Sunday, 15th December 2024

ರಾಜ್ಯಸಭೆ ಚುನಾವಣಾ ಕಣಕ್ಕೆ ಮಾಜಿ ಪ್ರಧಾನಿ ದೇವೇಗೌಡ: ಎಚ್‌.ಕೆ.ಕುಮಾರಸ್ವಾಮಿ

ಬೆಂಗಳೂರು:
ಕಾಂಗ್ರೆಸ್‌ ನೆರವು ಪಡೆದು ಎಚ್‌.ಡಿ.ದೇವೇಗೌಡರನ್ನು ರಾಜ್ಯಸಭೆ ಚುನಾವಣೆ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ನಿರ್ಧರಿಸಲಾಗಿದೆ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಕೆ.ಕುಮಾರಸ್ವಾಮಿ ತಿಳಿಸಿದರು.
 ಜೆಡಿಎಸ್‌ ಶಾಸಕಾಂಗ ಪಕ್ಷದ ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಇಂದಿನ ಸಂಕಷ್ಟದ ಸ್ಥಿತಿಯಲ್ಲಿ ದೇಶಕ್ಕೆ ದೇವೇಗೌಡ ಅವರಂತಹ ಅವಶ್ಯಕತೆ ಇದೆ. ನಾಲ್ಕನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಂಬಂಧ ಕಾಂಗ್ರೆಸ್‌ ಪಕ್ಷ ನಮ್ಮ ಜತೆ ಚರ್ಚೆ ನಡೆಸಿಲ್ಲ. ದೇವೇಗೌಡರಿಗೆ ಎಲ್ಲ ಪಕ್ಷಗಳೂ ಬೆಂಬಲಿಸುತ್ತವೆ’ ಎಂಬುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
 ರಾಜ್ಯಸಭೆಗೆ ಆಯ್ಕೆ ಆಗಲು ಮೊದಲ ಪ್ರಾಶಸ್ತ್ಯ ದ ಮತಗಳೇ 48 ಬೇಕು. ಜೆಡಿಎಸ್ ಬಳಿ 34 ಮತಗಳಿವೆ. ಇನ್ನು 14 ಮತಗಳು ಕೊರತೆಯಾಗಲಿದ್ದು, ದೇವೇಗೌಡರು ಸ್ಪರ್ಧೆ ಮಾಡಿದರೆ ಈ ಮತಗಳನ್ನು ಕಾಂಗ್ರೆಸ್​ ನೀಡುವ ಸಾಧ್ಯತೆ ಇದೆ.