Monday, 25th November 2024

ಲೋಕಕಂಟಕ ಕರೋನಾಗೆ 3 ಲಕ್ಷ ಮಂದಿ ಸಾವು

ಮಾಸ್ಕೋ:

ಮಹಾಮಾರಿ  ಕರೋನಾ ಇಡೀ ಜಗತ್ತಿಗೆ ಪೆಡಂಭೂತವಾಗಿ ಪರಿಣಮಿಸಿದೆ. ವೈರಸ್ ಚಕ್ರವ್ಯೂಹದಲ್ಲಿ ಭಯಭೀತಿಯ ವಾತಾವರಣ ಸೃಷ್ಟಿಯಾಗಿರುವಾಗಲೇ ಸೋಂಕು ಮತ್ತು ಸಾವು ಪ್ರಕರಣಗಳ ಸಂಖ್ಯೆಯೂ ಆತಂಕಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿದೆ.

ಪ್ರಪಂಚದಾದ್ಯಂತ ಈವರೆಗೆ 2.98,207 ಲಕ್ಷ ಜನರ ಸಾವು ಮತ್ತು 44,30,806 ಲಕ್ಷ ಸೋಂಕು ಪ್ರಕರಣಗಳಾಗಿವೆ. ವಿಶ್ವವ್ಯಾಪಿ ಸಾವಿನ ಸಂಖ್ಯೆ 3 ಲಕ್ಷಕ್ಕೇರುವ ಆತಂಕವಿರುವಾಗಲೇ, ಸುಮಾರು 16.62 ಲಕ್ಷಕ್ಕಿಿಂತಲೂ ಅಧಿಕ ಮಂದಿ ಸಾಂಕ್ರಾಮಿಕ ರೋಗಗಳು ಚೇತರಿಸಿಕೊಂಡು ಗುಣಮುಖರಾಗಿರುವುದು ಸಮಾಧಾನಕರ ಸಂಗತಿಯಾಗಿದೆ.

ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಇಡೀ ಜಗತ್ತನಾದ್ಯಂತ ಅಪಾರ ಸಾವು-ನೋವು ಮತ್ತು ಭಾರೀ ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಿರುವ ವಿನಾಶಕಾರಿ ಕರೋನಾ ವೈರಸ್ ದಾಳಿಯಿಂದ ಎಲ್ಲ ರಾಷ್ಟ್ರಗಳು ಕಂಗೆಟ್ಟು ಅಸಹಾಯಕವಾಗಿವೆ.. ಇದೇ ಪರಿಸ್ಥಿತಿ ಮುಂದುವರಿದಲ್ಲಿ  ಶುಕ್ರವಾರ  ವೇಳೆಗೆ ಸಾಂಪ್ರಾಮಿಕ ರೋಗ ಪೀಡಿತರ ಸಂಖ್ಯೆ 47 ಲಕ್ಷ ದಾಟುವ ಆತಂಕವಿದೆ.

ಅಮೆರಿಕ, ಸ್ಪೇನ್, ಇಂಗ್ಲೆೆಂಡ್, ರಷ್ಯಾ ಮತ್ತು ಇಟಲಿ  ಅತಿ ಹೆಚ್ಚು ಸಾವು ಮತ್ತು ಸೋಂಕು ಸಂಭವಿಸಿದ ವಿಶ್ವದ ಟಾಪ್ ಫೈವ್ ದೇಶಗಳಾಗಿವೆ. ಜಗತ್ತಿನ 250ಕ್ಕೂ ಹೆಚ್ಚು ದೇಶಗಳು ಸತತ ಐದು ತಿಂಗಳುಗಳಿಂದ ಕರೋನಾ ನಿಗ್ರಹಕ್ಕಾಗಿ ನಿರಂತರ ಹೋರಾಟ ಮುಂದುವರಿಸಿದ್ದರೂ ಹೆಮ್ಮಾರಿ ನಿಯಂತ್ರಣ ಸಾಧ್ಯವಾಗದಿರುವುದು ಭಾರೀ ಕಳವಳಕಾರಿಯಾಗಿದೆ.

ಇನ್ನೊೊಂದೆಡೆ ಈ ಮಹಾಮಾರಿಯನ್ನು ನಿಯಂತ್ರಿಸುವುದು ಕಷ್ಟಸಾಧ್ಯ ಮತ್ತು ಕರೋನಾ ಕಾಟ ಸದ್ಯಕ್ಕೆ ನಿಲ್ಲುವ ಲಕ್ಷಣಗಳಿಲ್ಲ. ಇದು ದೀರ್ಘ ಕಾಲ ಮುಂದುವರಿಯುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿರುವುದು ಜಗತ್ತಿನ ಜನರನ್ನು ಮತ್ತಷ್ಟು ಭಯಭೀತಗೊಳಿಸಿದೆ.