ಬೆಂಗಳೂರು:
ಕೋವಿಡ್-19 ಕರ್ತವ್ಯದ ವೇಳೆ ಮೃತಪಟ್ಟ ಸರಕಾರಿ ನೌಕರರಿಗೆ 30 ಲಕ್ಷ ರು ವಿಮಾ ಪರಿಹಾರ ನೀಡಲು ಸರಕಾರ ನಿರ್ಧರಿಸಿದೆ.
ಈ ಸಂಬಂಧ ಆದೇಶ ಹೊರಡಿಸಿರುವ ಸರಕಾರ, ಕೋವಿಡ್-19 ಕರ್ತವ್ಯದ ವೇಳೆ ಮೃತರಾಗುವ ಸರಕಾರಿ ನೌಕರರಿಗೆ 30 ಲಕ್ಷ ರು. ಪರಿಹಾರ ನೀಡಲು ತೀರ್ಮಾನಿಸಿದೆ. ಜತೆಗೆ ಕೋವಿಡ್-19 ಕೆಲಸದಲ್ಲಿ ಪಾಲ್ಗೊೊಂಡ ವೇಳೆ ಕರೋನಾ ಸೋಂಕು ತಗುಲಿದರೆ ಅವರ ಸಂಪೂರ್ಣ ಚಿಕಿತ್ಸಾಾ ವೆಚ್ಚ ಸರಕಾರವೇ ಭರಿಸುವುದಾಗಿ ತಿಳಿಸಿದೆ.
ಈ ಸಂಬಂಧ ರಾಜ್ಯ ಸರಕಾರಿ ನೌಕರರ ಸಂಘ ಸಿಎಂಗೆ ಮನವಿ ಮಾಡಿತ್ತು. ಕೋವಿಡ್ ನಿಯಂತ್ರಣಕ್ಕಾಾಗಿ ಎಲ್ಲಾ ವೃಂದದ ಸರಕಾರಿ ನೌಕರರನ್ನು ನಿಯೋಜಿಸಲಾಗುತ್ತಿಿದೆ. ಕರ್ತವ್ಯದಲ್ಲಿರುವ ನೌಕರರು ಸೋಂಕಿಗೆ ಸಿಲುಕಿ ಅಕಾಲಿಕ ಮರಣ ಹೊಂದಿದ್ದಾರೆ. ಹೀಗಾಗಿ ನೌಕರರಿಗೆ ಮತ್ತು ಅವರ ಕುಟುಂಬವರ್ಗಕ್ಕೆೆ ಮನೋಸ್ಥೈರ್ಯ ತುಂಬಿಸುವ ನಿಟ್ಟಿಿನಲ್ಲಿ ವಿಮಾ ಪರಿಹಾರ ಮೊತ್ತ ನೀಡುವಂತೆ ಮನವಿ ಮಾಡಿದ್ದರು.ನೌಕರರ ಸಂಘದ ಮನವಿಯನ್ನು ಪುರಸ್ಕರಿಸಿರುವ ಸರಕಾರ ಇದೀಗ ಕೋವಿಡ್-19 ಕರ್ತವ್ಯದಲ್ಲಿರುವ ಸರಕಾರಿ ನೌಕರರಿಗೂ ವಿಮಾ ಪರಿಹಾರ ನೀಡಲು ನಿರ್ಧರಿಸಿದೆ.