ಕಾನ್ಪುರ್:
ಕರೋನಾ ಚಿಕಿತ್ಸೆೆಗಾಗಿ ಕೈಗೆಟುಕುವ ದರದ ವೆಂಟಿಲೇಟರ್‌ಗಳ ಅಭಿವೃದ್ದಿಗೆ ಉತ್ತೇಜನ ನೀಡುತ್ತಿರುವ ರಕ್ಷಣಾ ಸಾರ್ವಜನಿಕ ವಲಯದ ಭಾರತ್ ಡೈನಾಂಮಿಕ್‌ಸ್ ಲಿಮಿಟೆಡ್, ಕಾನ್ಪುರದ ನೊಕಾ ರೊಬೋಟಿಕ್‌ಸ್ ನವೋದ್ಯಮ ಅಭಿವೃದ್ದಿ ಪಡಿಸಿರುವ ಭಾರೀ ಪ್ರಮಾಣದ ವೆಂಟಿಲೇಟರ್‌ಗಳ ಉತ್ಪಾದನೆಗೆ ಮುಂದಾಗಿದೆ.
ಈ ಕುರಿತು ಒಪ್ಪಂದಕ್ಕೆ ಇತ್ತೀಚೆಗೆ ಬಿಡಿಎಲ್, ಐಐಟಿ ಕಾನ್ಪುರದ ನವೋದ್ಯಮವಾದ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಆವಿಷ್ಕಾರ ಮತ್ತು ಸಂಶೋಧನೆ ಹಾಗೂ ನೋಕಾ ರೊಬೊಟಿಕ್‌ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆೆಗಳು ಸಹಿ ಹಾಕಿವೆ.
ಕೈಗೆಟುಕುವ ವೆಂಟಿಲೇಟರ್‌ಗಳನ್ನು ಅಭಿವೃದ್ದಿಪಟಿಸುವ ನಮ್ಮ ಯೋಜನೆಯು ಬಲಗೊಳ್ಳುತ್ತ ಸಾಗಿದೆ.
ಕೈಗೆಟುಕುವ ವೆಂಟಿಲೇಟರ್‌ಗಳನ್ನು ಅಭಿವೃದ್ದಿಪಟಿಸುವ ನಮ್ಮ ಯೋಜನೆಯು ಬಲಗೊಳ್ಳುತ್ತ ಸಾಗಿದೆ.
ಇದೀಗ ಭಾರತ್ ಡೈನಾಮಿಕ್‌ಸ್ ಸಂಸ್ಥೆ ನಮಗೆ ಬೆಂಬಲ ನೀಡುತ್ತಿರುವುದರಿಂದ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಈ ಮಹತ್ವದ ಸಾಧನವನ್ನು ಮೇಕ್ ಇನ್ ಇಂಡಿಯಾ ಉತ್ಪನ್ನವಾಗಿ ವ್ಯಾಪಕವಾಗಿ ಲಭ್ಯವಾಗುವಂತೆ ಮಾಡಲು ಸಾಧ್ಯವಾಗುತ್ತದೆ ಎಂದು ಐಐಟಿ ಕಾನ್ಪುರ ನಿರ್ದೇಶಕ ಪ್ರೊ.ಅಭಯ್ ಕರಂಡಿಕರ್ ತಿಳಿಸಿದ್ದಾರೆ.