Saturday, 26th October 2024

ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೆ ಆಯುರ್ವೇದ ಸಲಹೆ

ಬೆಂಗಳೂರು:
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಹಾಗೂ ಕೋವಿಡ್‌–19 ವಿರುದ್ಧ ಹೋರಾಡಲು ಅನುಕೂಲವಾಗುವ ನಿಟ್ಟಿನಲ್ಲಿ ಆಯುಷ್‌ ಸಚಿವಾಲಯ ಕೆಲವೊಂದು ಮಾರ್ಗಸೂಚಿಗಳನ್ನು ಪಾಲಿಸುವಂತೆ ಸಲಹೆ ನೀಡಿದೆ.
ಮಂಗಳವಾರ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿಯವರು ಕೋವಿಡ್‌–19 ವಿರುದ್ಧದ ಹೋರಾಟವನ್ನು ಮುಂದುವರಿಸುವಂತೆ ಜನತೆಗೆ ಮನವಿ ಮಾಡಿದ್ದರು.
ನಮ್ಮ ದೈನಂದಿನ ಚಟುವಟಿಕೆಗಳೊಂದಿಗೆ ಆರೋಗ್ಯ, ಯೋಗಕ್ಷೇಮ ಸುಧಾರಿಸುವುದರ ಜೊತೆಗೆ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಆಯುಷ್‌ ಸಚಿವಾಲಯ ಸೂಚಿಸಿರುವ ಮಾರ್ಗಸೂಚಿಗಳು ಇಲ್ಲಿವೆ.
*ಪ್ರತಿನಿತ್ಯ ನಿಯಮಿತವಾಗಿ ಬಿಸಿ ನೀರು ಕುಡಿಯುವುದು
* ಪ್ರತಿದಿನ ಕನಿಷ್ಠ 30 ನಿಮಿಷಗಳ ಕಾಲ ಯೋಗಾಸನ ಮತ್ತು ಪ್ರಾಣಾಯಾಮ ಸೇರಿದಂತೆ ಧ್ಯಾನ ಮಾಡಿ.
* ಅಡುಗೆಯಲ್ಲಿ ಅರಶಿನ, ಜೀರಿಗೆ, ಕೊತ್ತಂಬರಿ ಮತ್ತು ಬೆಳ್ಳುಳ್ಳಿಯನ್ನು ಬಳಸುವುದು.
 * ಪ್ರತಿದಿನ ಬೆಳಿಗ್ಗೆ ಒಂದು ಚಮಚ ಚ್ಯವನ್‌ಪ್ರಾಶ್ ಸೇವಿಸುವುದು.
* ತುಳಸಿ, ಡಾಲ್ಚಿನಿ, ಕರಿಮೆಣಸು, ಒಣಶುಂಠಿ ಹಾಗೂ ಒಣ ದ್ರಾಕ್ಷಿಯನ್ನು ಸೇರಿಸಿ ಕಷಾಯ ತಯಾರಿಸಿ ದಿನಕ್ಕೆ ಒಂದು ಅಥವಾ ಎರಡು ಬಾರಿ ಕುಡಿಯುವುದು (ಅಗತ್ಯವಿದ್ದಲ್ಲಿ ಬೆಲ್ಲ‌/ ಲಿಂಬೆರಸ ಬೆರಸುವುದು)
* ಬಿಸಿ ಹಾಲಿನೊಂದಿಗೆ ಅರ್ಧ ಚಮಚ ಅರಿಶಿನ ಪುಡಿ ಬೇರೆಸಿ ಸೇವಿಸುವುದು
  1. ಆಯುರ್ವೇದ ಸಲಹೆಗಳು
*ಎಳ್ಳೆಣ್ಣೆ, ಕೊಬ್ಬರಿ ಎಣ್ಣೆ ಅಥವಾ ತುಪ್ಪವನ್ನು ದಿನಕ್ಕೆರಡು ಬಾರಿ ಮೂಗಿನೊಳಗೆ ಸವರಿಕೊಳ್ಳುವುದು.
* ಒಂದು ಚಮಚ ಎಳ್ಳೆಣ್ಣೆ ಅಥವಾ ತೆಂಗಿನ ಎಣ್ಣೆಯನ್ನು 2ರಿಂದ 3 ನಿಮಷ ಬಾಯಲ್ಲಿಟ್ಟುಕೊಂಡು ತಿರುಗಾಡಿಸಿ ಉಗುಳಬೇಕು. ಬಳಿಕ ಬಿಸಿ ನೀರಿನಿಂದ ಮುಕ್ಕಳಿಸಬೇಕು.
ಒಣ ಕೆಮ್ಮು ಹಾಗೂ ಗಂಟಲು ಕೆರೆತ
*  ಪುದೀನ ಎಲೆ ಅಥವಾ ಓಮದಕಾಳುಗಳನ್ನು ಕುಡಿಯುವ ನೀರಿನಲ್ಲಿ ಹಾಕಿ ಹಬೆ(ಆವಿ)ಯನ್ನು ದಿನಕ್ಕೆ ಒಂದು ಬಾರಿ ತೆಗೆದುಕೊಳ್ಳವುದು.
* ಲವಂಗದ ಪುಡಿಯನ್ನು ಕಲ್ಲುಸಕ್ಕರೆ ಅಥವಾ ಜೇನು ತುಪ್ಪದೊಂದಿಗೆ ಸೇರಿಸಿ ದಿನಕ್ಕೆ 2–3 ಬಾರಿ ಸೇವಿಸುವುದು
ಈ ವಿಧಾನಗಳನ್ನು ರೋಗದ ಲಕ್ಷಣಗಳು ಕಡಿಮೆ ಇದ್ದಾಗ ಅನುಸರಿಸಿ ಹಾಗೇ ಮುಂದುವರಿದಲ್ಲಿ ವೈದ್ಯರನ್ನು ಸಂಪರ್ಕಿಸಿ
ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕರ ಆಯುಷ್ ಇಲಾಖೆ ಮಾರ್ಗಸೂಚಿಆರೋಗ್ಯ ಸುಧಾರಣೆಗೆ ಕ್ರಮ ಅನುಸರಿಸಲು ಸೂಚನೆ ನೀಡಿದೆ.