Sunday, 24th November 2024

ಸಿಖ್ ವಿರೋಧಿ ಗಲಭೆ: ಸಜ್ಜನ್ ಕುಮಾರ್‌ಗೆ ಜಾಮೀನು ನೀಡಲು ಸುಪ್ರೀಂ ನಕಾರ

ದೆಹಲಿ:

1984 ಸಿಕ್ ವಿರೋಧಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಜೀವವಧಿ ಶಿಕ್ಷೆಗೆ ಗುರಿಯಾಗಿರುವ ಕಾಂಗ್ರೆಸ್ ಮಾಜಿ ಸಂಸದ ಸಜ್ಜನ್ ಕುಮಾರ್ ಅವರಿಗೆ ಅನಾರೋಗ್ಯದಿಂದಾಗಿ ಮಧ್ಯಂತರ ಜಾಮೀನು ನೀಡಲು ಬುಧವಾರ ನಿರಾಕರಿಸಿದೆ.

ಏಮ್‌ಸ್‌ ಮಂಡಳಿ ಸಲ್ಲಿಸಿದ ವೈದ್ಯಕೀಯ ವರದಿಯ ಆದಾಋದಲ್ಲಿ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ಮತ್ತು ನ್ಯಾಯ
ಮೂರ್ತಿಗಳಾದ  ಮಲ್ಹೋತ್ರಾ ಮತ್ತು ಹೃಷಿಕೇಶ ರಾಯ್ ಅವರನ್ನೊಳಗೊಂಡ ನ್ಯಾಯಪೀಠವು, ಆಸ್ಪತ್ರೆಗೆ ದಾಖಲು ಮಾಡಲು
ಯಾವುದೇ ಅಗತ್ಯವಿಲ್ಲದ್ದರಿಂದ ಜಾಮೀನು ನೀಡುವುದಿಲ್ಲ ಎಂದು ತಿಳಿಸಿದೆ.

ಮಾ.4 ರಂದು ದೇಶದ ಉನ್ನತ ನ್ಯಾಯಾಲಯವು ಕುಮಾರ್ ಅವರ ವೈದ್ಯಕೀಯ ಸ್ಥಿತಿಗೆ ಆಸ್ಪತ್ರೆಗೆ ಅಗತ್ಯವಿದೆಯೇ ಎಂದು
ನಿರ್ಧರಿಸಲು ಏಮ್‌ಸ್‌ ಮಂಡಳಿಯ ಮುಂದೆ ಹಾಜರಾಗುವಂತೆ ನಿರ್ದೇಶನ ನೀಡಿತು. ಕುಮಾರ್ ಪರ ಹಾಜರಾದ ಹಿರಿಯ ವಕೀಲ ವಿಕಾಸ್ ಸಿಂಗ್ ಅವರು ಮೂವರು ನ್ಯಾಯಾಧೀಶರ ಪೀಠದ ಮುಂದೆ, ತಮ್ಮ ಕಕ್ಷಿದಾರ ಮುಂದೆ ಜೈಲಿನಲ್ಲಿ ಸತ್ತರೆ, ಅವರ ಜೀವಾವಧಿ ಶಿಕ್ಷೆ ಸ್ವಯಂವಾಗಿ ಮರಣದಂಡನೆಯಾಗಿ ಪರಿವರ್ತನೆಯಾಗುತ್ತದೆ ಎಂದರು.

ಇದಕ್ಕೆ ವಿಡಿಯೋ ಕಾನ್ಪರೆನ್ಸಿ ಮೂಲಕ ವಿಚಾರಣೆಗಳನ್ನು ನಡೆಸುತ್ತಿರುವ ನ್ಯಾಯಪೀಠ ಕುಮಾರ್ ಅವರನ್ನು ಆಸ್ಪತ್ರೆಗೆ ಸೇರಿಸುವ ತುರ್ತು ಅವಶ್ಯಕತೆಯಿಲ್ಲದ ಕಾರಣ ಜಾಮೀನು ಅರ್ಜಿಯ ವಿಚಾರಣೆ ನಡೆಸುವುದಾಗಿ ತಿಳಿಸಿದರು.
ದೆಹಲಿ ಹೈಕೋರ್ಟ್ 2018ರ ಡಿ.17ರಂದು ಶಿಕ್ಷೆಗೊಳಗಾದ ನಂತರ ಕುಮಾರ್ ತಿಹಾರ್ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ.