Sunday, 15th December 2024

ವಿಜಯಪುರದಲ್ಲಿ ೪೪ಕ್ಕೆ ಏರಿದ ಸೊಂಕಿತರ ಸಂಖ್ಯೆ

ವಿಜಯಪುರ :

ಜಿಲ್ಲೆಯಲ್ಲಿ ಶುಕ್ರವಾರದಂದು ಮತ್ತೊಬ್ಬ ಕರೋನಾ ಸೊಂಕಿತ ವ್ಯಕ್ತಿ ಪತ್ತೆಯಾಗಿದ್ದಾನೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ತಿಳಿಸಿದ್ದಾರೆ.

೫೪ ವರ್ಷದ ಪುರುಷನಿಗೆ ಸೊಂಕು ಪತ್ತೆಯಾಗಿದೆ. ಈತನಿಗೆ ಸೊಂಕಿತನ ಸಂಖ್ಯೆ ೫೧೦ ಈತನಿಂದ ಸೊಂಕು ತಗುಲಿರುವದು ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ ಒಟ್ಟು ೪೪ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.