಮೇ 8 ರಂದು ಚನ್ನರಾಯಪಟ್ಟಣ ಗಡಿ ಮೂಲಕ ಜಿಲ್ಲೆಗೆ ಬಂದಿದ್ದ ಒಂದೇ ಕುಟುಂಬದ ಐವರಲ್ಲಿ ಸೋಂಕು ಪತ್ತೆಯಾಗಿದೆ. 36, 45 ವರ್ಷದ ಪುರುಷರು, 4 ವರ್ಷದ ಮಗು,  27 ವರ್ಷದ ಮಹಿಳೆ ಹಾಗೂ 7 ವರ್ಷದ ಬಾಲಕಿಗೆ ಸೋಂಕು ದೃಢಪಟ್ಟಿದೆ.
ಮುಂಬೈನಿಂದ ಬಂದಿದ್ದ ಅವರನ್ನು ಗಡಿಯಲ್ಲೇ ವಶಕ್ಕೆ ಪಡೆದು ಕ್ವಾರೆಂಟೈನ್ ಮಾಡಲಾಗಿತ್ತು. ಪೊಲೀಸರ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ. 130 ಜನರನ್ನು ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಅದರಲ್ಲಿ ಐವರಿಗೆ ಪಾಸಿಟಿವ್ ಬಂದಿದೆ.
ಶಂಕಿತ ರೋಗಿಗಳು‌ ಪ್ರತ್ಯೇಕ‌ ನಿಗಾ ಘಟಕಗಳಲ್ಲಿರುವುದು ಕಡ್ಡಾಯ
ಶಂಕಿತ‌ ರೋಗಿಗಳ‌ ಪರೀಕ್ಷಾ ವರದಿಯಲ್ಲಿ ಅಪೂರ್ಣ ಎಂದಿದ್ದಲ್ಲಿ ಅವರನ್ನು ಕಡ್ಡಾಯವಾಗಿ ನಿಗಾ ಘಟಕಗಳಲ್ಲಿ‌ ಇಡಬೇಕಾಗುತ್ತದೆಂಬ ಅಂಶವನ್ನು ಇಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.
*ಮರಣೋತ್ತರ ಪರೀಕ್ಷೆಗೆ ಮಾರ್ಗಸೂಚಿ* 
ಶಂಕಿತ ಕೋವಿಡ್ ರೋಗಿಯ ಮರಣೋತ್ತರ ಪರೀಕ್ಷೆಗೆ ಸಂಬಂಧಿಸಿದಂತೆ ವಿಸ್ತ್ರತ ಮಾರ್ಗಸೂಚಿಗಳನ್ನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶಕರು ಹೊರಡಿಸಿದೆ.
*ಆಯುಷ್ ಇಲಾಖೆಯ ಹೊಸ ಉತ್ಪನ್ನಗಳ‌ ಬಿಡುಗಡೆ* 
ಕರೋನಾ ಸಂದರ್ಭ ಜನರಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಲುವಾಗಿ ಆಯುಷ್ ಕ್ವಾಥಾ/ ಜೋಷಾಂದ ಕಷಾಯ ಹಾಗೂ ಆರ್ಕ್‌ ಅಜೀಬ್ ಹನಿಗಳ ಎರಡು ಹೊಸ‌ ಉತ್ಪನ್ನಗಳನ್ನು ಆಯುಷ್ ಇಲಾಖೆಯು ತಯಾರಿಸಿದೆ.
ರಾಜ್ಯಾದ್ಯಂತ ಒಟ್ಟು 22,474 ವ್ಯಕ್ತಿಗಳನ್ನು ನಿಗಾವಣೆಯಲ್ಲಿಡಲಾಗಿದೆ. ಒಟ್ಟು ಪರೀಕ್ಷಿಸಿದ 1,16,533 ಮಾದರಿಗಳ ಪೈಕಿ 925 ಮಾದರಿಗಳು ಖಚಿತಗೊಂಡಿವೆ. ಮಂಗಳವಾರ 4938 ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿದೆ.
