Thursday, 12th December 2024

ವಿಜಯಪುರದಲ್ಲಿ ಮತ್ತೆರಡು ಪ್ರಕರಣ ಪತ್ತೆ

ವಿಶ್ವವಾಣಿ ಸುದ್ದಿಮನೆ

ವಿಜಯಪುರ :

ಬರ ಪೀಡಿತ ಜಿಲ್ಲೆಯಲ್ಲಿ ಕರೋನಾ ವೈರಸ್ ಅಟ್ಟಹಾಸ ಮುಂದುವರೆದಿದ್ದು, ಇಂದು ಮತ್ತೆ ೨ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಮೃತ ವ್ಯಕ್ತಿ ಸೇರಿದಂತೆ ಒಟ್ಟು ೯ ಜನರಿಗೆ ಸೊಂಕು ತಗುಲಿದಂತಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ತಿಳಿಸಿದ್ದಾರೆ.

ಇಂದು ೨೫ ವರ್ಷದ ಪುರುಷ ಹಾಗೂ ೩೮ ವರ್ಷದ ಮಹಿಳೆಗೆ ಸೊಂಕು ತಗುಲಿರುವದು ದೃಡಪಟ್ಟಿದೆ‌ ಈ ಇಬ್ಬರು ಸೊಂಕಿತರು ಕಳೆದ ಏ. ೧೨ ರಂದು ಕರೋನಾ ಸೊಂಕಿನಿಂದ ಮೃತಪಟ್ಟ ವೃದ್ದನ ಸಂಬಂಧಿಕರು ಎನ್ನಲಾಗಿದೆ.

ನಗರದಲ್ಲೆ ಕಂಡುಬಂದ ಈ ಬೆಳವಣಿಗೆಯಿಂದಾಗಿ ಇಡೀ ಜಿಲ್ಲೆಯ ಜನರು ಅಕ್ಷರಶಃ ನಡುಗಿಹೋಗಿದ್ದಾರೆ. ಕಳೆದ ಏ.೧೨ ರಂದು ೬ ಪ್ರಕರಣ ಪತ್ತೆಯಾದರೆ, ಏ.೧೪ ರಂದು ೧ ಪ್ರಕರಣ ಪತ್ತೆಯಾದ ಬೆನ್ನಲ್ಲೆ ಇಂದು ಮತ್ತೆ ೨ ಪ್ರಕರಣ ಬೆಳಕಿಗೆ ಬಂದಿರುವ ಮೂಲಕ ಒಟ್ಟು ೯ ಜನರಿಗೆ ಸೊಂಕು ತಗುಲಿದಂತಾಗಿದೆ. ಈ ಪೈಕಿ ಪ್ರಥಮ ಸೊಂಕಿತೆ ಪತಿ ಇದೇ ಸೊಂಕಿನಿಂದಲೆ ಏ.೧೨ ರಂದು ರಾತ್ರಿ ಪರೀಕ್ಷಾ ವರದಿ ತಿಳಿಯುವ ಮುನ್ನವೇ ಮೃತಪಟ್ಟಿದ್ದ, ನಂತರ ಸೊಂಕು ತಗುಲಿದ್ದು ಧೃಡವಾದ ಬಳಿಕ ಜಿಲ್ಲೆಯ ಸೊಂಕಿತರ ಸಂಖ್ಯೆ ೭ಕ್ಕೆ ಏರಿತ್ತು. ಇನ್ನಷ್ಟು ಜನರ ಪರೀಕ್ಷಾ ವರದಿ ಹೊರ ಬರಬೇಕಿದೆ.