Thursday, 12th December 2024

ವಿಕ್ಟೋರಿಯಾದಲ್ಲಿ ಪ್ಲಾಸ್ಮಾ ಥೆರಫಿಗೆ ಮತ್ತೊಂದು ಬಲಿ!

ವಿಶ್ವವಾಣಿ‌ ಸುದ್ದಿಮನೆ
ಬೆಂಗಳೂರು:
ವಿಕ್ಟೋರಿಯಾದಲ್ಲಿ ಪ್ಲಾಸ್ಮಾ ಚಿಕಿತ್ಸೆಗೆ ಒಳಪಟ್ಟ ಕರೋನಾ ಸೋಂಕಿತನು ಮೃತಪಟ್ಟಿದ್ದಾನೆ. ಚಿಕಿತ್ಸೆ ಫಲಕಾರಿಯಾಗದೆ ಮರಣಹೊಂದಿದ ಎರಡನೇ ಪ್ರಕರಣ ಇದಾಗಿದೆ.
ಕರೋನಾ ಸೋಂಕಿಗೆ ಒಳಗಾಗಿದ್ದ 58 ವರ್ಷದ ಪುರುಷ ತೀವ್ರ ತೆರೆನಾದ ಉಸಿರಾಟದ ತೊಂದರೆ ಸೇರಿದಂತೆ ಹಲವು ರೋಗಗಳಿಂದ ಬಳಲುತ್ತಿದ್ದನು. ವಿಕ್ಟೋರಿಯಾದಲ್ಲಿ ದಾಖಲಾದ ಏಳು ದಿನಗಳಲ್ಲಿ ಈತನಿಗೆ ಪ್ಲಾಸ್ಮಾ ಥೆರಪಿ ಚಿಕಿತ್ಸೆ ಮಾಡಲಾಗಿತ್ತು. ಬಳಿಕ ಆರೋಗ್ಯದಲ್ಲಿ ಏರುಪೇರಾಗಿ ಅಸು ನೀಗಿದ್ದಾರೆ.
ರಾಜ್ಯದಲ್ಲಿ ಪ್ಲಾಸ್ಮಾ ಚಿಕಿತ್ಸೆಗೆ ಒಳಗಾಗಿ ಸಾವನಪ್ಪಿರುವ ಎರಡು ಪ್ರಕರಣಗಳು ನಡೆದಿವೆ. ಮೊದಲನೆಯ ಪ್ರಕರಣ 60 ವರ್ಷದ ವ್ಯಕ್ತಿ ಮೇ 14 ರಂದು ಮೃತಪಟ್ಟಿದ್ದರು. ಈ ವ್ಯಕ್ತಿಗೆ ಮಧುಮೇಹ, ಅಧಿಕ ರಕ್ತದೊತ್ತಡ, ನ್ಯುಮೋನಿಯಾ ಇತ್ತು.
ಇಲ್ಲಿಯವರೆಗೆ, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಂಪೂರ್ಣವಾಗಿ 5 ರೋಗಿಗಳಿಗೆ ಪ್ಲಾಸ್ಮಾ ಚಿಕಿತ್ಸೆಯನ್ನು ನೀಡಲಾಗಿದೆ. ಅದರಲ್ಲಿ 2 ಮಂದಿ ತೀರಿಕೊಂಡಿದ್ದಾರೆ. 1 ರೋಗಿಯು ಯಶಸ್ವಿಯಾಗಿ ಚೇತರಿಸಿಕೊಂಡಿದ್ದು ಬಿಡುಗಡೆ ಮಾಡಲಾಗಿದೆ. ಇತರ 2 ರೋಗಿಗಳು  ಪ್ಲಾಸ್ಮಾ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.
ಜೂನ್ 2 ರಂದು, ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ 65 ವರ್ಷ ವಯಸ್ಸಿನವನಿಗೆ ಪ್ಲಾಸ್ಮಾ ಚಿಕಿತ್ಸೆಯಿಂದ ಯಶಸ್ವಿಯಾಗಿ ಚಿಕಿತ್ಸೆ ನೀಡಿದೆ ಎಂದು ಹೇಳಿದರು.