ಗ್ರೀನ್ ಝೋನ್ ನಲ್ಲಿ ಖಾತೆ ತೆರೆದ ಕರೋನಾ
ಲಾಕ್‌ಡೌನ್‌ ಸಡಿಲಿಕೆ ನಂತರ ರಾಜ್ಯದಲ್ಲಿನ ಕರೋನಾ ಮಕ್ತ ಜಿಲ್ಲೆಗಳ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿದೆ. ಚಿತ್ರದುರ್ಗ, ಶಿವಮೊಗ್ಗ, ಯಾದಗಿರಿ, ಕೋಲಾರ, ಹಾಸನ ಜಿಲ್ಲೆಗಳಲ್ಲಿ ಲಾಕ್‌ಡೌನ್‌ ಸಡಿಲಿಕೆ ನಂತರವೇ ಕೊರೊನಾ ವೈರಸ್‌ ತನ್ನ ಖಾತೆಯನ್ನು ಆರಂಭಿಸಿದೆ. ಇದಕ್ಕೂ ಮುನ್ನ ಕೊರೊನಾ ಮುಕ್ತ ಜಿಲ್ಲೆಯಾಗಿದ್ದ ಹಾವೇರಿಯಲ್ಲಿಯೂ ಸೋಂಕು ಕಾಣಿಸಿಕೊಂಡಿತ್ತು. ಪಾಸಿಟಿವ್‌ ಪ್ರಕರಣ ಪತ್ತೆಯಾಗಿ ಮತ್ತೆ ಗ್ರೀನ್‌ ಝೋನ್‌ಗೆ ಮರಳಿದ್ದ ದಾವಣಗೆರೆಯಲ್ಲಿ 2ನೇ ಹಂತದಲ್ಲಿ ಕೊರೊನಾ ಅಬ್ಬರಿಸುತ್ತಿದೆ. ಸದ್ಯ ರಾಜ್ಯದಲ್ಲಿ ಇದುವರೆಗೂ ಒಂದು ಕರೋನಾ ಪಾಸಿಟಿವ್‌ ಪ್ರಕರಣ ಕಂಡು ಬರದ ಜಿಲ್ಲೆಗಳ ಸಂಖ್ಯೆ 5ಕ್ಕೆ ಇಳಿದಿದೆ. ಕೊಪ್ಪಳ, ರಾಯಚೂರು, ಚಿಕ್ಕಮಗಳೂರು, ರಾಮನಗರ, ಚಾಮರಾಜನಗರ ಜಿಲ್ಲೆಗಳಲ್ಲಿ ಮಾತ್ರ ಕೊರೊನಾ ವೈರಸ್‌ ಇದುವರೆಗೂ ಕಂಡುಬಂದಿಲ್ಲ. ಕೊಡಗು ಹಾಗೂ ಉಡುಪಿ ಜಿಲ್ಲೆಗಳು ಗ್ರೀನ್‌ ಝೋನ್‌ನಲ್ಲಿವೆ.
ಗುಣಮುಖರಾದವರ ಸಂಖ್ಯೆ 433ಕ್ಕೆ ಏರಿಕೆ

ಕರೋನಾ ವೈರಸ್‌ನಿಂದಾಗಿ ರಾಜ್ಯದಲ್ಲಿ ಇದುವರೆಗೂ 31 ಜನ ಸಾವನ್ನಪ್ಪಿದ್ದಾರೆ. ಇದರ ಜೊತೆ ಒಂದು ನಾನ್‌ ಕೋವಿಡ್‌ ಸಾವು ಕೂಡ ಸಂಭವಿಸಿದೆ. ಮಂಗಳವಾರ ಯಾವುದೇ ಹೊಸ ಸಾವಿನ ಪ್ರಕರಣ ವರದಿಯಾಗಿಲ್ಲ. ಇದುವರೆಗೂ ಬೆಂಗಳೂರು ನಗರ (7), ಕಲಬುರಗಿ (6), ದಾವಣಗೆರೆ (4), ವಿಜಯಪುರ (3), ದಕ್ಷಿಣ ಕನ್ನಡ (3), ಚಿಕ್ಕಬಳ್ಳಾಪುರ (2), ತುಮಕೂರು (2), ಬಾಗಲಕೋಟೆ, ಬೆಳಗಾವಿ, ಗದಗ, ಬೀದರ್‌ನಲ್ಲಿ ತಲಾ ಒಬ್ಬರು ಮೃತಪಟ್ಟಿದ್ದು, ಒಬ್ಬರು ಅನ್ಯ ಕಾರಣದಿಂದ ಸಾವನ್ನಪ್ಪಿದ್ದಾರೆ. ಇನ್ನು ಕರೋನಾದಿಂದ 7 ಜನ ಗುಣಮುಖರಾಗಿದ್ದು, ಗುಣಮುಖರಾದವರ ಸಂಖ್ಯೆ 433ಕ್ಕೆ ಏರಿದೆ.

ರಾಜ್ಯದಲ್ಲಿ ಕರೋನಾ ಸೋಂಕಿತರ ಸಂಖ್ಯೆ
ಬೆಂಗಳೂರು ನಗರ 182
ಬೆಳಗಾವಿ 113
ಮೈಸೂರು 88
ದಾವಣಗೆರೆ 83
 ಕಲಬುರಗಿ 73
ಬಾಗಲಕೋಟೆ 68
ವಿಜಯಪುರ 50
ಉತ್ತರ ಕನ್ನಡ 39
 ಮಂಡ್ಯ 31
ಬೀದರ್‌ 29
ದಕ್ಷಿಣ ಕನ್ನಡ 27
ಚಿಕ್ಕಬಳ್ಳಾಪುರ 24
ಬಳ್ಳಾರಿ 16
ಧಾರವಾಡ 21
ತುಮಕೂರು 11
 ಶಿವಮೊಗ್ಗ 08
ಗದಗ 08
ಚಿತ್ರದುರ್ಗ 07
ಬೆಂಗಳೂರು ಗ್ರಾಮಾಂತರ 06
ಹಾಸನ 05
ಕೋಲಾರ 05
ಉಡುಪಿ 03
ಹಾವೇರಿ 02
ಯಾದಗಿರಿ 02
ಕೊಡಗು 02