Monday, 25th November 2024

ಶಿವಾಜಿನಗರದಲ್ಲಿ 30 ಕ್ಕೇರಿದ ಕರೋನಾ ಸೋಂಕಿತರ ಸಂಖ್ಯೆ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು

ಶಿವಾಜಿನಗರದಲ್ಲಿ ಕರೋನಾ ಮಹಾಮಾರಿ ಅಟ್ಟಹಾಸ ಮುಂದುವರಿದಿದೆ. ದಿನೇ ದಿನೇ ಶಿವಾಜಿನಗರದಲ್ಲಿ ಕರೋನಾ ಸೋಂಕಿತರ ಸಂಖ್ಯೆ ದ್ವಿಗುಣಗೊಳ್ಳುತ್ತಲೇ ಇರುವುದು ಬಿಬಿಎಂಪಿಯ ನಿದ್ದೆಗೆಡಿಸಿದೆ.

ಶುಕ್ರವಾರವಷ್ಟೇ ಚಾಂದಿನಿ ಚೌಕ್ ಸುತ್ತಮುತ್ತಲ ಪ್ರದೇಶಗಳ 11 ಮಂದಿಗೆ ಕರೋನಾ ಸೋಂಕು ತಗುಲಿರುವುದು ದೃಢಪಟ್ಟ ಬೆನ್ನಲ್ಲೇ ಮತ್ತೆ ಅಲ್ಲಿ 14 ಹೊಸ ಪ್ರಕರಣಗಳು ಪತ್ತೆೆಯಾಗಿವೆ. ಶಿವಾಜಿನಗರಕ್ಕೆ ಕಂಟಕನಾಗಿದ್ದ ಹೌಸ್‌ಕಿಪರ್ ಜತೆ ಸೆಕೆಂಡರಿ ಕಾಂಟ್ಯಾಕ್‌ಟ್‌ ಹೊಂದಿದ್ದ 14 ಮಂದಿಗೆ ಸೋಂಕು ತಗುಲಿದೆ.
ಶುಕ್ರವಾರದವರೆಗೆ ಶಿವಾಜಿನಗರದಲ್ಲಿ 16 ಕರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಇದೀಗ ಮತ್ತೆ 14 ಪ್ರಕರಣಗಳು ಸೇರ್ಪಡೆಯಾಗಿರುವುದರಿಂದ ಶಿವಾಜಿನಗರ ಒಂದರಲ್ಲೇ 30 ಸೋಂಕಿತರು ಇರುವುದು ದೃಢಪಟ್ಟಿದೆ. ಈ 30 ಮಂದಿಯಿಂದ ಇನ್ನೂ ಅದೆಷ್ಟು ಮಂದಿಗೆ ಸೋಂಕು ಹರಡಲಿದೆಯೋ ಎಂಬ ಆತಂಕ ಎದುರಾಗಿದೆ. ಸೋಂಕು ಹೆಚ್ಚಿರುವ ಪ್ರದೇಶವನ್ನು ಕಂಟೈನ್‌ಮೆಂಟ್ ಝೋನ್ ಆಗಿ ಪರಿವರ್ತಿಸಿ ಅಗತ್ಯ ಮುನ್ನೆಚ್ಚರಿಕೆ ಕೈಗೊಂಡಿದ್ದರೂ ಸ್ಥಳೀಯರು ಕಳ್ಳ ಮಾರ್ಗಗಳಲ್ಲಿ ಇತರ ಪ್ರದೇಶಗಳಿಗೆ ತೆರಳಿ ವಾಪಸಾಗುತ್ತಿರುವುದರಿಂದ ಅಕ್ಕಪಕ್ಕದ ಪ್ರದೇಶಗಳಿಗೂ ಸೋಂಕು ಹರಡುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಹೀಗಾಗಿ ಶಿವಾಜಿನಗರದ ಮೇಲೆ ಬಿಬಿಎಂಪಿ ಸಿಬ್ಬಂದಿ ಮತ್ತು ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ಹಲವಾರು ಶಂಕಿತರ ಸ್ವಾಬ್ ಟ್ಟ್ ನಡೆಸುತ್ತಿದ್ದಾರೆ.