Saturday, 14th December 2024

ಲಾಕ್ ಡೌನ್ ಪಾಸ್ ದುರ್ಬಳಕೆ ವಿರುದ್ಧ ಕ್ರಿಮಿನಲ್ ಕೇಸ್

ವಿಶ್ವವಾಣಿ ಸುದ್ದಿಮನೆ ಬೆಂಗಳೂರು:

ಸಾರ್ವಜನಿಕರಿಗೆ ತುರ್ತು‌ ಸಂದರ್ಭದಲ್ಲಿ ಅನುಕೂಲವಾಗಲಿ ಎಂದು ಪೊಲೀಸ್​ ಇಲಾಖೆ ಪಾಸ್​ಗಳನ್ನು ವಿತರಿಸಿದೆ. ಆದರೆ, ಕೆಲ ಕಡೆ ಪೊಲೀಸರು ಕೊಟ್ಟ ಪಾಸ್​ಗಳನ್ನೇ ನಕಲು ಮಾಡಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಪೊಲೀಸ್​ ಇಲಾಖೆ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ.

ಈ ಬಗ್ಗೆ ಟ್ವೀಟ್​ ಮಾಡಿ ಮಾಹಿತಿ ನೀಡಿರುವ ಐಜಿಪಿ ಹೇಮಂತ್ ನಿಂಬಾಳ್ಕರ್, ಬೆಂಗಳೂರು ಪೊಲೀಸರು ಅತ್ಯವಶ್ಯಕ ಹಾಗೂ ತ್ವರಿತ ಸೇವೆ ಸರಾಗವಾಗಿ ಸಾಗಲು ಪಾಸ್​ಗಳನ್ನು ನೀಡಿದ್ದಾರೆ. ಸದ್ಯಕ್ಕೆ ಈ ಪಾಸ್​ಗಳ ಪರೀಕ್ಷೆ ಆರಂಭವಾಗಿದೆ. ಒಂದು ವೇಳೆ ನೀವೇನಾದರೂ ನಕಲಿ ಪಾಸ್​ಗಳನ್ನು ಬಳಸುತ್ತಿರುವಿರಾದರೆ, ಭಾರತೀಯ ದಂಡ ಸಂಹಿತೆಯ ಸೆಕ್ಷನ್​​ಗಳಾದ 420, 465, 468, 471 & NDMA ಕಾಯಿದೆಗಳನ್ನು ಗೂಗಲ್​ ಮಾಡುವುದು ಒಳಿತು ಎಂದು ಎಚ್ಚರಿಕೆ ನೀಡಿದ್ದಾರೆ.