Thursday, 12th December 2024

ಶುಕ್ರವಾರ 445 ಮಂದಿಗೆ ಸೋಂಕು ದೃಢ

ವಿಶ್ವವಾಣಿ‌ ಸುದ್ದಿಮನೆ
ಬೆಂಗಳೂರು:
 ಶುಕ್ರವಾರ ಒಂದೇ ದಿನ 445 ಮಂದಿಗೆ ಸೋಂಕು ದೃಢವಾಗಿದ್ದು, 10 ಮಂದಿ ಕರೋನಾ ಗೆ ಬಲಿಯಾಗಿದ್ದಾರೆ.
ಎಂದಿನಂತೆ ಬೆಂಗಳೂರಿನಲ್ಲಿ ಅತಿ ಹೆಚ್ಚು 144 ಮಂದಿಗೆ ಸೋಂಕು ಬಂದಿದೆ.  ರಾಜ್ಯದಲ್ಲಿ ಒಟ್ಟು 11,005ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ಇಂದು 246 ಮಂದಿ ಬಿಡುಗಡೆಯಾಗಿದ್ದಾರೆ. 445 ಮಂದಿಯಲ್ಲಿ 65 ಅಂತರಾಜ್ಯ ಪ್ರಯಾಣಿಕರಿದ್ದರೆ, 21 ಮಂದಿ ಅಂತರಾಷ್ಟ್ರೀಯ ಪ್ರಯಾಣಿಕರಿದ್ದಾರೆ. ಐಸಿಯುನಲ್ಲಿರುವ ರೋಗಿಗಳ ಸಂಖ್ಯೆ 178ಕ್ಕೆ ಏರಿಕೆಯಾಗಿದೆ. ಸದ್ಯ 3,905 ಸಕ್ರಿಯ ಪ್ರಕರಣಗಳಿದ್ದು 6,916 ಮಂದಿ ಬಿಡುಗಡೆಯಾಗಿದ್ದಾರೆ.
ಎಲ್ಲಿ ಎಷ್ಟು ಮಂದಿ?
ಒಟ್ಟು 445 ಮಂದಿಗೆ ಸೋಂಕು ಬಂದಿದೆ. ಬೆಂಗಳೂರು ನಗರ 144, ಬಳ್ಳಾರಿ 47, ಕಲಬುರಗಿ 42, ಕೊಪ್ಪಳ 36, ದಕ್ಷಿಣ ಕನ್ನಡ 33, ಧಾರವಾಡ 30, ರಾಯಚೂರು 14, ಗದಗ 12, ಚಾಮರಾಜನಗರ 11, ಉಡುಪಿ 9, ಯಾದಗಿರಿ 7, ಮಂಡ್ಯ 6, ಉತ್ತರ ಕನ್ನಡ 6, ಬಾಗಲಕೋಟೆ 6, ಶಿವಮೊಗ್ಗ 6, ಕೋಲಾರ 6, ಮೈಸೂರು 5, ಚಿಕ್ಕಮಗಳೂರು 4, ಕೊಡಗು 4, ಹಾಸನ 3, ಬೆಂಗಳೂರು ಗ್ರಾಮಾಂತರ 3, ವಿಜಯಪುರ 2, ತುಮಕೂರು 2, ಹಾವೇರಿ 2, ಬೀದರ್‌, ಬೆಳಗಾವಿ, ದಾವಣಗೆರೆ, ರಾಮನಗರ, ಚಿತ್ರದುರ್ಗದಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ.
 ಎಲ್ಲಿ ಎಷ್ಟು ಮಂದಿ ಬಿಡುಗಡೆ?
ಇಂದು ಒಟ್ಟು 246 ಮಂದಿ ಬಿಡುಗಡೆಯಾಗಿದ್ದಾರೆ. ಕಲಬುರಗಿ 75, ಬಳ್ಳಾರಿ 38, ದಕ್ಷಿಣ ಕನ್ನಡ 32, ಬೆಂಗಳೂರು ನಗರ 21, ಉಡುಪಿ 17, ಬಾಗಲಕೋಟೆ 13, ಧಾರವಾಡ 13, ರಾಮನಗರ 11, ದಾವಣಗೆರೆ 10, ಕೋಲಾರ 6, ಚಿಕ್ಕಬಳ್ಳಾಪುರ 5, ಶಿವಮೊಗ್ಗ 3, ಬೆಳಗಾವಿ ಮತ್ತು ಮೈಸೂರಿನಲ್ಲಿ ತಲಾ ಒಬ್ಬರು ಬಿಡುಗಡೆಯಾಗಿದ್ದಾರೆ.
————-
ಸೋಂಕಿಗೆ ಹೆದರಿ ಆತ್ಮಹತ್ಯೆ
ಕರೋನಾ ಸೋಂಕಿತ ಮಹಿಳಾ ರೋಗಿಯೊಬ್ಬರು ಸೋಂಕಿಗೆ ಹೆದರಿ ಅಸಹಜವಾಗಿ ಸಾವಿಗೀಡಾದ ಘಟನೆ ಗುರುವಾರ ರಾತ್ರಿ ಬೆಂಗಳೂರಿನ ಕೆಸಿ ಜನರಲ್ ಆಸ್ಪತ್ರೆಯಲ್ಲಿ ನಡೆದಿದೆ.
ಕರೋನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯೂ ಗುರುವಾರ ಮಧ್ಯರಾತ್ರಿ 2.30 ರ ವೇಳೆಗೆ ಆಸ್ಪತ್ರೆಯಲ್ಲಿ ಕರೋನಾ ರೋಗಿಗಳಿಗಾಗಿ ಮೀಸಲಿಟ್ಟಿದ್ದ ವಾರ್ಡ್​ನಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೂನ್ ತಿಂಗಳ 18ರಂದು ಕೊರೋನಾ ಸೋಂಕು ಕಾಣಿಸಿಕೊಂಡ ಹಿನ್ನಲೆಯಲ್ಲಿ ಕೆಸಿ ಜನರಲ್ ಆಸ್ಪತ್ರೆಗೆ ದಾಖಲಾಗಿದ್ದ 60 ವರ್ಷದ ಈ ಮಹಿಳೆಯೂ ಕುಣಿಗಲ್ ನ‌ ರಾಜಗೋಪಾಲ ನಗರದಲ್ಲಿ ವಾಸವಾಗಿದ್ದರು.
ಮಹಿಳೆಯ ಜತೆಗೆ ಮಗ, ಸೊಸೆ ಹಾಗೂ ಮೊಮ್ಮಗ ಕೂಡ ಸೋಂಕು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಇದೇ ಕಾರಣದಿಂದ ಖಿನ್ನತೆಯಿಂದ ಅಥವಾ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ. ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.