Saturday, 14th December 2024

ಸಾಮೂಹಿಕ ರಾಜೀನಾಮೆಗೆ ಮುಂದಾದ ಕರೋನಾ ವಾರಿಯರ್ಸ್

ಬೆಂಗಳೂರು:
ಕಣ್ಣಿಗೆ ಕಣ್ಣದ ವೈರಸ್ ವಿರುದ್ಧ ಪಟ ತೊಟ್ಟು ನಿಂತು ಹಗಲಿರುಳು ಅನ್ನದೇ ಹೋರಾಟ ಮಾಡುತ್ತಿರುವುದು ವೈದ್ಯಕೀಯ ಲೋಕ. ಆದರೆ ಇದೀಗ, ಕರೋನಾ ಹೋರಾಟಗಾರರ ಸಹನೆ ಕಟ್ಟೆಯೊಡೆದಿದೆ.ಇದಕ್ಕಾಗಿ, ಅವರು ಕೈಗೊಂಡಿರುವ ನಿರ್ಧಾರ ರಾಜೀನಾಮೆ.
 ಹೌದು, ಬುಧವಾರ ವೈದ್ಯರು ಸಾಮೂಹಿಕ ರಾಜಿನಾಮೆ ನೀಡಲಿದ್ದಾರೆ. ಕರೋನಾ ಹೋರಾಟದಲ್ಲಿರುವ ಗುತ್ತಿಗೆ ವೈದ್ಯರ ಸಾಮೂಹಿಕ ರಾಜಿನಾಮೆ ನಿರ್ಧಾರಿಸಿದ್ದು, ರಾಜ್ಯದ‌ 507 ಗುತ್ತಿಗೆ ವೈದ್ಯರಿಂದ ರಾಜಿನಾಮೆ ನೀಡಲಿದ್ದಾರೆ.
ಕರೋನಾ ಹೋರಾಟದಲ್ಲಿ ಹಗಲು – ರಾತ್ರಿ ದುಡಿಯತ್ತಿದ್ದು, ನಮ್ಮ ಸೇವೆ ಕಾಯಂ ಮಾಡಿ ಎನ್ನುವುದು  ಬೇಡಿಕೆ. ಹಲವು ಬಾರಿ ಆರೋಗ್ಯ ಸಚಿವರಿಗೆ ಮನವಿ ಮಾಡಿದ್ರೂ ಕ್ಯಾರೆ ಅನ್ನುತ್ತಿಲ್ಲ. ಸಿಎಂ ಯಡಿಯೂರಪ್ಪ ಅವರಿಂದಲೂ  ಭರವಸೆ ಸಿಗಲಿಲ್ಲ. ಗುತ್ತಿಗೆ ವೈದ್ಯರಿಗೆ ಸರಕಾರ  45 ಸಾವಿರ ಸಂಬಳ ನೀಡುತ್ತಿದೆ. ಕಾಯಂ ವೈದ್ಯರಿಗೆ ಸರ್ಕಾರದ ಸಂಬಳ 80 ಸಾವಿರ ರೂಪಾಯಿ ಇದೆ. ಕೋವಿಡ್ ಕಾಲದ ವೈದ್ಯರಿಗೆ ಸರಕಾರ  60 ಸಾವಿರ ರೂಪಾಯಿ ಘೋಷಿಸಿದೆ..‌ ಗುತ್ತಿಗೆ ವೈದ್ಯರು 3 ರಿಂದ 7 ವರ್ಷದವರೆಗೂ ಸೇವೆ ಸಲ್ಲಿಸುತ್ತಿದ್ದಾರೆ. ಕರ್ನಾಟಕದ ಹಳ್ಳಿ- ಹಳ್ಳಿಗಳಲ್ಲಿ ಸೇವೆ  507 ಗುತ್ತಿಗೆ ವೈದ್ಯರು,ಸಲ್ಲಿಸುತ್ತಿದ್ದಾರೆ.
 3 ವರ್ಷ ಗುತ್ತಿಗೆ ಸೇವೆ ಮಾಡಿದವರನ್ನ ಖಾಯಂ ಮಾಡಿತ್ತು.  ಕಳೆದ ಮೂರು ವರ್ಷದಿಂದ ಗುತ್ತಿಗೆ ವೈದ್ಯರಿಗೆ ಆ ಭಾಗ್ಯವೂ  ಸಿಗುತ್ತಿಲ್ಲ. ಹಳ್ಳಿಗಳಿಗೆ ಹೋಗಿ ಎನ್ನುವ ಸರಕಾರದಿಂದ ಸಮಾನ ಕೆಲಸಕ್ಕೆ ಸಮಾನ ವೇತನವಿಲ್ಲವೂ ಸಿಗುತ್ತಿಲ್ಲ ಅಂತ ಬೇಸರ ವ್ಯಕ್ತಪಡಿಸಿದ್ದಾರೆ.