Monday, 28th October 2024

ವೈದ್ಯ ಸಲಕರಣೆ ಖರೀದಿ: ಅಧಿಕಾರಿಗಳಿಗೆ ಆತಂಕ, ಸಚಿವರು ಮೌನ

ವಿಶ್ವವಾಣಿ‌ ಸುದ್ದಿಮನೆ
ಬೆಂಗಳೂರು:
ಔಷಧ ಹಾಗೂ ವೈದ್ಯ  ಸಲಕರಣೆಗಳ ಖರೀದಿ ಅಕ್ರಮ ಆರೋಪದ‌ ವಿಚಾರ ತಾರಕಕ್ಕೇರಿದ್ದು, ಅಧಿಕಾರಿಗಳು ಸುಳ್ಳು ದಾಖಲೆಗಳನ್ನು ಕ್ರಿಮಿನಲ್ ಮೊಕದ್ದಮೆ ಹೂಡಲು ಕಾಂಗ್ರೆಸ್ ಸಿದ್ಧವಾಗಿದೆ.
 ಈಗಾಗಳೆ ಕರ್ನಾಟಕ ರಾಷ್ಟ್ರ ಸಮಿತಿಯ ಸಿ.ಎನ್. ದೀಪಕ್ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್ ನಿರ್ದೇಶನದ ಅನ್ವಯ ವಿಧಾನ ಸಭೆ ಹಂಗಾಮಿ ಕಾರ್ಯದರ್ಶಿ ವಿಶಾಲಾಕ್ಷಿ ಅವರು ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ವರದಿ ನೀಡಲು ಸೂಚಿಸಿದ್ದಾರೆ.
ಈಗಾಗಲೇ ಕಾಂಗ್ರೆಸ್  ಬಳಿ ಪಿಪಿಇ ಕಿಟ್ ಹಾಗೂ ವೈದ್ಯ ಸಲಕರಣೆ ಖರೀದಿಯಲ್ಲಿನ ಅಕ್ರಮದ ಕುರಿತು ಸಂಗ್ರಹಿಸಿರುವ ಕುರಿತು ಮಾಹಿತಿ ಮೂಲಗಳು ತಿಳಿಸಿವೆ. ಸರಕಾರ ವರದಿ ನೀಡಿದ ಬಳಿಕ ಇಲ್ಲವೆ ಸಭೆ ಕರೆದು ದಾಖಲೆಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ.
ಸರಕಾರದ ಬೊಕ್ಕಸಕ್ಕೆ ನಷ್ಟವಾಗಿರುವ ಕುರಿತು ಕೇಳುವ ಅಧಿಕಾರ ಸಾರ್ವಜನಿಕ ಲೆಕ್ಕಪತ್ರ ಸಮಿತಿಗಿದೆ ಎಂಬುದು ಕಾಂಗ್ರೆಸ್ ನ ವಾದ. ಈ ಸಮಿತಿಯಲ್ಲಿ ಸರ್ವ ಪಕ್ಷದ ಹಿರಿಯ ಸದಸ್ಯರು ಇದ್ದು, ಹಗರಣ ಕುರಿತು ಸರಕಾರ ನಿಲುವು ಸೂಚಿಸುವ ತನಕ ಕಾಂಗ್ರೆಸ್ ಕೈ ಬಿಡದಿರುವ ತೀರ್ಮಾನಕ್ಕೆ ಬಂದಿದೆ.
ವಿಧಾನ ಮಂಡಲದ ನಿಯಮ 264 (1) ಪ್ರಕಾರ ಖರ್ಚಿಗೆ ಸಂಬಂಧಿಸಿದಂತೆ ಎಲ್ಲ ಇಲಾಖೆ ಕಾರ್ಯದರ್ಶಿಗಳನ್ನು ಕರೆಸಿ ಅವರಿಂದ ಸಾಕ್ಷಿ ಹೇಳಿಸುವ ಅಧಿಕಾರ ಸಮಿತಿಗೆ ಇದೆ. ಅಧಿಕಾರಿಗಳು ಸುಳ್ಳು ಮಾಹಿತಿ ನೀಡಿದರೆ ಅವರನ್ನು ಸದನದಲ್ಲಿ ಕರೆಯಿಸಿ ಛೀಮಾರಿ ಹಾಕುವ ಅಥವಾ ಕ್ರಿಮಿನಲ್ ಮೊಕದ್ದಮೆ ಹೂಡುವ ಸಾಧ್ಯತೆ ಇದೆ.
ಅಕ್ರಮ ಕುರಿತು ಸಚಿವರು ಮೌನ
ಔಷಧ ಖರೀದಿಯಲ್ಲಿ ನಡೆದಿರುವ ಅಕ್ರಮ ಕುರಿತು ಆರೋಗ್ಯ ಅಥವಾ ವೈದ್ಯಕೀಯ ಶಿಕ್ಷ ಇಲಾಖೆ ಸಚಿವರು ಯಾವುದೇ ಚಕಾರ ಎತ್ತುತ್ತಿಲ್ಲ. ತನಿಖೆಗೆ ಇಲ್ಲವೇ ಅಕ್ರಮ ಕುರಿತು ನಡೆದಿರುವ ಸತ್ಯಾಸತ್ಯತೆ ಕುರಿತು ಮಾಹಿತಿ ಪಡೆದಿಲ್ಲ. ಕರೋನಾ ನೆಪದಲ್ಲಿ ನಮಗೂ ಇದಕ್ಕೂ ಸಂಬಂಧ ಇಲ್ಲದಂತಿದ್ದಾರೆ‌. ಔಷಧ ಖರೀದಿಯಲ್ಲಿ ಕಮೀಷನ್ ಪಡೆದಿರುವ ಅಧಿಕಾರಿಗಳ ವಿರುದ್ಧ ಯಾವುದೇ  ಕ್ರಮಕ್ಕೆ ಮುಂದಾಗಿಲ್ಲ‌.
ಅಧಿಕಾರಿಗಳ ಎತ್ತಂಗಡಿಗೆ ಚಿಂತನೆ?
ಕರ್ನಾಟಕ ರಾಜ್ಯ ಡ್ರಗ್ಸ್ ಲಾಜಿಸ್ಟಿಕ್ ಆಂಡ್ ವೇರ್ ಹೌಸ್ ಸೊಸೈಟಿಯಲ್ಲಿ ಇತ್ತೀಚಿಗೆ ನಡೆಯುತ್ತಿರುವ ಅಕ್ರಮ ಆರೋಪಗಳು ಕೇಳಿ ಬರುತ್ತಿದೆ. ಆದ್ದರಿಂದ ಇಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳನ್ನು ಎತ್ತಂಗಡಿ ಮಾಡಲು ಸರಕಾರ ಮುಂದಾಗಿದೆ‌.